ಏಮ್ಸ್ ಹೋರಾಟದಲ್ಲಿ ರಾಜಕೀಯ ವ್ಯಕ್ತಿಗಳು ಪಾಲ್ಗೊಳ್ಳದಂತೆ ಹೇಳಿಲ್ಲ- ಬಸವರಾಜ ಕಳಸ.
ಏಮ್ಸ್ ಹೋರಾಟದಲ್ಲಿ ರಾಜಕೀಯ ವ್ಯಕ್ತಿಗಳು ಪಾಲ್ಗೊಳ್ಳದಂತೆ ಹೇಳಿಲ್ಲ- ಬಸವರಾಜ ಕಳಸ. ರಾಯಚೂರು,ಮೇ.17- ಏಮ್ಸ್ ಹೋರಾಟದಲ್ಲಿ ರಾಜಕೀಯ ವ್ಯಕ್ತಿಗಳು ಪಾಲ್ಗೊಳ್ಳದಂತೆ ಹೇಳಿಲ್ಲವೆಂದು ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಮ್ಮ ಹೋರಾಟ ಯಾವುದೆ ರಾಜಕೀಯ ಪಕ್ಷಗಳಿಗೆ ಸಂಬಂಧವಿಲ್ಲ ಹಾಗು ಯಾವುದೆ ಚುನಾಯಿತ ಪ್ರತಿನಿಧಿಗಳು ತಾವು ಆಯ್ಕೆಯಾದ ಸಂಸ್ಥೆಗಳಲ್ಲಿ ಏಮ್ಸ್ ಪಡೆಯಬೇಕೆಂಬ ಕೂಗು ಮೊಳಗಿಸಲು ಹೇಳಿದ್ದೇವೆ ಹೊರತು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಡಿ ಎಂದು ಹೇಳಿಲ್ಲವೆಂದು ಸ್ಪಷ್ಟನೆ ನೀಡಿದ ಅವರು ಆರನೆ ದಿನಕ್ಕೆ ನಮ್ಮ ಹೋರಾಟ ಮುಂದುವರೆಸಿದ್ದೇವೆಂದರು. ಅಶೋಕ ಜೈನ್ ಮಾತನಾಡಿ ಏಮ್ಸ ಪಡೆಯುವುದು ನಮ್ಮ ಹಕ್ಕು ಇಲ್ಲಿ ಯಾರದೆ ವೈಯಕ್ತಿಕವಿಲ್ಲವೆಂದರು. ಜಿಲ್ಲೆಯ ಎಲ್ಲ ಶಾಸಕರು ಧ್ವನಿ ಎತ್ತಬೇಕೆಂದ ಅವರು ಏಮ್ಸ ಬಂದರೆ ನಿಮ್ಮ ಮುಂದಿನ ಪೀಳಿಗೆ ನಿಮಗೆ ಹರಿಸುತ್ತದೆ ಎಂದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಮರೇಶ್ವರ ನಾಯಕರನ್ನು ಗೆಲ್ಲಿಸಿದರೆ ಏಮ್ಸ್ ತರುವುದಾಗಿ ಶಾಸಕ ಶಿವನಗೌಡ ನಾಯಕರು ಹೇಳಿದ್ದರು ಇದೀಗ ಅವರ ಅದನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು. ಅದೆ ರೀತಿ ನಗರ ಶಾಸಕ ಡಾ.ಶಿವರಾಜ ಪಾಟೀಲರು, ಗ್ರಾಮೀಣ ಶಾಸಕರು, ಮಾನ್ವಿ ಶಾಸಕರು, ಸಿಂಧನೂರು, ಮಸ್ಕಿ, ಲಿಂಗಸ್ಗೂರು ಶಾಸಕರು ಧ್ವನಿ ಎತ್ತಬೇಕೆಂದರು. ಈ ಸಂದರ್ಭದಲ್ಲಿ ಎಸ್.ಮಾರೆಪ್ಪ ವಕೀಲ್, ಜಾನ್ ವೆಸ್ಲಿ, ಪ್ರಸಾದ ಭಂಡಾರಿ ಇದ್ದರು.
Comments
Post a Comment