60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ಲಸಿಕಾಕರಣ


ರಾಯಚೂರು,ಜೂ.28-  ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬ್ರಾಹ್ಮಣ್ ಆರ್ಗನೈಸೇಶನ ಆಫ್ ಇಂಡಿಯಾ ರಾಯಚೂರು ಜಿಲ್ಲಾ ಸಮಿತಿ ಸಹಯೋಗದೊಂದಿಗೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕರೋನಾ ಲಸಿಕೆಯ ಬೂಸ್ಟರ್ ಡೋಸ್  ಲಸಿಕಾಕರಣ ಅಭಿಯಾನ ವನ್ನು ಕೋಟೆಯ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಹಾಗೂ ಶ್ರೀ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ದಲ್ಲಿ ಆಯೋಜಿಸಲಾಗಿತ್ತು ಬಡಾವಣೆಯ ಹಿರಿಯರಾದ ಶ್ರೀ ನರಸಿಂಗರಾವ್, ರಾಘವೇಂದ್ರಾಚಾರ್ ಗಬ್ಬೂರ, ಶ್ರೀ ದಾನಪ್ಪ ಯಾದವ, ನವೋದಯ ಪಬ್ಲಿಕ ಶಾಲೆಯ ಸಿಬ್ಬಂದಿ ಇತರರು ಲಸಿಕೆಯನ್ನು ಹಾಕಿಸಿಕೊಂಡರು ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ , ಶ್ರೀ ಕೊಪ್ರೆಶ ಸೌದಿಕರ,ಬ್ರಾಹ್ಮಿನ್ ಆರ್ಗನೈಸೇಶನ ಇಂಡಿಯಾದ ರಾಯಚೂರು ಜಿಲ್ಲಾದ್ಯಕ್ಷರಾದ ಪ್ರಸನ್ನ ಆಲಂಪಲ್ಲಿ,ರಾಜ್ಯ ಉಪಾದ್ಯಕ್ಷರಾದ ಶ್ರೀ ಗೊಪಾಲಕೃಷ್ಣ ತಟ್ಟಿ ಅಭಿಯಾನ ಯಶಸ್ವಿಗೊಳಿಸಲು ಸಹಕರಿಸಿದರು.

Comments

Popular posts from this blog