ಜಿಲ್ಲಾಡಳಿತದಿಂದ 8ನೇ ಅಂತರಾಷ್ಟಿçÃಯ ಯೋಗ ದಿನ ಆಚರಣೆ ಅರೋಗ್ಯ ಕಾಪಾಡಲು ಯೋಗ ಉತ್ತಮವಾದ ಮಾರ್ಗ-ಶಾಸಕ ಬಸನಗೌಡ ದದ್ದಲ್
ಜಿಲ್ಲಾಡಳಿತದಿಂದ 8ನೇ ಅಂತರಾಷ್ಟಿçÃಯ ಯೋಗ ದಿನ ಆಚರಣೆ
ಅರೋಗ್ಯ ಕಾಪಾಡಲು ಯೋಗ ಉತ್ತಮವಾದ ಮಾರ್ಗ-ಶಾಸಕ ಬಸನಗೌಡ ದದ್ದಲ್
ರಾಯಚೂರು ಜೂ.21,- ಒತ್ತಡವನ್ನು ನಿವಾರಿಸಲು ಯೋಗ ಅತಿ ಮುಖ್ಯವಾಗಿದೆ, ಇವತ್ತಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಅಂತಹ ಒತ್ತಡವನ್ನು ನಿವಾರಿಸಲು ಹಾಗೂ ಆರೋಗ್ಯವನ್ನು ಸುಧಾರಿಸಲು ಯೋಗಭ್ಯಾಸ ಮಾಡುವುದು ಉತ್ತಮವಾಗಿದೆಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಹೇಳಿದರು.
ಅವರು ಜೂ.5ರ ಮಂಗಳವಾರ ದಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿವಿಧ ಯೋಗ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ 8ನೇ ಅಂತರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಯೋಗದ ಮೂಲಕ ಭಾರತ ದೇಶದ ಸಂಸ್ಕೃತಿಯನ್ನು ಇಡಿ ಜಗತ್ತಿಗೆ ನಾವು ಪರಿಚಯಿಸುತ್ತಿದ್ದೇವೆ. ಅಂತಹ ಸಂಸ್ಕೃತಿಯನ್ನು ಹೊಂದಿರುವ ಭಾರತ ದೇಶದಲ್ಲಿ ಯೋಗವು ಕೂಡ ಒಂದು. ಪ್ರತಿದಿನ ಒಂದು ಗಂಟೆಗಳ ಕಾಲ ಯೋಗ ಮಾಡುವುದರಿಂದ ನಮ್ಮ ದಿನನಿತ್ಯದ ಶೈಲಿಯನ್ನು ಬದಲಿಸಿಕೊಂಡು ಉತ್ತಮವಾದ, ಯೋಗ್ಯವಾದ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಮಾತನಾಡಿ, ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯವಶ್ಯಕವಾಗಿದ್ದು, ಎಲ್ಲರೂ ಪ್ರತಿ ದಿನ ಯೋಗಭ್ಯಾಸ ಮಾಡಿ ಉತ್ತಮವಾದ ಆರೋಗ್ಯ, ಶರೀರವನ್ನು ಕಾಪಾಡಿಕೊಳ್ಳಿ ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ, ಒಳಾಂಗಣ ಕ್ರೀಡಾಂಗಣದಲ್ಲಿ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಜಿಮ್, ಟೇಬಲ್ ಟೆನಿಸ್, ಇತ್ಯಾದಿ ವ್ಯಾಯಾಮ ಮಾಡುವ ಪ್ರತಿಯೊಬ್ಬರಿಗೆ, ಯುವಕರಿಗೆ ಜಿಲ್ಲಾಡಳಿತದಿಂದ ಆದ್ಯತೆ ನೀಡಲಾಗುವುದು. ಜಿಲ್ಲೆಯ ಯುವಕರು ಪ್ರತಿಯೊಂದು ಚಟುವಟಿಕೆಗಳಲ್ಲಿ ಪಾಲ್ಗೊಂಡು ಆಸಕ್ತಿ ವಹಿಸಿ ಫಿಟ್ ಇಂಡಿಯಾ ನಿರ್ಮಾಣ ಮಾಡೋಣ ಎಂದು ಹೇಳಿದರು.
ಇದೇ ವೇಳೆ ಅಂತರಾಷ್ಟಿçÃಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಯೋಗ ಸ್ಪ್ಪರ್ಧೆಯಲ್ಲಿ ವಿಜೇತರಾದ ವಿವಿಧ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಗಣ್ಯರಿಂದ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್, ರಾಯಚುರು ನಗರಸಭೆ ಅಧ್ಯಕ್ಷತೆ ಲಲಿತಾ ಕಡಗೋಳ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಪೊಲೀಸ್ ಇಲಾಖೆ ಡಿವೈಎಸ್ಪಿ ವೆಂಕಟೇಶ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ ಡಾ.ಸುರೇಂದ್ರ ಬಾಬು, ರಾಯಚೂರು ತಹಶೀಲ್ದಾರ ಡಾ.ಹಂಪಣ್ಣ ಸಜ್ಜನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೃಷಬೇಂದ್ರಯ್ಯ ಸ್ವಾಮಿ, ಬ್ರಹ್ಮ ಕುಮಾರಿ ಈಶ್ವರಿ ಮಹಾವಿದ್ಯಾಲಯದ ಸಂಚಾಲಕಿ ಸ್ಮೀತಾ ಅಕ್ಕನವರು, ದೇವಣ್ಣ ವಕೀಲ, ಯೋಗ ಗುರುಗಳಾದ ತಿಮ್ಮಪ್ಪ ಎನ್. ವಡ್ಡೆಪಲ್ಲಿ, ಸೇರಿದಂತೆ ವಿವಿಧ ಶಾಲಾ, ಕಾಲೇಜ್ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Comments
Post a Comment