ಭತ್ತಕ್ಕೆ ಪರ್ಯಾಯವಾಗಿ ಕೋಕೋ ಬೆಳೆಯನ್ನು ರೈತರು ಬೆಳೆಯಲು ಮಾಹಿತಿ ಅಭಿಯಾನ -ಮನೋಹರ ಮಸ್ಕಿ.
ಭತ್ತಕ್ಕೆ ಪರ್ಯಾಯವಾಗಿ ಕೋಕೋ ಬೆಳೆಯನ್ನು ರೈತರು ಬೆಳೆಯಲು ಮಾಹಿತಿ ಅಭಿಯಾನ -ಮನೋಹರ ಮಸ್ಕಿ. ರಾಯಚೂರು,ಮೇ.17- ಭತ್ತಕ್ಕೆ ಪರ್ಯಾಯವಾಗಿ ರೈತರು ಕೋಕೋ ಬೆಳೆ ಬೆಳೆಯಲು ನಮ್ಮ ಬ್ಯಾಂಕ್ ಮಾಹಿತಿ ಅಭಿಯಾನವನ್ನು ಕೈಗೊಂಡಿದೆ ಎಂದು ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ ಹೇಳಿದರು. ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ದಿನೆ ದಿನೆ ಭತ್ತದ ಬೆಲೆ ಕುಸಿಯುತ್ತಿದ್ದು ಅಲ್ಲದೆ ಭತ್ತದ ಮಾರುಕಟ್ಟೆ ಇಳಿಮುಖವಾಗಿದ್ದು ನೆರೆಯ ತೆಲಂಗಾಣ ,ಆಂಧ್ರದಲ್ಲಿ ಭತ್ತದ ಬಳೆ ಕ್ಷೇತ್ರ ವಿಸ್ತರಣೆಯಾಗುತ್ತಿದ್ದು ನಮ್ಮ ರಾಜ್ಯದಲ್ಲಿ ಭತ್ತ ಬೆಳೆದ ರೃತರು ನಷ್ಟ ಅನುಭವಿಸುತ್ತಿದ್ದು ಇದಕ್ಕೆ ಪರ್ಯಾಯವಾಗಿ ವಾಣಿಜ್ಯ ಮತ್ತು ಪ್ಲಾಂಟೇಷನ್ ಬೆಳೆಯಾದ ಕೋಕೋ ಬೆಳೆ ಬೆಳೆಯಲು ನಮ್ಮ ಬ್ಯಾಂಕ್ ರೈತರಿಗೆ ಆನ್ ಲೈನ್ ಮೂಲಕ ತಜ್ಞರೊಂದಿಗೆ ಸಮಾಲೋಚನೆ ಮುಖಾಂತರ ಅರಿವು ಮೂಡಿಸುವುದಲ್ಲದೆ ನೆರೆಯ ಆಂಧ್ರ ರಾಜ್ಯದ ತಣಕು ಎಂಬ ಗ್ರಾಮದಲ್ಲಿ ಸುಮಾರು ಸಾವಿರ ಎಕರೆ ವಿಸ್ತೀರ್ಣದಲ್ಲಿ ಕೋಕೋ ಬೆಳೆ ಬೆಳೆಯಲಾಗಿದ್ದು ಅಲ್ಲಿಗೆ ಆಯ್ದ ರೈತರನ್ನು ಮೇ 23 ರಂದು ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನಳ್ಳಿ, ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ ಕರೆದುಕೊಂಡು ಹೋಗಲಾಗುತ್ತದೆ ಎಂದರು. ಕೋಕೋ ಬೆಳೆಯನ್ನು ಮಿಶ್ರ ಹಾಗೂ ಪ್ರಮುಖ ಬೆಳೆಯಾಗಿ ಬೆಳೆಯಬಹುದಾಗಿದ್ದು ಉತ್ತಮ ಆದಾಯ ತರಲಿದೆ ಎಂದರು.ಇಂದು ಮಾರುಕಟ್ಟೆಯಲ್ಲಿ 180-200 ರೂ .ಪ್ರತಿ ಕೆ.ಜಿ ಗೆ ದರವಿದ್ದು ಆಹಾರ ಉದ್ಯಮ, ತ್ವಚೆ ಪೋಷಣೆ, ಇನ್ನಿತರ ಕಡೆ ಕೋಕೋ ಬಳಿಸಲಾಗುತ್ತಿದ್ದು ದೇಶದಲ್ಲಿ ಶೇ.30 ರಷ್ಟು ಮಾತ್ರ ಬೆಳೆಯಲಾಗುತ್ತದೆ ಎಂದರು. ಮೇ.19 ರಂದು ಆನ್ಲೈನ್ ಸಭೆಯಿದ್ದು ಕೋಕೋ ಬೆಳೆ ಬೆಳೆಯುವ ಆಸಕ್ತರು ಮೇ.18 ರೊಳಗೆ ಬೆಳಿಗ್ಗೆ 10 ರಿಂದ 6 ರವರೆಗೆ 18001215560 ಸಂಖೆಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ ಎಂದರು.ಈ ಸಂದರ್ಭದಲ್ಲಿ ವೆಂಕಟಕೃಷ್ಣ, ಕೃಷ್ಣ ಕಾಂತ ಇದ್ದರು.
Comments
Post a Comment