ಚುಕ್ಕಿ ಚಿತ್ರ ಕಲಾವಿದ ಎಚ್ಎಸ್ ಮ್ಯಾದರ್ ಇವರಿಗೆ ಶೃತಿ ಸಾಹಿತ್ಯ ಮೇಳದಿಂದ ಸನ್ಮಾನ
ಚುಕ್ಕಿ ಚಿತ್ರ ಕಲಾವಿದ ಎಚ್ಎಸ್ ಮ್ಯಾದರ್ ಇವರಿಗೆ ಶೃತಿ ಸಾಹಿತ್ಯ ಮೇಳದಿಂದ ಸನ್ಮಾನ
ರಾಯಚೂರು,ಜೂ.26- ಕನ್ನಡದ ವರನಟ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಮೇರುನಟ ಡಾಕ್ಟರ್ ರಾಜಕುಮಾರ್ ಅವರ ವಿವಿಧ ಭಂಗಿಗಳ 100 ಚುಕ್ಕಿ ಚಿತ್ರ ಗಳನ್ನು ಬಿಡಿಸಿ ದಾಖಲೆ ಮಾಡಿದ ನಗರದ ಚಿತ್ರ ಕಲಾವಿದ ಶ್ರೀ ಎಚ್ ಎಚ್ ಮ್ಯಾದರ್ ಅವರಿಗೆ ರಾಯಚೂರಿನ ಶೃತಿ ಸಾಹಿತ್ಯ ಮೇಳದ ವತಿಯಿಂದ ಇಂದು ಸಂಜೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶೃತಿ ಸಾಹಿತ್ಯ ಮೇಳದ ಗೌರವ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಜಯಲಕ್ಷ್ಮಿ ಮಂಗಳಮೂರ್ತಿ ಅವರು ಮಾತನಾಡಿ, ಎಚ್ ಎಚ್ ಮ್ಯಾಧಾರ್ ಅವರು ಚುಕ್ಕಿ ಚಿತ್ರಗಳು, ಚಿತ್ರಕಲೆಯಲ್ಲಿ ಹೊಸ ಮನ್ವಂತರ ವನ್ನು ಸೃಷ್ಟಿ ಮಾಡಿವೆ, ಇವರು ಬಿಡಿಸಿದ ಚಿತ್ರಗಳು ಇತಿಹಾಸವನ್ನು ಸೃಷ್ಟಿಸುವುದರ ಜೊತೆಗೆ ತಲೆತಲಾಂತರ ಗಳವರೆಗೆ ಇರುತ್ತವೆ ಎಂದು ಹೇಳಿದರು.
ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ಮಾತನಾಡಿ ಶ್ರೀ ಎಚ್ ಎಚ್ ಮ್ಯಾಧಾರ್ ಅವರು ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಕಟ್ಟ ಅಭಿಮಾನಿಗಳಾಗಿದು, ಇವರು ದೇಶದಲ್ಲಿಯೇ ಯಾರೂ ಮಾಡದ ಸಾಧನೆಯನ್ನು ಮಾಡಿದ್ದಾರೆ ಅದರಲ್ಲಿ ವಿಶೇಷವಾಗಿ ಡಾಕ್ಟರ್ ರಾಜಕುಮಾರ್ ಅಭಿನಯದ ಪ್ರಸಿದ್ಧ ಚಿತ್ರಗಳಾದ ಬೇಡರ ಕಣ್ಣಪ್ಪ, ಶ್ರೀ ಕೃಷ್ಣದೇವರಾಯ, ಶ್ರೀ ಮಂತ್ರಾಲಯ ಮಹಾತ್ಮೆ ಶ್ರೀ ರಾಘವೇಂದ್ರ ಗುರುಗಳು, ಮಯೂರ, ಭಕ್ತ ಕುಂಬಾರ, ಮುಂತಾದ ಚಲನಚಿತ್ರಗಳಲ್ಲಿ ಡಾಕ್ಟರ್ ರಾಜಕುಮಾರ್ ಅಭಿನಯಿಸಿದ ಭಂಗಿಗಳನ್ನು ಮನಮೋಹಕವಾಗಿ ಚಿತ್ರಿಸಿದ್ದಾರೆ. ಇವರೊಬ್ಬಅದ್ಭುತ ಕಲಾವಿದ ಇವರ ಸಾಧನೆಯಿಂದ ರಾಯಚೂರು ಪ್ರಸಿದ್ಧಿಯನ್ನು ಪಡೆದಿದೆ ಎಂದು ಹೇಳಿದರು.
ಕಾರ್ಯಕ್ರಮವು ಶ್ರೀ ವೇಣುಗೋಪಾಲ್ ವರಪ್ಪ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು ಸ್ವಾಗತವನ್ನು ಪ್ರಧಾನ ಕಾರ್ಯದರ್ಶಿಗಳದ ರಮೇಶ್ ಕುಲಕರಣಿಯವರು ಮಾಡಿದರು.
ಈ ಸಂದರ್ಭದಲ್ಲಿ ರಾಮ ಕಾಂತ ಕುಲಕರ್ಣಿ, ವಸುದೆಂದ್ರ ಸಿರವಾರ್, ಶ್ರೀಮತಿ ವಿಜಯಲಕ್ಷ್ಮಿ ಸೇಡಂಕರ್, ಶ್ರೀಮತಿ ಮೀರಾ ಕೋನಾಪುರ್, ಶ್ರೀಮತಿ ಪದ್ಮಜ, ಕೆ. ನಾಗರತ್ನ, ವೈ. ಕೆ.ಯಶೂಧ, ರಮೇಶ್ ರೆಡ್ಡಿ, ಪ್ರಾಣೇಶ್ ಪಡ್ನಿಸ್, ಮುಂತಾದವರು ಉಪಸ್ಥಿತರಿದ್ದರು
ಕಾರ್ಯಕ್ರ ದಲ್ಲಿ ಕಾರ್ಯದರ್ಶಿ ಜೆ. ಎಂ. ವೀರೇಶ್ ನಿರೂಪಿಸಿ ವಂದಿಸಿದರು
Comments
Post a Comment