ಜಿಲ್ಲೆಯಲ್ಲಿ ಬೀಜ ,ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಿ-ಶಂಕರ ಪಾಟೀಲ ಮುನೇನಕೊಪ್ಪ

 ಜಿಲ್ಲೆಯಲ್ಲಿ ಬೀಜ ,ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಿ-ಶಂಕರ ಪಾಟೀಲ ಮುನೇನಕೊಪ್ಪ.                  ರಾಯಚೂರು,ಮೇ.23-ಜಿಲ್ಲೆಯಲ್ಲಿ ಬೀಜ ,ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಿ ಎಂದು ಜವಳಿ ,ಕೈಮಗ್ಗ ಹಾಗೂ ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು .ಅವರಿಂದು ಜಿ.ಪಂ ಸಭಾಂಗಣದಲ್ಲಿ ಜಿಲ್ಲೆಯಲಿ ಮಳೆ ಹಾನಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿ 

ಜಿಲ್ಲೆಯಲ್ಲಿ ಯಾವುದೆ ಕಾರಣಕ್ಕೂ ಬೀಜ ,ರಸಗೊಬ್ಬರ ಕೊರತೆಯಾಗದಂತೆ ಕೃಷಿ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು.ಸಂಸದ ಅಮರೇಶ್ವರ ನಾಯಕ ಮಾತನಾಡಿ ಕಾಳ ಸಂತೆಯಲ್ಲಿ ಅಕ್ರಮವಾಗಿ ಬೀಜ ಮತ್ತು ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದರು.ಶಾಸಕರಾದ ಡಿ.ಎಸ್ .ಹೂಲಗೇರಿ ಮಾತನಾಡಿ ಅಕ್ರಮ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡಿದ ಎಷ್ಟು ಜನರ ಮೇಲೆ ಪ್ರಕರಣ ದಾಖಲಿಸಿದ್ದೀರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಶಾಸಕ ದದ್ದಲ ಬಸನಗೌಡ ಮಾತನಾಡಿ ಕೃಷಿ ಇಲಾಖೆ ಸಮರ್ಪಕವಾಗಿ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇಟ್ಟುಕೊಳ್ಳಬೇಕೆಂದರು.ಶಾಸಕ ಬಸನಗೌಡ ತುರವಿಹಾಳ ಮಾತನಾಡಿ ಹೆಚ್ಚಿನ ಬೆಲೆಯಲ್ಲಿ  ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವವರ ಮೇಲೆ ಕ್ರಮ ವಹಿಸಿ ಎಂದರು. ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ ರೈತರಿಗೆ ಬೀಜ ಮತ್ತು ರಸಗೊಬ್ಬರಕೆ  ಎಷ್ಟು ಸಬ್ಸಿಡಿ ನೀಡುತ್ತೀರಿ ಎಂದು ಕೃಷಿ ಅಧಿಕಾರಿಗಳನ್ನು ವಿಚಾರಿಸಿದರು. ಮಳೆಯಿಂದ ಹಾನಿಯಾದ ಟಿಸಿ ದುರಸ್ಥಿಗೆ ಕ್ರಮ ವಹಿಸಬೇಕೆಂದರು. ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ತಮ್ಮ ಕ್ಷೇತ್ರದಲ್ಲಿ ನಾಲ್ಕು ದಿನದಿಂದ ಟಿಸಿ ಸುಟ್ಟರು ಅಲ್ಲಿನ ಸೆಕ್ಷನ್ ಅಧಿಕಾರಿ ಹನುಮಂತರಾಯ ಎಂಬುವವರು ಏನು ಕ್ರಮಕೈಗೊಂಡಿಲ್ಲವೆಂದರು ಜೆಸ್ಕಾಂ ಅಧಿಕಾರಿ ಚಂದ್ರಶೇಖರ ದೇಸಾಯಿ ಮಾತನಾಡಿ ಕೂಡಲೆ ಈ ಬಗ್ಗೆ ಕ್ರಮ ವಹಿಸುವುದಾಗಿ ಹೇಳಿದರು. ಸಚಿವರು  ಮಾತನಾಡಿ ಇಡಿ ರಾಜ್ಯಕ್ಕೆ ವಿದ್ಯುತ್ ನೀಡುವ ಜಿಲ್ಲೆಯಲ್ಲಿ ವಿದ್ಯುತ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ ಉತ್ತಮ ಗುಣ ಮಟ್ಟದ ವಿದ್ಯುತ್ ಪರಿಕರಗಳನ್ನು ತರಿಸಿ ಎಂದ ಹೇಳಿದ ಅವರು ಇಲ್ಲದಿದ್ದರೆ ನೀವೆ ಹೊಣೆಯಾಗುತ್ತೀರಿ ಎಂದರು.ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯಾಪೂರು ಮಾತನಾಡಿ ರೈತರ ಸಮಸ್ಯೆ ಆಲಿಸಲು  ಜಿಲ್ಲಾಡಳಿತದಿಂದ ಹೆಲ್ಪ್ ಲೈನ್ ತೆರೆಯುವಂತೆ  ಕೋರಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿ.ಪಂ.ಸಿಇಓ ನೂರ ಜಹರಾ ಖಾನಂ ಸೇರಿದಂತೆ  ಇತರ ಅಧಿಕಾರಿಗಳಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ