ಖ್ಯಾತ ನಿರೂಪಕ ಮುರಳಿಧರ ಕುಲಕರ್ಣಿಯವರಿಗೆ ಸನ್ಮಾನ

*ಖ್ಯಾತ ನಿರೂಪಕ ಮುರಳಿಧರ ಕುಲಕರ್ಣಿಯವರಿಗೆ ಸನ್ಮಾನ*
ರಾಯಚೂರು.ಜೂ.26- ನಗರದ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಕರಾಗಿರುವ ಹಾಗೂ ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷರಾದ ಮುರಳಿಧರ ಕುಲಕರ್ಣಿಯವರಿಗೆ ನಿನ್ನೆ ರಂಗಮಂದಿರದಲ್ಲಿ ರಾಗ-ರಂಗ ಸಾಂಸ್ಕೃತಿಕ ವೇದಿಕೆಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
     ಶಿಕ್ಷಣ ಇಲಾಖೆಯ ನಿವೃತ್ತ ಸೂಪರ್ಡೆಂಟ್ ಶ್ರೀ ಪಂಪಾಪತಿ ಹೂಗಾರ್ ಅವರ ಸನ್ಮಾನ ಸಮಾರಂಭ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು ಮುರಳಿಧರ ಕುಲಕರ್ಣಿಯವರಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಜಯೋಗಿನಿ ಸ್ಮಿತಾ ಅಕ್ಕನವರು, ಶ್ರೀ ರಾಮನ ಗೌಡ ಏಗನೂರು ಜೆಡಿಎಸ್ ಮುಖಂಡರು, ಇವರು ಸನ್ಮಾನಿಸಿ ಅಭಿನಂದಿಸಿದರು.
      ಮುರಳಿಧರ ಕುಲಕರ್ಣಿಯವರು 35 ವರ್ಷಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಯಚೂರಿನಲ್ಲಿ ಆಯೋಜಿಸುವ ಮೂಲಕ ಸಾಂಸ್ಕೃತಿಕ  ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ.
  ಈಗಾಗಲೇ ತಿರುಪತಿ, ಬೆಳಗಾವಿ, ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿ, ಮೈಸೂರು, ಮುಂತಾದ ಕಡೆಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿ ಮೆಚ್ಚುಗೆ ಗಳಿಸಿದ್ದಾರೆ.
     ರಾಯಚೂರಿನಲ್ಲಿ ನಡೆಯುವ ಮುಂಗಾರು ಉತ್ಸವ, ಗೋವಿಂದ ಗಾನ, 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಸ್ವತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಂತ್ರಾಲಯ ಮಠದ ಸುಧಾಮಂಗಳ ಕಾರ್ಯಕ್ರಮದಲ್ಲಿ, ಪ್ರತಿಭೋತ್ಸವ ಕಾರ್ಯಕ್ರಮಗಳಲಿ ನಿರೂಪಣೆ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ.
   ಇವರ ಜೊತೆಗೆ ಕೆ, ಡಬ್ಲ್ಯೂ, ಟಿ. ಮುಖ್ಯ ಗುರುಗಳಾದ  ಪ್ರಹಲ್ಲಾದ್ ದಿಗ್ಗಾವಿ ಕಲಾವಿದರಾದ ಸುಧಾಕರ ಅಸ್ಕಿಹಾಳ, ವೀರೇಂದ್ರ ಕುರುಡಿ, ವೆಂಕಟೇಶ ಆಲ್ಕೋಡ್, ಶ್ರೀಮತಿ ಮಹಾಲಕ್ಷ್ಮಿ, ಅಶ್ವಿನ್, ದೀಪ, ಮುಂತಾದ ಕಲಾವಿದರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು
    ಕೊನೆಯಲ್ಲಿ ಹಲವಾರು ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ