ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹೆಸರಲ್ಲಿ ದುಷ್ಕರ್ಮಿಗಳಿಂದ ದೇಣಿಗೆ ಸಂಗ್ರಹ ಎಚ್ಚರ ವಹಿಸಲು ಭಕ್ತರಿಗೆ ಮನವಿ

 


ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹೆಸರಲ್ಲಿ ದುಷ್ಕರ್ಮಿಗಳಿಂದ ದೇಣಿಗೆ ಸಂಗ್ರಹ ಎಚ್ಚರ ವಹಿಸಲು  ಭಕ್ತರಿಗೆ ಮನವಿ                  

ರಾಯಚೂರು,ಜೂ.26-ಶ್ರೀಮಠದ ಹೆಸರಲ್ಲಿ ನಕಲಿ ವೈಬಸೈಟ್ ಸೃಷ್ಠಿಸಿ ದೇಣಿಗೆ ಸಂಗ್ರಹದ ಬಗ್ಗೆ ಭಕ್ತಾದಿಗಳು ಎಚ್ಚರ ವಹಿಸಬೇಕೆಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.                                               

ಶ್ರೀಮಠದ ಪರಿಮಳ ಪ್ರಸಾದವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಬಗ್ಗೆ ಗಮನಕ್ಕೆ ಬಂದಿದ್ದು ಅದಕ್ಕೆ ಭಕ್ತರು ಮೋಸ ಹೋಗಬಾರದು ಮತ್ತು ಶ್ರೀಮಠದಲ್ಲಿ ದಿನ ನಿತ್ಯ ಅನ್ನದಾನಕ್ಕೆ ದೇಣಿಗೆ ನೀಡಬೇಕೆಂದು ಕೆಲ ದುಷ್ಕರ್ಮಿಗಳು ಭಕ್ತರಿಗೆ ಕೋರುತ್ತಿದ್ದು ಅದಕ್ಕೆ ಯಾರು ಕಿವಿಗೊಡದಂತೆ ಹೇಳಿರುವ ಅವರು ಶ್ರೀಮಠದ ಅಧಿಕೃತ ಬ್ಯಾಂಕ್  ಖಾತೆ ಖಚಿತಪಡಿಸಿಕೊಂಡು ದೇಣಿಗೆ ನೀಡಬೇಕೆಂದು ಕೋರಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ