ಗಲಗ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಗಿಡ್ಡಯ್ಯ ರಾಜಿನಾಮೆ ಸಲ್ಲಿಕೆ.

 ಗಲಗ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಗಿಡ್ಡಯ್ಯ ರಾಜಿನಾಮೆ ಸಲ್ಲಿಕೆ.


ರಾಯಚೂರು,ಮೇ.25- : ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಗಿಡ್ಡಯ್ಯ ವೈಯಕ್ತಿಕ ಕಾರಣಾಗಳಿಂದಾಗಿ ತಮ್ಮ ಅಧ್ಯಕ್ಷೀಯ ಸ್ಥಾನವನ್ನು ನಿಭಾಯಿಸಲು ತೊಂದರೆ ಆಗುತ್ತದೆ ಎಂದು ಮನ: ಪೂರ್ವಕವಾಗಿ, ಸ್ವ ಇಚ್ಛೆಯಿಂದ ಕೂಡಿದ ತಮ್ಮ ಲಿಖಿತ ರೂಪದ ರಾಜಿನಾಮೆಯನ್ನು ಅವಧಿಗೆ ಮುನ್ನವೇ ರಾಯಚೂರು ಉಪ ವಿಭಾಗಧಿಕಾರಿಯಾದ ರಜನಿಕಾಂತ್ ಇವರನ್ನು ಕಚೇರಿಯಲ್ಲಿ ಭೇಟಿ ಮಾಡಿ ರಾಜಿನಾಮೆ ಪತ್ರವನ್ನು ಸಲ್ಲಿಸಿ ತಮ್ಮ ರಾಜಿನಾಮೆಯನ್ನು ಅಂಗಿಕರಿಸುವಂತೆ ಕೋರಿದ್ದಾರೆ.


ಈ ಸಂದರ್ಭದಲ್ಲಿ ಗಲಗ ಗ್ರಾಮ ಪಂಚಾಯತಿಯ ವಿವಿಧ ವಾರ್ಡಿನ ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ