ಐವತ್ತು ದಿನದತ್ತ ಏಮ್ಸ್ ಹೋರಾಟ : ಸರ್ಕಾರ ಮೌನ ನಡೆ.!

 ಐವತ್ತು ದಿನದತ್ತ ಏಮ್ಸ್ ಹೋರಾಟ : ಸರ್ಕಾರ  ಮೌನ ನಡೆ.! 


ರಾಯಚೂರು,ಜೂ.25- ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ  ನೀಡಬೇಕೆಂದು ಒತ್ತಾಯಿಸಿ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ 44 ದಿನ ಪೂರೈಸಿ ಐವತ್ತನೆ ದಿನದತ್ತ ಮುನ್ನುಗ್ಗುತ್ತಿದ್ದು ಸರ್ಕಾರ ಮೌನ ನಡೆ ಅನುಸರಿಸುತ್ತಿದ್ದು ಹೋರಾಟನಿರತರ ತಾಳ್ಮೆ ಪರೀಕ್ಷೆಗೊಡ್ಡಿದೆ. ಜಿಲ್ಲಾ ಉಸ್ತುವಾರು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ತಮ್ಮದೆ ರೀತಿಯಲ್ಲಿ ಏಮ್ಸ್ ತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ ಇದುವರೆಗೂ ಯಾವುದೆ ಪೂರಕ ಸ್ಪಂದನೆ ದೊರೆತಿಲ್ಲ ದಿನ ನಿತ್ಯ ಸಂಘ ಸಂಸ್ಥೆಗಳು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸುತ್ತಿದ್ದು ಕಾಂಗ್ರೇಸ್ ಪಕ್ಷ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಕಾಂಗ್ರೆಸ್ ಮುಖಂಡ ಬಶೀರುದ್ದೀನ್ ಶಾಸಕ ಡಾ.ಶಿವರಾಜ ಪಾಟೀಲರು ಏಕೆ ಏಮ್ಸ್ ತರುವಲ್ಲಿ ಸರ್ಕಾರಕ್ಕೆ ಒತ್ತಡ ಹಾಕುತ್ತಿಲ್ಲ ಅವರಿಗೆ ಏಮ್ಸ್ ಬರುವುದು ಬೇಡವೆ ಎಂದು ಪ್ರಶ್ನಿಸಿದ್ದಾರೆ ಏಮ್ಸ್ ಹೋರಾಟವನ್ನು ಸರ್ಕಾರ ಲಘುವಾಗಿ ಪರಿಗಣಿಸಿದರೆ ಅದು ಸರ್ಕಾರಕ್ಕೆ ಮುಂದೊಂದು ದಿನ ಸುತ್ತಿಕೊಳ್ಳಬಹುದು ಪ್ರಜಾ ಪ್ರಭುತ್ವದಲ್ಲಿ ಧರಣಿ, ಸತ್ಯಾಗ್ರಹಗಳ ಮೂಲಕ ಪರಿಕಿಯರಿಂದ ಸ್ವಾತಂತ್ರ್ಯ ಪಡೆದ ಉದಾಹರಣೆಯಿದ್ದು ಎಂತಹ ಕಠಿಣಾಥಿ ಕಠಿಣ ಸರ್ಕಾರವಿದ್ದರೂ ಶಾಂತಿ ರೀತಿಯಲ್ಲಿ ಪ್ರತಿಭಟನೆ ಮಾಡುವ ಜನರ ಧ್ವನಿ ಅಡಗಿಸಲು ಅಸಾಧ್ಯ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಪ್ರತಿಯೋಬ್ಬರಿಗೂ ಸಂವಿಧಾನ ನೀಡಿದೆ ಸಮಾಜದಲ್ಲಿ ಶಾಂತಿ ಕದಡದೆ ಕನೂನಿ
ಚೌಕಟ್ಟಿನಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರು ಉಳ್ಳವರಾಗಿದ್ದು ಸರ್ಕಾರ ಜನರ ಭಾವನೆಗೆ ಸ್ಪಂದಿಸಿದರೆ ಅದರ ಘನತೆ ಹೆಚ್ಚುತ್ತದೆ ಜೊತೆಗೆ ಜನರ ಪ್ರಶಂಸೆಗೂ ಒಳಪಡುತ್ತದೆ .


ಹಿಂದೆ ಐಐಟಿ ಹೋರಾಟವು ನೂರಾರು ದಿನಗಳನ್ನು ಪೂರೈಸಿತು ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಅದು ಕೈ ತಪ್ಪಿತು ಇದೀಗ ಏಮ್ಸ್ ಹೋರಾಟ ಶಾಂತಿಯುತವಾಗಿ ನಡೆದಿದ್ದು ಹೋರಾಟಗಾರರು ಅಚಲವಾಗಿ ಏಮ್ಸ್ ಪಡೆದೆ ತೀರುತ್ತೇವೆ ಎಂಬ ಆಶಾಭಾವನೆ ಉಳ್ಳವರಾಗಿದ್ದು ಸರ್ಕಾರ ಇತ್ತ ಧಾವಿಸಿ ಅವರ ಮನವಿ ಪರಿಗಣಿಸಬೇಕು ಮಹತ್ವಾಕಾಂಕ್ಷೆ ಜಿಲ್ಲೆಯಾದ ಈ ನಮ್ಮ ಜಿಲ್ಲೆಗೆ ಏಮ್ಸ್ ಬಂದರೆ ಜಿಲ್ಲೆ ಭಾರತ ಭೂಪಟದಲ್ಲಿ ಅಗ್ರ ಸ್ಥಾನದಲ್ಲಿ ಕಂಗೊಳಿಸುತ್ತದೆ ಎಂಬ ಬಯಕೆ ಇಲ್ಲಿ ಯ ಜನರದ್ದಾಗಿದೆ...    
   
                                                      

"  ಏಮ್ಸ್ ಪಡೆದೆ ತೀರುತ್ತೇವೆಂಬ ಆಶಾಭವನೆ ಉಳ್ಳವರಾಗಿದ್ದು  ಏಮ್ಸ್ ನಮ್ಮ ಸ್ವಾರ್ಥಕ್ಕಾಗಿ ಕೇಳುತ್ತಿಲ್ಲ ಬದಲಾಗಿ ಇಲ್ಲಿಯ ಆರೋಗ್ಯ ಸೌಲಭ್ಯ ಉತ್ತಮ ಗೊಳ್ಳುತ್ತದೆ ಎಂಬುದಕ್ಕಾಗಿ ಮಾತ್ರವೆ ಆಗಿದೆ. ನಮ್ಮ ಹೋರಾಟ ಐವತ್ತು ದಿನಗಳತ್ತ ಸಾಗಿದ್ದು ಜನರ ಬೆಂಬಲ ದಿನೆ ದಿನೆ ಇಮ್ಮಡಿಯಾಗುತ್ತಿದೆ  ಸಂಘ ಸಂಸ್ಥೆಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಬಲ ವ್ಯಕ್ತಪಿಡಿಸಿದ್ದಾರೆ ವಿರೋಧ ಪಕ್ಷವಾಗಿರುವ ಜೆಡಿಎಸ್ ಪಕ್ಷ ಏಕೆ ಬೆಂಬಲಿಸಿಲ್ಲವೆಂದು ತಿಳಿಯುತ್ತಿಲ್ಲ"                                                  

 - ಬಸವರಾಜ ಕಳಸ , ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ, ರಾಯಚೂರು.    

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ