ಕರ್ನಾಟಕ ಸಂಘ ಕಂಪೌಂಡ್ ಗೋಡೆ ಮುಂಭಾಗ ಮೂತ್ರ ವಿಸರ್ಜನೆ.!


 ಕರ್ನಾಟಕ ಸಂಘ ಕಂಪೌಂಡ್  ಗೋಡೆ ಮುಂಭಾಗ ಮೂತ್ರ ವಿಸರ್ಜನೆ. !                                       ರಾಯಚೂರು,ಜೂ.23- ಕನ್ನಡ ಭಾಷೆ ಉಳಿಸಲು ಬೆಳೆಸಲು ಕನ್ನಡವನ್ನು ಬಲವಾಗಿ ಬೇರೂರಿಸಲು  ಕಟ್ಟಲಾದ ಕರ್ನಾಟಕ ಸಂಘ ಮುಂಭಾಗದ ಕಂಪೌಂಡ್ ಗೋಡೆ ಮೂತ್ರ ವಿಸರ್ಜನೆ ಸ್ಥಳವಾಗಿ ಮಾರ್ಪಟ್ಟಿದ್ದು ವಿಪರ್ಯಾಸದ ಸಂಗತಿಯಾಗಿದೆ. ಕನ್ನಡವನ್ನು ಕಟ್ಟಿ ಬೆಳೆಸಲು ಅನೇಕ ಕನ್ನಡ ಹಿರಿತಲೆಗಳ , ಹೋರಾಟಗಾರರ ಶ್ರಮ ಅಡಗಿದ್ದು ಕನ್ನಡ ನೆಲ ಜಲಕ್ಕಾಗಿ ಅನೇಕ ಹೋರಾಟಗಳು ರೂಪುಗೊಳ್ಳಲು ಕರ್ನಾಟಕ ಸಂಘ ಉದಯವಾಗಿದ್ದು ಇದು ಕೇವಲ ಕಟ್ಟಡವಾಗಿರದೆ ಅನೇಕ ಕನ್ನಡ ಕಟ್ಟಾಳುಗಳ ಪಾದ ಧೂಳಿಯಿಂದ ಪಾವನಗೊಂಡಿದೆ ಕನ್ನಡ ಕಂಪು ಪಸರಿಸುವ ಸ್ಥಳದ ಮುಂಭಾಗವಿಂದು ಮೂತ್ರ ವಿಸರ್ಜನೆ ಮಾಡುವ ಸ್ಥಳವಾಗಿದ್ದು ನಾಗರೀಕ ಸಮಾಜ ತಲೆ ತಗ್ಗಿಸಬೇಕಾಗಿದೆ. ಮೂತ್ರ ವಿಸರ್ಜನೆ ಮಾಡಲು ಸಾರ್ವಜನಿಕ ಶೌಚಾಲಯ ಕೊರತೆಯೋ ಅಥವಾ ಜನರಲ್ಲಿ ತಿಳಿವಳಿಕೆ ಕೊರತೆಯೋ ತಿಳಿಯದಾಗಿದ್ದು ಇದಕ್ಕೆ ಹೊಣೆಯಾರು ಎಂಬುವುದು ಯಕ್ಷ ಪ್ರಶ್ನೆಯಾಗಿದೆ ನಗರ ಬೆಳೆದಂತೆ ಜನ ಸಂಖ್ಯೆ ಸಹ ಏರಿಕೆಯಾಗುತ್ತದೆ ‌ಅದಕ್ಕೆ ತಕ್ಕ ಸೌಲಭ್ಯ ಕೊಡಬೇಕಾಗಿದ್ದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದ್ದು ಅದನ್ನು ಕಲ್ಪಿಸುವಲ್ಲಿ ವಿಫಲರಾದ ಆಡಳಿತ ವಿರುದ್ಧ ಜನರ ಕೂಗೂ ಏಳುತ್ತದೆ ಇಲ್ಲಿ ಕೇವಲ ಸರ್ಕಾರ, ಜನ ಪ್ರತಿನಿಧಿಗಳನ್ನು ದೂಷಿಸಿದರೆ ಒಮ್ಮುಖ ಸಂಚಾರದಂತೆಯಾಗುತ್ತದೆ ಇಲ್ಲಿ ಸಾರ್ವಜನಿಕರ ಪಾತ್ರವು ಇದ್ದು ಪರಸ್ಪರ ಜವಾಬ್ದಾರಿ ಹಕ್ಕು ಮತ್ತು ಕರ್ತವ್ಯಗಳ ಬಗೆಗೆ ಗಮನ ಹರಿಸಬೇಕಿದೆ. ನಾಗರೀಕರಿಗೂ ಸಂವಿಧಾನದಲ್ಲಿ ಕೆಲವು ಕರ್ತವ್ಯಗಳ ಪಾಲನೆಗೆ ಆದೇಶಿಸಲಾಗಿದೆ ನಮ್ಮ ನಡುವಳಿಕೆಗಳು ಸಮಾಜದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ