ಭಗೀರಥ ಸಮಾಜದ ಜನರಲ್ಲಿ ಮನಸ್ಸು ಒಳ್ಳೆಯದಿದೆ- ಗುರುಬಸವ ರಾಜಗುರು ಸ್ವಾಮೀಜಿ

 


ಭಗೀರಥ ಸಮಾಜದ ಜನರಲ್ಲಿ ಮನಸ್ಸು ಒಳ್ಳೆಯದಿದೆ- ಗುರುಬಸವ ರಾಜಗುರು ಸ್ವಾಮೀಜಿ

ರಾಯಚೂರು,ಮೇ.17- ಜಗತ್ತಿನಲ್ಲಿ ಎಲ್ಲರೂ ಒಂದೇ ಸಮಾನರೆಂದು ಕಾಣುವವರು ಭಗೀರಥ ಸಮಾಜದವರು, ಮನುಷ್ಯ ಕೆಟ್ಟದ್ದಾರೆ ಹೊರತು ಮನಸ್ಸು ಯಾವತ್ತು ಕೆಟ್ಟಿಲ್ಲ ಎಂದು ನಿಜಾನಂದಾಶ್ರಮ ಮಲದಕಲ್  ಗುರುಬಸವ ರಾಜಗುರು ಸ್ವಾಮೀಜಿ ಹೇಳಿದರು‌.
ತಾಲ್ಲೂಕಿನ ಗಣಮೂರ ಗ್ರಾಮದಲ್ಲಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, 
 ಭಗೀರಥ ಸಮಾಜದವರು ಎಲ್ಲರೂ ಒಗ್ಗಟ್ಟಾಗಿದ್ದಾರೆ. ಹೊಂದಾಣಿಕೆ ಇದೆ ಇದರಿಂದ ತಮ್ಮ ಸಮಸ್ಯೆಗಳನ್ನು ಕುಳಿತು ಬಗೆ ಹರಿಸಿಕಳ್ಳುತ್ತಾರೆ ಎಂದರು.
ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂದರೆ ಅದು ಭಗೀರಥ ಸಮಾಜವಾಗಿದೆ, ಸಮಾಜ ಒಗ್ಗೂಡಿ ಭಗೀರಥ ಜಯಂತಿ ಅದ್ದರೂಯಾಗಿ ಆಚರಣೆ ಮಾಡಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅದಕ್ಕೆ ನಾವು ಸಹ 5001 ದೇಣಿಗೆ ನೀಡುತ್ತೇವೆ ಎಂದು ತಿಳಿಸಿದರು.
ಸಮಾಜದಲ್ಲಿ ಎಲ್ಲರ ಮನಸ್ಸು ಹೊಲಸು ಮಾಡಿಕೊಳ್ಳದೆ ಪ್ರತಿಯೊಂದರಲ್ಲಿ ಒಗ್ಗೂಡಿ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿ ಭಗೀರಥ ಸಮಾಜದವರು ಎಂದರೆ ಎದೆ ಮುಟ್ಟಿ ನೋಡಿಕೊಳ್ಳವಂತಾಗಬೇಕು ಎಂದರು.
ಜಗತ್ತಿನಲ್ಲಿ ಬದುಕುವುದು ಮುಖ್ಯವಲ್ಲ ಬದುಕಿದ್ದಾಗ ಸಮಾಜಕ್ಕೆ ಜಗತ್ತಿಗೆ ಏನು ಕೊಟ್ಟಿದ್ದಾನೆ ಎಂಬುದು ಮುಖ್ಯವಾಗಿದೆ.ಕಚ್ಚೆ ಕೈ ಮತ್ತು ಬಾಯಿ ಶುದ್ದವಾಗಿರಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾದ್ಯಕ್ಷ ವೆಂಕೋಬ ಉಪ್ಪಾರ, ಮಹಿಳಾದ್ಯಕ್ಷ ಪಿ.ಸುರೇಖಾ  ಮಾತನಾಡಿದರು.
ಭಗೀರಥರ ಜಯಂತಿ ಅಂಗವಾಗಿ ಭಗೀರಥ ಭಾವಚಿತ್ರ ಮೆರವಣಿಗೆ ಬೀದಿಗಳಲ್ಲಿ ನಡೆಸಲಾಯಿತು.
ಮಹಿಳೆಯರು ಮಕ್ಕಳು ಕಳಸ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗಣಮೂರು ಗ್ರಾಮ ಘಟಕದ ಅಧ್ಯಕ್ಷ, ಮಲ್ಲಿಕಾರ್ಜುನ, ನವಯುವಕ ಅಧ್ಯಕ್ಷ ಜೂಕೂರು  ಶ್ರೀನಿವಾಸ,ಮಿರ್ಜಾಪುರ್ ಪಾಗುಂಟಪ್ಪ ,ಚಂದ್ರಬಂಡಾ ಗ್ರಾಮ ಪಂಚಾಯತಿ ಸದಸ್ಯ ಮಾಣಿಕಪ್ಪ , ಮಹಾದೇವ, ಹಾಲ್ವಿ ಶ್ರೀನಿವಾಸ,ಆದಿರಾಜ ಆದೋನಿ, ಅರ್. ಶ್ರೀನಿವಾಸ,ಎಸ್. ಎಲ್. ವೀರೇಶ, ಜಿಲ್ಲಾ ಉಪ್ಪಾರ ಸಮಾಜ ಉಪಾಧ್ಯಕ್ಷರು ಶ್ರೀನಿವಾಸ್, ಗಣಮೂರು ಉಪ್ಪಾರ ಸಮಾಜ ಗೌರವಾಧ್ಯಕ್ಷ  ಪಾಗುಂಟಪ್ಪ , ನರಸಿಂಹಲು, ಮಲ್ಲೇಶ್ , ಸೇರಿದಂತೆ ಅನೇಕರು ಹಿರಿಯರು ಗಣಮೂರು ಭಗೀರಥ ಸಮಾಜ ಬಾಂಧವರು ಇನ್ನಿತರರು ಇದ್ದರು. ಚಿಕ್ಕಸೂಗುರು ಲಕ್ಷ್ಮಣ ಕಾರ್ಯಕ್ರಮವನ್ನು ನಿರೂಪಿಸಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್