ಜು.1 ರಂದು ಏಮ್ಸ್ ಹೋರಾಟ 50 ದಿನಕ್ಕೆ: ಐದು ಸಾವಿರ ಜನರಿಂದ ರಕ್ತ ಸಹಿ ಸಂಗ್ರಹ ಚಳುವಳಿ-ಬಸವರಾಜ ಕಳಸ.


 ಜು.1 ರಂದು ಏಮ್ಸ್ ಹೋರಾಟ 50 ದಿನಕ್ಕೆ: ಐದು ಸಾವಿರ ಜನರಿಂದ ರಕ್ತ ಸಹಿ ಸಂಗ್ರಹ ಚಳುವಳಿ-ಬಸವರಾಜ ಕಳಸ.      ರಾಯಚೂರು,ಜೂ.29- ಏಮ್ಸ್ ಪಡೆಯಲು ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ಜು.1 ರಂದು 50 ದಿನ ಪೂರೈಸುತ್ತಿರುವ ಹಿನ್ನಲೆಯಲ್ಲಿ ಅಂದು ಏಮ್ಸ್ ಮಂಜೂರಾತಿಗೆ ಆಗ್ರಹಿಸಿ ಸುಮಾರು ಐದು ಸಾವಿರ ಜನರ ರಕ್ತದಿಂದ ಸಹಿ ಮಾಡುವ ಚಳುವಳಿ ಪ್ರಾರಂಭಿಸಲಾಗುತ್ತದೆ ಎಂದು ಏಮ್ಸ್ ಹೋರಾಟ ಸಮಿತಿ ಸಂಚಾಲಕ ಬಸವರಾಜ ಕಳಸ ಹೇಳಿದರು.                                              ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಏಮ್ಸ್ ಪಡೆಯಲು ಕಳೆದ 48 ದಿನದಿಂದ ನಿರಂತರ ಹೋರಾಟ ಶಾಂತಿಯುತವಾಗಿ ನಡೆಯುತ್ತಿದೆ ಇದುವರೆಗೂ ಸರ್ಕಾರದಿಂದ ಯಾವುದೆ ಪೂರಕ ಸ್ಪಂದನೆ ದೊರೆತಿಲ್ಲವಾದ್ದರಿಂದ ಮುಖ್ಯಮಂತ್ರಿಗಳಿಗೆ ಕೇಂದ್ರ ಸರ್ಕಾರಕ್ಕೆ ಜಿಲ್ಲೆಗೆ ಏಮ್ಸ್ ಶಿಫಾರಸ್ಸು ಮಾಡಲು ಆಗ್ರಹಿಸಿ ಸುಮಾರು ಐದು ಸಾವಿರ ಜನರ ರಕ್ತದಿಂದ ಸಹಿ ಮಾಡುವ ಚಳುವಳಿ ನಡೆಸಲಾಗುತ್ತದೆ ಎಂದರು.                          ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ  ನಗರ ಶಾಸಕರು ಹೋರಾಟ ಸ್ಥಳಕ್ಕೆ ಭೇಟಿ ನೀಡಿದ್ದು ಬಿಟ್ಟರೆ ಹೆಚ್ಚಿನ ಒತ್ತಡ ಅವರು ಸರ್ಕಾರದ ಮೇಲೆ ಹಾಕಲು ವಿಫಲರಾಗಿದ್ದಾರೆಂದರು.                            ಜಿಲ್ಲಾಧಿಕಾರಿಗಳು ಏಮ್ಸ್ ಮಂಜೂರಿಯಾದರೆ ಸರ್ಕಾರದ ಅಧೀನದಲ್ಲಿ ಸುಮಾರು 500 ಎಕರೆ ಜಮೀನು ತಾಲೂಕಿನಲ್ಲಿದೆ ಎಂದು ತಿಳಿಸಿದ್ದು ಭೂಮಿಯ ಕೊರತೆ ಏಮ್ಸ್ ಗೆ ತಲೆ ದೂರದು ಎಂದರು.                                              ಈ ಹಿಂದೆ ಏಮ್ಸ್ ಜಿಲ್ಲೆಗೆ ತರುವ ಬಗ್ಗೆ ಶಾಸಕ ಕೆ.ಶಿವನಗೌಡ ನಾಯಕರು ಹೇಳಿದ್ದ ಮಾತಿಗೆ ಅವರು ಬದ್ಧರಾಗಿದ್ದೇವೆಂದು ಹೇಳಿದ್ದು ಏಮ್ಸ್ ತರಲು ಎಲ್ಲ ಸಹಕಾರ ನೀಡುವುದಾಗಿ ಹೇಳಿದ್ದಾರೆಂದರು.                                              ಹೋರಾಟ ಸಮಿತಿಯ ಅಶೋಕ ಕುಮಾರ ಜೈನ್ ಮಾತನಾಡಿ ಏಮ್ಸ್ ಹೋರಾಟಕ್ಕೆ ಅನೇಕರು ಬೆಂಬಲಿಸಿದ್ದು ಆಶಾದಾಯಕ ಬೆಳವಣಿಗೆಯಾಗಿದೆ ಆದರೆ ಜಿಲ್ಲಾ ವೈದ್ಯರ ಸಂಘ, ನ್ಯಾಯವಾದಿಗಳ ಸಂಘ ಮುಂತಾದವು ಬೆಂಬಲಿಸಿಲ್ಲ ಅದೇ ರೀತಿ ಜೆಡಿಎಸ್ ಶಾಸಕರಾದ ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ ಬೆಂಬಲ ವ್ಯಕ್ತಪಡಿಸಿದ್ದಾರೆ ಹೊರತು ಜೆಡಿಎಸ್ ಪಕ್ಷ ಬೆಂಬಲ ಸೂಚಿಸಿಲ್ಲ ಬಿಜೆಪಿ ಪಕ್ಷವು ಹೋರಾಟಕ್ಕೆ ಬೆಂಬಲಿಸಿಲ್ಲವೆಂದರು. ನಮ್ಮ ಹೋರಾಟಕ್ಕೆ ಅಕ್ಕಿ ಗಿರಣಿ ಸಂಘದವರು ಧನ ಸಹಾಯ ಮಾಡಿ ಟೆಂಟ್ ಹಾಕಿಸಿದ್ದಾರೆ ಶಾಸಕ ಡಾ.ಶಿವರಾಜ ಪಾಟೀಲ ತಿಳಿದುಕೊಂಡಂತೆ ಬೋಸರಾಜು ಅಥವಾ ಯಾವದೆ ರಾಜಕೀಯ ವ್ಯಕ್ತಿಗಳು ,ಶಾಸಕರ ರಾಜಕೀಯ ಎದುರಾಳಿಗಳು ಧನ ಸಹಾಯದಿಂದ ಟೆಂಟ್ ಹಾಕಿಲ್ಲವೆಂದು ಹೇಳಿದರು. ಹೋರಾಟ ಸಮಿತಿಯ ಎಸ್.ಮಾರೆಪ್ಪ ವಕೀಲ್ ಮಾತನಾಡಿ ತಾಲೂಕಿನಾದ್ಯಂತ ಹೋರಾಟ  ಸಮಿತಿ ಸಂಚರಿಸಿದ್ದು ಸಿಂಧನೂರಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಕಚೇರಿಯಲ್ಲಿ ಹೋರಾಟ ಸಮಿತಿಯ ಕೆಲ ಸದಸ್ಯರು ಏಮ್ಸ್ ಪಡೆಯುವ ಬಗ್ಗೆ ಚರ್ಚಿಸಿದ್ದೇವೆಂದರು. ಶರಣಪ್ಪ ಅಸ್ಕಿಹಾಳ ಇತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್