ಇಸ್ಕಾನ್ ಸಂಸ್ಥೆಯಲ್ಲಿ ದ್ವೇಷ, ಹಿಂಸೆಯನ್ನು ಪ್ರಚೋದಿಸುವುದಿಲ್ಲ: ಜು.೧ ರಂದು ಶಾಂತಿ, ಸಮೃದ್ಧಿ ಹಾಗೂ ಮಳೆಗಾಗಿ ಕೀರ್ತನ ಮೇಳ-ವರದ ಕೃಷ್ಣ ದಾಸ


 ಇಸ್ಕಾನ್ ಸಂಸ್ಥೆಯಲ್ಲಿ  ದ್ವೇಷ,  ಹಿಂಸೆಯನ್ನು ಪ್ರಚೋದಿಸುವುದಿಲ್ಲ
ಜು.೧ ರಂದು ಶಾಂತಿ, ಸಮೃದ್ಧಿ ಹಾಗೂ ಮಳೆಗಾಗಿ ಕೀರ್ತನ ಮೇಳ-ವರದ ಕೃಷ್ಣ ದಾಸ

ರಾಯಚೂರು,ಜೂ.೨೯-ನಗರದ ಆಶಾಪೂರು ರಸ್ತೆಯ  ಇಸ್ಕಾನ್ ದೇವಸ್ಥಾನದಲ್ಲಿ ಜು.೧ ರಂದು ದೇಶದಲ್ಲಿ ಶಾಂತಿ ,ಸಮೃದ್ಧಿ ಹಾಗೂ ಉತ್ತಮ ಮಳೆಗಾಗಿ ೧೨ ಗoಟೆಗಳ ಕಾಲ ತಡೆರಹಿತ ಭಜನೆ ಸಂಕೀರ್ತನೆಗಳ ಕೀರ್ತನ ಮೇಳ ಆಯೋಜಿಸಲಾಗಿದೆ ಎಂದು ರಾಯಚೂರು ಇಸ್ಕಾನ್ ದೇವಸ್ಥಾನದ ಅಧ್ಯಕ್ಷ ವರದಕೃಷ್ಣ ದಾಸ್ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರದ ಇಸ್ಕಾನ್ ದೇವಸ್ಥಾನದಲ್ಲಿ ವರ್ಷಪೂರ್ತಿ ಅನೇಕ ಧಾರ್ಮಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತ ಬರಲಾಗಿದ್ದು ಇದೀಗ ಜು.೧ ರಂದು ೧೨ ಗಂಟೆಗಳ ತಡೆರಹಿತ ಬಜನೆ ಆಯೋಜಿಸಲಾಗಿದ್ದು ಭಕ್ತರು ಪಾಲ್ಗೊಳ್ಳಬಹುದೆಂದ ಅವರು ಕಲ್ಪತರು ೨೦೨೨ ಕಾರ್ಯಕ್ರಮದಲ್ಲಿ ಶಾಲಾ ಕಾಳೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು ಆ.೧೨ ರಂದು ಬಲರಾಮ ಜಯಂತಿ,ಆ.೧೯ ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮುಂತಾದ ಕಾರ್ಯಕ್ರಮ ಆಯೋಜಿಲಾಗಿದೆ ಎಂದರು.
ದೇಶವಲ್ಲದೆ ವಿದೇಶಗಳಲ್ಲಿ ಸುಮಾರು ೧೫೦೦ ಸ್ಥಳಗಳಲ್ಲಿ ಇಸ್ಕಾನ್ ಸಂಸ್ಥೆಯಿದ್ದು ವೈದಿಕ ಪರಂಪರೆ ಹಾಗೂ ಭಾರತೀಯ ಸಂಪ್ರದಾಯ ಬೋಧನೆ ಪ್ರಮುಖವಾಗಿದ್ದು ಇಸ್ಕಾನ್ ಸಂಸ್ಥೆಗಳಲ್ಲಿ ದ್ವೇಷ ಹಾಗೂ ಹಿಂಸೆಯನ್ನು ಪ್ರಚೋದಿಸುವುದಿಲ್ಲವೆಂದ ಅವರು ಇಸ್ಕಾನ್ ದೇವಸ್ಥಾನಕ್ಕೆ ಎಲ್ಲ ಧರ್ಮದವರು ಬರಬಹುದೆಂದರು.
ಮಾದರಿ ಸಮಾಜ ನಿರ್ಮಾಣ  ಇಸ್ಕಾನ್ ಸಂಸ್ಥೆ ಉದ್ದೇಶವಾಗಿದ್ದು ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೆ ನಾಂದಿ ಹಾಡಿದ್ದು ನಮ್ಮ ಇಸ್ಕಾನ್ ಸಂಸ್ಥೆ ಎಂದರು. ಈ ಸಂದರ್ಭದಲ್ಲಿ ಸಾರಥಿ ಶಾಮದಾಸ್,ಭಿಮೇಶ, ಸಸಿಮುಖಿ ಸಖಿ,ಪಾಲಿಕಾ ಪಾವನಿ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ