ಕರ್ಕಷ ಸೈಲೆಂನ್ಸರ್ ಗಳನ್ನು ಪರ್ಮನೆಂಟ್ ಸೈಲೆಂಟ್ ಮಾಡಿದ ಪೊಲೀಸರು
ಕರ್ಕಷ ಸೈಲೆಂನ್ಸರ್ ಗಳನ್ನು ಪರ್ಮನೆಂಟ್ ಸೈಲೆಂಟ್ ಮಾಡಿದ ಪೊಲೀಸರು . ರಾಯಚೂರು,ಜೂ.24- ದೋಷ ಪೂರಿತ ಹಾಗೂ ಕರ್ಕಷವಾಗಿ ಶಬ್ಧ ಮಾಡುತ್ತ ವಾಯು ಮತ್ತು ಶಬ್ಧ ಮಾಲಿನ್ಯಕ್ಕೆ ಕಾರಣವಾದ ವಾಹನಗಳ ಸೈಲೇಂನ್ಸರ್ ಗಳನ್ನು ಪೊಲೀಸರು ಸೈಲೆಂಟ್ ಮಾಡಿದರು. ಇಂದು ಬೆಳಿಗ್ಗೆ ಎಸ್ಪಿ ಕಚೇರಿ ಅವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ. ರವರ ಆದೇಶದಂತೆ ದೋಷಪೂರಿತ ಸೈಲೆಂಸ್ ರ್ ಗಳನ್ನು ರೋಡ್ ರೋಲರ ಚಲಾಯಿಸುವ ಮೂಲಕ ಅಪ್ಪಚ್ಚಿ ಮಾಡಲಾಯಿತು. ಜಿಲ್ಲೆಯಾದ್ಯಂತ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಕರ್ಕಷ ಶಬ್ಧ ಮಾಡುವ ವಾಹನಗಳ ಮಾಲಿಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಸುಮಾರು 2.95 ಲಕ್ಷ ರೂ. ದಂಡವಿಧಿಸಿ ದೋಷಪೂರಿತ ಸೈಲೆಂನ್ಸ ರ್ ಗಳ ಸದ್ದು ಕೇಳದಂತೆ ಪರ್ಮನೆಂಟ್ ಸೈಲೆಂಟ್ ಮಾಡಲಾಯಿತು.
Comments
Post a Comment