ಸರ್ಕಾರ ಶ್ರೀಶರಣ ಹೂಗಾರ ಮಾದಯ್ಯನವರ ಹೆಸರಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಮನವಿ : ಜೂ.26 ರಂದು ಹೂಗಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ-ಈರಣ್ಣ .


          

 ರಾಯಚೂರು,ಜೂ.24- ಹೂಗಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೂ.26 ರಂದು ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಹೂಗಾರ ಸಮಾಜದ ಅಧ್ಯಕ್ಷರಾದ ಈರಣ್ಣ ಹೇಳಿದರು.     ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ  ಅಂದು ಬೆಳಿಗ್ಗೆ 10.30ಕ್ಕೆ ನಗರದ ಪತ್ರಿಕಾ ಭವನದ ಮೇಲ್ಮಹಡಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಹೂಗಾರ ಸಮಾಜದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ.60 ಕ್ಕೂ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ ಎಂದ ಅವರು  ಸುಮಾರು 75ಕ್ಕೂ ಅಧಿಕ ವಿದ್ಯಾರ್ಥಿಗಳು ಈಗಾಗಲೆ ಹೆಸರು ನೊಂದಾಯಿಸಿದ್ದು ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಳ್ಳಲಿದ್ದಾರೆಂದರು.  ಮೊದಲು ಬಾರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುತ್ತಿದ್ದು ಶೇ.90 ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲಾಗುವುದೆಂದ ಅವರು ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಹೂಗಾರ ಸಮುದಾಯದ ರಾಜ್ಯ ಸಮಿತಿ ಮುಖಂಡರು,ಹಿರಿಯರು ಭಾಗವಹಿಸಲಿದ್ದಾರೆಂದರು. ನಮ್ಮ ಸಮಾಜದಲ್ಲಿಯೂ ಆರ್ಥಿಕವಾಗಿ ಅಶಕ್ತರಿದ್ದು ಅವರ ಅಭಿವೃದ್ದಿಗಾಗಿ  ಸರ್ಕಾರ ಶ್ರೀಶರಣ ಹೂಗಾರ ಮಾದಯ್ಯನವರ ಹೆಸರಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದ ಅವರು ಅನೇಕ ಬಾರಿ ಈ ಬಗ್ಗೆ ಮನವಿ ಮಾಡಲಾಗಿದೆ ಎಂದರು.      ಜಿಲ್ಲಾ ಹೂಗಾರ ಸಮಾಜದ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ  ವೆಂಕಟೇಶ ಹೂಗಾರ ಮಾತನಾಡಿ ನಮ್ಮ ಸಮಾಜ ಸಣ್ಣ ಸಮುದಾಯವಾಗಿದ್ದು ನಮ್ಮ ಸಮಾಜದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅವರಿಗೆ ಪ್ರೋತ್ಸಾಹ ರೂಪದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆಂದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಲು ಎಲ್ಲರ ಸಹಕಾರ ಕೋರುತ್ತೇನೆಂದರು.                                                        ಈ ಸಂದರ್ಭದಲ್ಲಿ ಉಗ್ರ ನರಸಿಂಹಪ್ಪ ದಿನ್ನಿ, ಮಲ್ಲಿಕಾರ್ಜುನ ಹೂಗಾರ, ಮಲ್ಲಿಕಾರ್ಜುನ ಇದ್ದರು. 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ