ಭಾರತೀಯ - ಟಿಬೇಟಿಯನ್ ವಿದ್ವಾಂಸರ ರಾಷ್ಟ್ರೀಯ ಸಮ್ಮೇಳನ.
ಭಾರತೀಯ - ಟಿಬೇಟಿಯನ್ ವಿದ್ವಾಂಸರ ರಾಷ್ಟ್ರೀಯ ಸಮ್ಮೇಳನ.
ರಾಯಚೂರು,ಜೂ.20-ಉತ್ತರ ಕನ್ನಡದ ಮುಂಡಗೋಡ ಟಿಬೇಟಿಯನ್ ಕ್ಯಾಂಪಸ್ ನ ಗಾಡೆನ್ ಜಾಂಗತ್ಸೆ ಬೌದ್ದ ಮಹಾ ಮಂದಿರದಲ್ಲಿ ನಡೆದ ಭಾರತೀಯ ಹಾಗೂ ಟಿಬೆಟಿ ಯನ್ ವಿದ್ವಾಂಸರ 2ನೆ ರಾಷ್ಟ್ರೀಯ ಮಹಾ ಸಮ್ಮೇಳನ ನಡೆಯಿತು. ಸಮ್ಮೇಳನದ 3ನೇ ದಿನದ 4ನೇ ಗೋಷ್ಠಿಯ ಮುಖ್ಯ ಭಾಷಣಕಾರರಾಗಿ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ರಾಯಚೂರು ಜಿಲ್ಲೆಯ ಮಾನ್ಯ ಶ್ರೀ ಹನುಮಂತಪ್ಪ ಕಾಕರಗಲ್ ರವರು Topic :"General views and opinions" ವಿಷಯದ ಕುರಿತು ಸುಮಾರು 15-20 ನಿಮಿಷಗಳ ಅವಧಿ ಮಾತನಾಡಿ ಭಾರತೀಯ ಭವ್ಯ ಸಿಂಧು ನಾಗರೀ ಕತೆಯ ಮೇಲೆ ಹೊರ ದೇಶಗಳ ಅನ್ಯ ಪುರುಷ ಪ್ರಧಾನ ಸಂಸ್ಕೃತಿ ಅಗಮಸಿ, ದೇವರು- ಧರ್ಮ, ಯಜ್ಞ ಯಾಗಗಳ ಮೂಲಕ ಪಶು ಪ್ರಾಣಿಗಳನ್ನು ಬಲಿಕೊಟ್ಟು ಮಾದಕ ಸೋಮರಸ (ಮದ್ಯಪಾನ) ಇತ್ಯಾದಿ ಗಳನ್ನು ಪ್ರಯೋಗಿಸಿ ಹಂತ ಹಂತವಾಗಿ ಭವ್ಯ 'ಅವ್ವ'ಸಂಸ್ಕ್ರುತಿ ನಾಶಮಾಡಿ ವರ್ಣಭೇಧ, ವರ್ಗಭೇಧ,ಲಿಂಗಬೇಧ,ಜಾತಿಬೇಧಗಳನ್ನು ಅನುಷ್ಠಾನ ಗೊಳಿಸಿ, ಸಹಜೀವನ ಸಾಮರಷ್ಯದ ಮೂಲಕ ಜೀವನ ಸಾಗುತ್ತಿದ್ದ ಅಲ್ಲಿನ ಜನ ಸಮುದಾಯಗಳನ್ನು ಸರ್ವನಾಶ ಮಾಡಿದರು. ಇಂತಹ ಹೀನ ವ್ಯವಸ್ಥೆಯ ವಿರುದ್ಧ ಮಾತೃ ಸಂಸ್ಕೃತಿಯ ಮಾನವೀಯತೆಯವರು ತಿರುಗಿಬಿದ್ದರೆ ಅವರನ್ನು ಸಮಾಜದಿಂದಲೇ ಬಹಿಷ್ಕರಿಸಿ, ಹೀನವಾಗಿ ಜೀವನ ನಡೆಸಲು ಜೀವನ ಕ್ರಮ ಹೇರಿದರು ಇಂತಹ ಅವಕೃಪೆ ಜೀವನ ಕ್ರಮಕ್ಕೆ ಒಳಗಾಗಿರುವ ಸಮುದಾಯಗಳೇ ಇಂದಿನ ಅಸ್ಪೃಶ್ಯ ಸಮುದಾಯಗಳುಈ ಸಮುದಾಯ ಳನ್ನು ದುಃಖದ ಮಡುವಿಗೆ ತಳ್ಳಲ್ಪ ಡಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂತಹ ಅಸಮಾನತೆ, ಮೌಢ್ಯಚಾರ ತಾಂಡವಾಡುತ್ತಿದ್ದ ಕ್ರಿ.ಶ.6ನೇ ಶತಮಾನದಲ್ಲಿ ಶಾಕ್ಯರಾಜ್ಯದ ರಾಜನಾದ ಶುದ್ದೋಧನ ರಾಣಿಯಾದ ಮಹಾಮಾಯೆ ರ ವರ ರಾಜಪುತ್ರ ವಿಶ್ವದ ದುಃಖ ನಿವಾರಣೆಗೆ ಮಾರ್ಗವನ್ನು ಕಂಡು ಹಿಡಿದ ಭೋಧಿಸತ್ವ ಸಿದ್ದಾ ರ್ಥ ಗೌತಮನು ವೈಶಾಖ ಶುದ್ಧ ಪೌರ್ಣಿಮೆ ದಿನ ನೇಪಾಳದ ಲುಂಬಿಣಿ ವನದಲ್ಲಿ ಜನ್ಮಪಡೆದು ರಾಜ ವೈಭೋಗಗಳನ್ನು ತೊರೆದು ಮನುಷ್ಯ- ಮನುಷ್ಯನ ನಡುವಿನ ದ್ವೇಷ, ಅಸೂಯೆ, ಅಶಾಂತಿಗಳಿಗೆ ಮುಖ್ಯ ಕಾರಣ ದುಃಖ. ಈ ದುಃಖ ನಿವಾರಣೆಗೆ ಮಾರ್ಗ ಕಂಡು ಹಿಡಿಯಲು ಬಿಹಾರದ ಉರುವೆಲ ಪ್ರದೇಶದ ಗೊಂಡಾ ರಣ್ಯದ ಅತ್ಯಂತ ಪುರಾತನ ಅರಳಿ ಮರದ ಕೆಳಗೆ ದೃಢ ಚಿತ್ತದಿಂದ ದುಃಖ ನಿವಾರಣೆಯ ಮಾರ್ಗ ಕಂಡು ಹಿಡಿಯಲು ಈ ಸ್ಥಳಬಿಟ್ಟು ಎದ್ದೇಳುವು ದಿಲ್ಲವೆಂದು ಧೃಡ ಪ್ರತಿಜ್ಞೆ ಮಾಡಿ ಜ್ಞಾನರೂಢನಾದನು,
ಶರೀರವನ್ನು ದಂಡಿಸುವು ದಾಗಲಿ,ವಿಲಾಸ ಭೋ ಗದಿಂದಾಗಲಿ,ದುಃಖ ನಿವಾರಣೆ ಸಾಧ್ಯವಿಲ್ಲಾ ಎಂದು ಮಾತನಾಡಿದ ಇವರು ಮನುಷ್ಯ ತ್ವ ಮಾನವೀಯ ಗುಣ ಉಳ್ಳವನು ಪ್ರಭುತ್ವ ಭಾರತದ ನಿರ್ಮಾಣಕ್ಕೆ ಬುದ್ಧನ ತ್ರಿಶರಣ, ಪಂಚಶೀಲ, ಅಷ್ಟಾಂಗ ಮಾರ್ಗ ಗಳಂತಹ ಮೂಲ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ದಮ್ಮ ತಿಳಿಯದೆ- ನೂರುವರ್ಷ ಬದುಕುವುದಕ್ಕಿಂತ, ಸತ್ಯ ದಮ್ಮವನ್ನು ತಿಳಿದು ಒಂದು ದಿನ ಬದುಕುವುದು ಮೇಲು,ಎಂದು ಹನುಮಂತಪ್ಪ ಕಾಕರಗಲ್ ಅವರು ಆಶಯ ನುಡಿಗಳನ್ನು ಹೇಳಿದರು.ಸಮ್ಮೇಳನದ ಸಾನಿಧ್ಯ ಗಾಡೆನ್ ಶಾರ್ಟ್ಸೆ ಲೋಭ್ಸಂಗ್ ತೆಂಫಾರವರು ಮತ್ತು ಜಂಗತ್ಸೆ ಮುಖ್ಯಸ್ಥರು ಸಾನಿಧ್ಯ ವಹಿಸಿದ್ದರು, ಅಧ್ಯಕ್ಷತೆಯನ್ನು ಬಂತೆ ರಾಜರತ್ನ ಬೌದ್ದ ಗುರುಗಳು,ಮುಖ್ಯ ಅತಿಥಿಗಳು ಜಂಗಚುಪ್ ಸಂಗೈ ಹಾಗೂ ಕದಸಂಸ ರಾಜ್ಯಾ ಸಂಘಟನಾ ಸಂಚಾಲಕರಾದ ಶ್ರೀ ಪಕಿರಪ್ಪ ಮುಂಡಗೋಡ, ಉತ್ತರ ಕನ್ನಡ ಜಿಲ್ಲಾ ಸಂಚಾಲಕರಾದ ಬಸುರಾಜ ಸಂಗಮೇಶ, ಶಿವಪ್ಪ ಪಲಕನಮರಡಿ, ರಮೇಶ ಗೋಸ್ಲೆ ಲಿಂಗಸೂಗೂರು , ಬೌದ್ಧ ಗುರೂಜಿ ಜಂಪಾ ಲಾಮ ವಿವಿಧ ಬೌದ್ದ ಮಂದಿರಗಳ ಮುಖಂಡರು,ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ರಾಜಸ್ಥಾನ , ಹರಿಯಾಣ, ಗುಜರಾತ್,ಹಿಮಾಚಲ ಪ್ರದೇಶ ಸೇರಿದಂತೆ ದೇಶದ 15 ರಾಜ್ಯಗಳ ಧರ್ಮ ಚಿಂತಕರು, ಪ್ರತಿನಿಧಿಗಳು ಪಾಲ್ಗೊಂಡಿದ್ದರು
Comments
Post a Comment