ಲಿಂಗಸೂಗೂರು ತಾಲ್ಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗುರುರಾಜ ಗೌಡೂರು, ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿ ಅವಿರೋಧ ಆಯ್ಕೆ
ಲಿಂಗಸೂಗೂರು ತಾಲ್ಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗುರುರಾಜ ಗೌಡೂರು, ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿ ಅವಿರೋಧ ಆಯ್ಕೆ
ರಾಯಚೂರು,ಜೂ.29- ಕಾರ್ಯನಿರತ ಪತ್ರಕರ್ತರ ಸಂಘದ ಲಿಂಗಸುಗೂರು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಜಿಲ್ಲಾಧ್ಯಾಕ್ಷ ಆರ್. ಗುರುನಾಥ ಅಧ್ಯಕ್ಷತೆಯಲ್ಲಿ ಇಂದು ಪತ್ರಿಕಾ ಭವನದಲ್ಲಿ ನಡೆಯಿತು. ತಾಲ್ಲೂಕ ಅಧ್ಯಕ್ಷರಾಗಿ ಗುರುರಾಜ ಗೌಡೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿಯವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷ ಹಟ್ಟಿ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಮಡಿವಾಳ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಯ್ಯಸ್ವಾಮಿ, ಶಿವರಾಜ ಕೆಂಬಾವಿ, ಅಮರೇಶ ಕಲ್ಲೂರು, ಶರಣಯ್ಯ ಒಡೆಯರ್ , ಅಮ್ಜದ್ ಕಂದಗಲ್, ರವಿಕುಮಾರ, ಬಲಭೀಮರಾವ್ ಕುಲಕರ್ಣಿ, ದೇವಣ್ಣ ಕೋಡಿಹಾಳ ಹಾಗೂ ಹಿರಿಯ ಪತ್ರಕರ್ತರಾದ ಬಿ.ಎ.ನಂದಿಕೋಲಮಠ, ಗುರುರಾಜ ಮುತಾಲಿಕ, ಖಾಜಾ ಹುಸೇನ, ಆರ್.ವಿ.ಗುಮಾಸ್ತೆ, ಘನಮಠದಯ್ಯ, ನಾಗರಾಜ ಮಸ್ಕಿ, ಅಮರೇಶ ಬಲ್ಲಟಗಿ ಮತ್ತು ಲಿಂಗಸುಗೂರು, ಮುದಗಲ್ ಮತ್ತು ಹಟ್ಟಿ ಪರ್ತಕರ್ತರು ಇದ್ದರು.
Comments
Post a Comment