ಕಲಾ ಸಂಕುಲ ಸಂಸ್ಥೆಯಿAದ ಚಿಂದಿ ಸ್ಟರ‍್ಸ್ ಕಾರ್ಯಕ್ರಮ : ಇಂಗ್ಲೀಷ್ ವ್ಯಾಮೋಹದಿಂದ ಪಾಲಕರು ಹೊರಬರಬೇಕು-ಕುಂವೀ
ಕಲಾ ಸಂಕುಲ ಸಂಸ್ಥೆಯಿOದ ಚಿಂದಿ ಸ್ಟರ‍್ಸ್ ಕಾರ್ಯಕ್ರಮ:
ಇಂಗ್ಲೀಷ್ ವ್ಯಾಮೋಹದಿಂದ ಪಾಲಕರು ಹೊರಬರಬೇಕು-ಕುಂವೀ
ರಾಯಚೂರು,ಜೂ.೧೯-ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳಿಸುವ ಮೂಲಕ ಇಂಗ್ಲೀಷ್ ಶಾಲೆ ವ್ಯಾಮೋಹದಿಂದ ಹೊರಬರಬೇಕೆಂದು ಹಿರಿಯ ಸಾಹಿತಿಗಳಾದ ಕುಂ.ವೀರಭದ್ರಪ್ಪ ಹೇಳಿದರು.
ಅವರಿಂದು ನಗರದ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಕಲಾ ಸಂಕುಲ ಸಂಸ್ಥೆ ಹಮ್ಮಿಕೊಳ್ಳಲಾದ ಚಿಂದಿ ಸ್ಟರ‍್ಸ್ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ನಾನು ಇಂದು ನಿಮ್ಮ ಮುಂದೆ ನಗುನಗುತ್ತ ನಿಲ್ಲಬೇಕಾದರೆ ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿದ್ದಿರಿಂದ ಮಾರ್ಮಿಕವಾಗಿ ನುಡಿದ ಅವರು ಇಂಗ್ಲೀಷ್ ಶಾಲೆಗೆ ನಮ್ಮ ಮಕ್ಕಳನ್ನು ನಾನು ಕಳಿಸಿದ್ದರೆ ಇಂದು ನಾನು ವೃದ್ದಾಶ್ರಮಕ್ಕೆ ಸೇರಿರುತ್ತಿದ್ದೆನೊ ಓನೊ ಎಂದರು. ಇಂದಿನ ಕಾರ್ಯಕ್ರಮ ಚಿಂದಿ ಆಯುವ ಮಕ್ಕಳಿಗೆ ಮೀಸಲಾಗಿದೆ ಸ್ಲಂನಲ್ಲಿ ವಾಸಿಸಿ ದಿನ ನಿತ್ಯ ಚಿಂದಿ ಆಯುವ ಮೂಲಕ ಜೀವನ ಸಾಗಿಸಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಏಲ್ಗೆಗೆ ನಾವೆಲ್ಲ ಮುಂದಾಗಬೇಕೆAದರು. ಅವಮಾನ ಮತ್ತು ಶ್ರಮ ಮನುಷ್ಯನಲ್ಲಿ ಕಿಚ್ಚು ತರುತ್ತದೆ ಎಂದ ಅವರು ಕೆಳ ಸಮುದಾಯದಲ್ಲಿ ಬುದ್ದಿವಂತರಿದ್ದು ಅವರಿಗೆ ಅವಕಾಶ ದೊರಕಬೇಕೆಂದರು.
ರಾಯಚೂರು ನಗರ ನನಗೆ ಅನೇಕ ವರ್ಷಗಳೀದ ಚಿರಪರಿಚಿತ ಈ ನಗರ ಕೃಷ್ಣದೇವರಾಯನ ಆಡಳಿತಕ್ಕೊಳಪಟ್ಟು ೫೦೦ ವರ್ಷ ಗತಸಿದ್ದು ಅದರ ಹಿನ್ನಲೆಯಲ್ಲಿ ನಾನು ಇಲ್ಲಿ ಉತ್ಸವ ನಡೆಸುವಂತೆ ಈ ಹಿಂದೆ ಕೋರಿದ್ದೆನೆಂದ ಅವರು ಇಂತಹ ಐತಿಹಾಸಿಕ ಪರಂಪರೆಯುಳ್ಳ ನಗರದಲ್ಲಿ ಕಲುಷಿತ ನೀರು ಸೇವನೆಯಿಂದ ದಿನ ನಿತ್ಯ ಜನರು ಸಾವು ನೋವಿನಿಂದ ಒದ್ದಾಡುತ್ತಿದ್ದಾರೆಂದರೆ ಇಲ್ಲಿ ನಗರಸಭೆ, ಜನ ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲವೆಂದು ತಿಳಿಯುತ್ತದೆ ಎಂದರು.
ಶಾಸಕರಾದ ಡಾ.ಶಿವರಾಜ ಪಾಟೀಲ ಮಾತನಾಡಿ ಚಿಂದಿ ಆಯುವ ಮಕ್ಕಳು ಈ ಸಮಾಜದ ಆಸ್ತಿ ಅವರಿಗೆ ಶಿಕ್ಷಣ ಮೂಲಭೂತ ಸೌಲಭ್ಯ ದೊರಕಬೇಕು ಅವರಲ್ಲಿ ಅಡಗಿರುವ ಕಲೆ ಹೊರಹೊಮ್ಮಬೇಕೆಂದರು. ಸಮಾಜದಲ್ಲಿ ಇಂತಹ ಮಕ್ಕಳು ಇದ್ದಾರೆ ಎಂಬುದು ನಾವೆಲ್ಲರು ತಲೆ ತಗ್ಗಿಸಬೇಕು ಅವರಿಗೆ ಸಮಾನ ಅವಕಾಶ ದೊರಕಬೇಕೆಂದರು.
ಚಿತ್ರ ನಟಿ ಮಿಸ್ ಇಂಡಿಯಾ ಡಾ.ಪೂಜಾ ರಮೇಶ ಮಾತನಾಡಿ ಜಿಲ್ಲೆಯ ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆಂದ ಅವರು ನನಗೆ ಸದಾ ಬೆನ್ನೆಲುಬಾಗಿ ನಿಂತಿರುವ ಕಲಾ ಸಂಕುಲ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಹೂವಿನ ಜೊತೆ ದಾರವು ದೇವರಿಗೆ ಸಲ್ಲಿದಂತೆ ನಾನು ನಿಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಕೊಂಚ ವiಟ್ಟಿಗೆ ಹೆಸರು ಗಳಿಸಿದ್ದೇನೆಂದರು.
ರೇಖಾ ಬಡಿಗೇರ್ ರಚಿತ ಛಿದ್ರಗೊಂಡ ಬದುಕುಗಳು ಪುಸ್ತಕ ಬಿಡುಗಡೆ ಮಾಡಲಾಯಿತು. ಸಾನಿಧ್ಯವನ್ನು ಬೃಹನ್ಮಠ ಸುಲ್ತಾನಪೂರ ಶ್ರೀ ಶಂಭುಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ವೇದಿಕೆ ಮೇಲೆ ಅಂತರಾಷ್ಟಿçÃಯ ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಾಟಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ ಕುಮಾರ್ ಹೊಸಮನಿ, ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ, ಕಲಬುರ್ಗಿ ವಿವಿ ಸಿಂಡಿಕೇಟ್ ಸದಸ್ಯ ಡಾ.ಶರಣ ಬಸವ ಪಾಟೀಲ ಜೋಳದಹೆಡಗಿ, ಇಂಟಲಿಜೆನ್ಸ್ ಡಿಎಸ್ಪಿ ದತ್ತಾತ್ರೆಯ ಕಾರ್ನಾಡ್, ಪತ್ರಕರ್ತರಾದ ಭೀಮರಾಯ ಹದ್ದಿನಾಳ, ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ರೇಖಾ ಬಡಿಗೇರ್ ಇನ್ನಿತರರು ಇದ್ದರು. ಮಾರುತಿ ಬಡಿಗೇರ್ ಸ್ವಾಗತಿಸಿದರು, ಅಮರೇಗೌಡ ನಿರೂಪಿಸಿದರು. ಮಕ್ಕಳಿಂದ ಮನಮೋಹಕ ನೃತ್ಯ ಕಾರ್ಯಕ್ರಮ ನೆರೆದವರ ಮನಸೂರೆಗೊಂಡಿತು.
Comments
Post a Comment