ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ ರಾಯಚೂರು,ಮಾ.2- ಒಪೆಕ್ ಆಸ್ಪತ್ರೆ ಬಲವರ್ಧನೆ ಹಾಗೂ ಹೆಚ್ಚಿನ ಚಿಕಿತ್ಸಾ ಸೌಲಭ್ಯಕ್ಕಾಗಿ ಸತ್ಯ ಸಾಯಿ ಫೌಂಡೇಶನ್ ನ ಡಾ. ಸತೀಶ ಬಾಬು ಅವರ ನೇತೃತ್ವದ ತಂಡ ಆಸ್ಪತ್ರೆಯ ಸೌಲಭ್ಯಗಳನ್ನು ಹಾಗೂ ವೈದ್ಯಕೀಯ ಸೇವೆಗಳನ್ನು ಪರಿಶೀಲಿಸಿ ಒಪೆಕ್ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದರು. ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಮನವಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಆದೇಶದ ಮೇರೆಗೆ, ರಾಯಚೂರಿನ ಒಪೆಕ್ ಆಸ್ಪತ್ರೆಗೆ ಭೇಟಿ ನೀಡಿದ ಸತ್ಯ ಸಾಯಿ ಫೌಂಡೇಶನ್ ತಂಡ, ಸರ್ಕಾರಿ ಒಪೆಕ್ ಆಸ್ಪತ್ರೆಯ ಹೆಚ್ಚಿನ ಸೌಲಭ್ಯಕ್ಕಾಗಿ ಸಾಧ್ಯಸಾಧ್ಯತೆಗಳ ಕುರಿತು ವೀಕ್ಷಿಸಿ ನಮ್ಮ ಸತ್ಯ ಸಾಯಿ ಟ್ರಸ್ಟ್ ಸರ್ಕಾರದ ಸಹಬಾಗಿತ್ವದಲ್ಲಿ ಈ ಭಾಗಕ್ಕೆ ಉನ್ನತ ಮಟ್ಟದ ವೈದ್ಯಕೀಯ ಸೇವೆ ನೀಡುವ ಉದ್ದೇಶ ನಮ್ಮದಾಗಿದೆ ಎಂದರು ಒಪೆಕ್ ಆಸ್ಪತ್ರೆಯನ್ನು ಸರ್ಕಾರಿ ಸಹಬಾಗಿತ್ವದಲ್ಲಿ ನವೀರಕರಣದ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಈ ಭೇಟಿಯಿಂದ ಆಸ್ಪತ್ರೆಯ ಪ್ರಾಥಮಿಕ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ನೀಡಲಾಗುವುದು. ಸರ್ಕಾರದ ಮಾಹಿತಿಯ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು. 1970 ರಲ್ಲಿ ಪ್ರಾರಂಭವಾದ ...
ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್ ರಾಯಚೂರು, ಮಾ.7- ಪ್ರಧಾನಿ ನರೇಂದ್ರ ಮೋದಿ ಅವರು ಮಾ.12 ರಂದು ಕಲಬುರಗಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲ್ ಸಂಚಾರಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಸಲಹಾ ಸಮತಿ ಸದಸ್ಯ ಹಾಗೂ ಸಮಾಜ ಸೇವಕ ಡಾ. ಬಾಬುರಾವ ಅವರು ತಿಳಿಸಿದ್ದಾರೆ . ಬಹು ನಿರೀಕ್ಷಿತ ವಂದೇ ಭಾರತ್ ರೈಲು ಸಂಚಾರ ಕಲ್ಯಾಣ ಕರ್ನಾಟಕ ಭಾಗದ ದಶಕಗಳ ಬೇಡಿಕೆ ಈಗ ನನಸಾಗಿದೆ. ಈ ಭಾಗದಲ್ಲಿ ವಂದೇ ಭಾರತ್ ರೈಲು ಸಂಚಾರ ಮಾಡಬೇಕು ಎಂಬುದು ಜನರ ಕೂಗಿನ ಮೇರೆಗೆ ಕೇಂದ್ರ ರೈಲ್ವೆ ಸಚಿವ ಅವರು ಅನುಮೋದನೆ ನೀಡಿ ಜನರ ಬೇಡಿಕೆ ಸ್ಪಂದಿಸಿದ್ದಾರೆ ಎಂದರು. ವಂದೇ ಭಾರತ್ ರೈಲ್ ಸಂಚಾರ ಅವಕಾಶ ಕಲ್ಪಿಸಬೇಕು ಎಂದು ನಾನು ಜನರ ಸಲಹಾ ಸೂಚನೆಯಂತೆ ಅನೇಕ ಭಾರಿ ಕೇಂದ್ರ ಸಚಿವರಿಗೆ ಮತ್ತು ಸಂಸದ ರಾಜ ಅಮರೇಶ ನಾಯಕ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದೇನೆ ಎಂದರು. ನನ್ನ ಸುದೀರ್ಘ ಪ್ರಯತ್ನದ ಫಲ ನಿರೀಕ್ಷೆಯಂತೆ ಕೊನೆಗೂ ಈ ಭಾಗದಲ್ಲಿ ವಂದೇ ಭಾರತ್ ರೈಲ್ ಸಂಚಾರ ಗ್ರೀನ್ ಸಿಗ್ನಲ್ ದೊರೆತಿದೆ. ಕಲ್ಯಾಣ ಕರ್ನಾಟಕ ಭಾಗದ ಮತ್ತು ಜಿಲ್ಲೆಯ ಜನರಿಗೆಅನುಕೂಲಕಾರವಾಗಲಿದೆ ಎಂದರು. ಬೇಡಿಕೆಗೆ ಸ್ಪಂದಿಸಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಂದೇ ಭಾರತ್ ರೈಲಿಗೆ ...
ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ ರಾಯಚೂರು,ಜೂ.3- ತರಕಾರಿ ಬೆಳೆದು ನಗರಕ್ಕೆ ಮಾರಾಟ ಮಾಡಲು ಬರುವ ರೈತರಿಗೆ ನಗರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸಾಮಾಜಿಕ ಹೋರಾಟಗಾರ ಅಂಬಾಜೀರಾವ್ ಒತ್ತಾಯಿಸಿದ್ದಾರೆ. ಪ್ರತಿನಿತ್ಯ ರಾಯಚೂರು ತಾಲೂಕು ವ್ಯಾಪ್ತಿಯ ನೂರಾರು ರೈತರು ತಮ್ಮ ಜಮೀನುಗಳಲ್ಲಿ ಬೆಳೆಯುವ ವಿವಿಧ ತರಕಾರಿಗಳನ್ನು ಮಾರಾಟ ಮಾಡಲು ನಗರ ಪ್ರದೇಶಕ್ಕೆ ಬರುತ್ತಿದ್ದಾರೆ. ತಮ್ಮ ಜೀವನ ನಿರ್ವಹಣೆಗೆ ತರಕಾರಿ ಮಾರಾಟವನ್ನು ಅವಲಂಬಿಸಿದ್ದಾರೆ. ಆದರೆ ಅವರಿಗೆ ನಗರದಲ್ಲಿ ತರಕಾರಿ ಮಾರಾಟ ಮಾಡುವ ಸ್ಥಳದಲ್ಲಿ ಯಾವುದೇ ಸೂಕ್ತ ವ್ಯವಸ್ಥೇ ಇಲ್ಲದಿರುವದಕ್ಕೆ ನಗರಸಭೆಗೆ ಒತ್ತಾಯಿಸಿದ್ದಾರೆ . ಈ ರೈತರು ತರಕಾರಿ ಮಾರಾಟ ಮಾಡುವ ಜಾಗದಲ್ಲಿ ಮಳೆ ಬಂದರೆ ನೀರು ನಿಲ್ಲುವುದರಿಂದ ವ್ಯಾಪಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ರಾಯಚೂರ ನಗರ ಸಭೆ ಅಧಿಕಾರಿಗಳಿಗಳು ಇದ್ದನ್ನು ಗಂಭೀರವಾಗಿ ಪರಿಗಣಿಸಿ ಹಳ್ಳಿಗಳಿಂದ ತರಕಾರ ಮಾರಾಟಕ್ಕೆ ಬರುವ ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಒತ್ತಾಯಿಸಿರುವ ಅವರು ಬೀದಿ ಬದಿಯ ಅಥಾವ ನಗರ ಪ್ರದೇಶಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಹಕ್ಕು ಬೆಳೆಗಾರರಿಗಿದೆ ಎಂದು ಅವರು ತಿಳಿಸಿದ್ದಾರೆ. ಉಳಿದಂತೆ ನಗರದಲ್ಲಿವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು, ಮತ್ತು ಅಂತಹ ಪ್ರದೇಶಗಳಲ್ಲಿ ಬಡ ರೈತರಿಗೆ ತರಕಾರಿ ಮಾರಾಟಕ್ಕ ವ್ಯ...
Comments
Post a Comment