ಕಳೆಗುಂದಿದ ಮಣ್ಣೆತ್ತು ವ್ಯಾಪಾರ : ತಯಾರಕರ ಅಳಲು


ಕಳೆಗುಂದಿದ ಮಣ್ಣೆತ್ತು ವ್ಯಾಪಾರ : ತಯಾರಕರ ಅಳಲು ರಾಯಚೂರು,ಜೂ.27- ಭಾರತದೇಶ ಹಬ್ಬ ಹರಿದಿನಗಳ ಆಚರಣೆಗೆ ಬರವಿಲ್ಲದ ದೇಶವಾಗಿದೆ ಹಿಂದೂ ಧರ್ಮದಲ್ಲಿ ವರ್ಷ ಪೂರ್ತಿ ಹಬ್ಬಗಳನ್ನು ಕಾಣುತ್ತೇವೆ ಅನೇಕ ಹಬ್ಬಗಳಲ್ಲಿ ಮಣ್ಣೆತ್ತಿನ ಅಮವಾಸ್ಯೆ ಹಬ್ಬವು ಒಂದಾಗಿದ್ದು ಗ್ರಾಮಿಣ ಭಾಗದಲ್ಲಿ ಹಾಗೂ ನಗರ ಪ್ರದೇಶದಲ್ಲಿಯೂ ಮಣ್ಣೆತ್ತು ಅಮವಾಸ್ಯೆ ಆಚರಣೆ ಕಾಣುತ್ತೇವೆ ಕೃಷಿ ಚಟುವಟಿಕೆಗಳಲ್ಲಿ ಎತ್ತುಗಳ ಶ್ರಮಕ್ಕೆ ಯಾವ ಯಂತ್ರವು ಸರಿಸಾಟಿಯಾಗಲಾರವು. ಭೂಮಿ ಹದ ಮಾಡಲು, ಬೀಜ ಬಿತ್ತಲು ಎತ್ತುಗಳ ಅವಶ್ಯಕತೆಯಿದೆ.ಆಧುನಕತೆ ಬೆಳೆದು ಟ್ರ್ಯಾಕ್ಟರ್ ಬಂದರು ಸಹ ಸಣ್ಣ ಹಿಡುವಳಿದಾರರಿಗೆ ಎತ್ತುಗಳೆ ಆತ್ಮೀಯ ಗೆಳೆಯರಿದ್ದಂತೆ ಅಂತಹ ಎತ್ತುಗಳ ಪೂಜೆಗೆ ಭಾರತದಲ್ಲಿ ಮೇಲಾಗಿ ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಮಣ್ಣೆತ್ತಿನ ಅಮವಾಸ್ಯೆಗೆ ಪ್ರಾಧಾನ್ಯತೆ ಅಧಿಕವಾಗಿದೆ. ನಗರದಲ್ಲಿ ಮಣ್ಣೆತ್ತಿನ ತಯಾರಿಸುವವರು ಕೋಸಿಗಿಯಿಂದ ಬರುತ್ತಾರೆ ಮಣ್ಣೆತ್ತುಗಳನ್ನು ಹೊತ್ತು ನಗರದೆಲ್ಲಡೆ ತಿರುಗಿ ಮಾರಾಟ ಮಾಡುತ್ತಾರೆ.ಈ ಬಾರಿಯೂ ಮಣ್ಣೆತ್ತು ಮಾರಾಟ ನಗರದಲ್ಲಿ ಕಾಣುತ್ತಿದ್ದು ಮಣ್ಣೆತ್ತಿನ ಅಮವಾಸ್ಯೆ ಎರೆಡು ದಿನ ಬಂದಿವೆ ಬುಧವಾರ ಮಣ್ಣೆತ್ತಿನ ಅಮವಾಸ್ಯೆ ಆಚರಣೆರಣೆಯಿದೆ.                          "ಮಣ್ಣೆತ್ತಿನ ಅಮವಾಸ್ಯೆ ಹಿನ್ನಲೆ ಮಣ್ಣೆತ್ತು ಮಾರಾಟ ಮಾಡುಲು ಬಂದಿದ್ದೇವೆ ಜೋಡಿ ಮಣ್ಣೆತ್ತಿನ ಬೆಲೆ 50 ರೂ .ನಿಗದಿ ಮಾಡಿದ್ದೇವೆ ವ್ಯಾಪಾರ ಕುಂದಿದ್ದು ಎರೆಡು ಅಮವಾಸ್ಯ ಹಿನ್ನಲೆ ಎಂದು ಆಚರಿಸಬೇಕೆಂಬ ಗೊಂದಲದಲ್ಲಿ ಗ್ರಾಹಕರಿದ್ದಾರೆ"      -ನರಸರೆಡ್ಡಿ, ಮಣ್ಣೆತ್ತು ತಯಾರಕ, ಕೋಸಿಗಿ ಗ್ರಾಮ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ