ಚಿಂತಲಕುಂಟಾ : ಬಸ್ ಸೌಲಭ್ಯ ಆರಂಭ
ರಾಯಚೂರು,ಮೇ.27- ರಸ್ತೆ ಸಂಪರ್ಕ, ಬಸ್ ಸೌಲಭ್ಯದಿಂದ ವಂಚಿತವಾಗಿದ್ದ ತಾಲೂಕಿನ ಚಿಂತಲಕುಂಟಾ ಗ್ರಾಮಕ್ಕೀಗ ಬಸ್ ಸೇವೆ ಆರಂಭಗೊಂಡಿದ್ದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಶಾಸಕರು ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅವರ ಇಚ್ಛಾಶಕ್ತಿ, ಕಾಳಜಿಯ ಹಿನ್ನೆಲೆಯಲ್ಲಿ ಚಿಂತಲಕುಂಟಾ ಗ್ರಾಮಕ್ಕೆ ರಸ್ತೆ ಡಾಂಬರೀಕರಣ ಹಾಗೂ ನೂತನ ಬಸ್ ಸೇವೆ ಆರಂಭವಾಗಿದೆ.
ಲೋಕೋಪಯೋಗಿ ಇಲಾಖೆಯ ಎಸ್ಎಸ್'ಡಿಪಿ ಯೋಜನೆಯಡಿ ಮಸರಕಲ್ ಗ್ರಾಮದಿಂದ ಚಿಂತಲಕುಂಟಾ ಗ್ರಾಮಕ್ಕೆ ರಸ್ತೆ ಡಾಂಬರೀಕರಣ ಕಾಮಗಾರಿಯಾಗಿದೆ. ಜೊತೆಗೆ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಬಸ್ ಸಾರಿಗೆ ಸೇವೆ ಕಲ್ಪಿಸಲಾಗಿದ್ದು ದೇವದುರ್ಗ-ಶಿವಂಗಿ(ಮಸರಕಲ್, ಚಿಂತಲಕುಂಟಾ ವಾಯಾ) ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಇದರಿಂದ ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಂಬಣ್ಣ ನೀಲಗಲ್, ಬಿಜೆಪಿ ಹಿರಿಯ ಮುಖಂಡರಾದ ಗೋಪಾಲಪ್ಪಗೌಡ, ನಾಗರಾಜ ಪಾಟೀಲ್ ಗೋಪಾಳಪುರ, ಜಹೀರ್ ಪಾಷಾ, ಬಸನಗೌಡ ವೆಂಕಟಾಪುರ, ಮಲ್ಲಿಕಾರ್ಜುನ ಹಿರೇಬುದೂರು, ಶಿವಪ್ಪ ನಾಯಕ ಸೇರಿದಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments
Post a Comment