ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೮ ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

 

 


ರಾಯಚೂರು,23- ನಗರದ ಬೊಳಮಾನದೊಡ್ಡಿ ರಸ್ತೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ರಾಯಚೂರು, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ,ಗ್ರೀನ್ ರಾಯಚೂರು ಮತ್ತು ಶಿಲ್ಪಾ ಫೌಂಡೇಶನ್ ಪರ್ಯಾವರಣ ಸಂರಕ್ಷಣಾ ಗತಿವಿಧಿ ರಾಯಚೂರು ಇವರ ಸಹಯೋಗದೊಂದಿಗೆ "೮ ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ". ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

  ಯೋಗ ದಿನದ ನಿಮಿತ್ಯ ಆರ್ಟ್ ಆಫ್ ಲಿವಿಂಗ್ ನ _ರೂಪಾ ಬಳೆ ಇವರ ಮಾರ್ಗದರ್ಶನದಲ್ಲಿ ವಸತಿ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.ಕೊನೆಯಲ್ಲಿ ಪರಿಸರ ಜಾಗೃತಿಯ ಅಂಗವಾಗಿ ಗುಲ್ಮೋಹರ್ ಸಸಿಯನ್ನು ಶಾಲಾ ಆವರಣದಲ್ಲಿ ನೆಡಲಾಯಿತು.ಯೋಗ ಪ್ರದರ್ಶನ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ವಸತಿಶಾಲೆಯ ನಿಲಯಪಾಲಕರಾದ
  ಶ್ರೀ  ಶಾಮಣ್ಣ, ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಅನಿತಾ ,ಶಿಕ್ಷಕರಾದ ಶ್ರೀಮತಿ ಶಾರದಾ,ಶ್ರೀಮತಿ ಪದ್ಮಾವತಿ,ಶ್ರೀಮತಿ ಗುರ್ಲಾ ಶೃತಿ, ಕು. ಪೂಜಾ ಸೋನಾರ್, ಕು.ಶ್ರೀದೇವಿ,ಶ್ರೀಮತಿ ಪ್ರಿಯಾಂಜಲಿ,ಶ್ರೀಮತಿ ನಾಜಿಯಾ ಬೇಗಂ ಹಾಗೂ ಗ್ರೀನ್ ರಾಯಚೂರು ತಂಡದ ಸರಸ್ವತಿ ಕಿಲಕಿಲೆ ಮತ್ತು ಶ್ರೀ ರಾಜೇಂದ್ರ ಕುಮಾರ್ ಭಾಗವಹಿಸಿ ಯೋಗದ ಮಹತ್ವ ಮತ್ತು ರಾಯಚೂರಿನ ಹಸಿರೀಕರಣದ ಕುರಿತು ತಿಳಿಸಿಕೊಟ್ಟರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ