ಸಿಂಧನೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕಂಬಳಿ, ಪ್ರ.ಕಾರ್ಯದರ್ಶಿಯಾಗಿ ಗೊರೇಬಾಳ ಅವಿರೋಧ ಆಯ್ಕೆ
ರಾಯಚೂರು,ಜೂ.27- ಜಿಲ್ಲೆಯ ಸಿಂಧನೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎಚ್.ಕಂಬಳಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಶರಣೇಗೌಡ ಗೋರೇಬಾಳ ಅವಿರೋಧ ಆಯ್ಕೆಯಾದರು.
ಇಂದು ಸಿಂಧನೂರು ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಭೆ ನಡೆಯಿತು.
ಅಧ್ಯಕ್ಷ ಹಾಗೂ ಪ್ರ.ಕಾರ್ಯದರ್ಶಿ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಅವರ ಆಯ್ಕೆಯನ್ನು ಘೋಷಿಸಲಾಯಿತು.
ಜಿ.ಪಂ. ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ, ಉಪಾಧ್ಯಕ್ಷ ಎಂ.ವೀರಭದ್ರಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಸಿಂಧನೂರಿನ ಪತ್ರಕರ್ತರು ಇದ್ದರು.
Comments
Post a Comment