ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಬಲಿದಾನ ದಿನ ಹಾಗೂ ಜಗನ್ನಾಥರಾವ್ ಜೋಶಿ ಜಯಂತಿ ಆಚರಿಸಲಾಯಿತು

                             

ರಾಯಚೂರು,23-ಭಾರತೀಯ ಜನತಾ ಪಾರ್ಟಿ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ    ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನ ಹಾಗೂ ಜಗನ್ನಾಥರಾವ್ ಜೋಶಿ ಅವರ ಜಯಂತಿಯ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ  ಎನ್ . ಶಂಕ್ರಪ್ಪ ರವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೇಶಕ್ಕಾಗಿ ಅವರು ಮಾಡಿದ ತ್ಯಾಗ ಹಾಗೂ ಕಾಶ್ಮೀರ ವಿಚಾರದಲ್ಲಿ ಅವರ ಹೋರಾಟದ ಬಗ್ಗೆ  ಹಾಗೂ ಜಗನ್ನಾಥರಾವ್ ಜೋಶಿ ಅವರ  ಅವರ ಕಾರ್ಯದ ಬಗ್ಗೆ ಅಲ್ಲದೆ ಪಕ್ಷದ ಸಂಘಟನೆ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ ಹಾಗೂ ರಾಯಚೂರು ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್  ಬಿಜೆಪಿ ನಗರ ಅಧ್ಯಕ್ಷರಾದ ಬಿ.ಗೋವಿಂದ್ ,ಆರ್ ಡಿ.ಎ . ಮಾಜಿ ಅಧ್ಯಕ್ಷರುಗಳಾದ ಕಡಗೋಲ ಆಂಜನೇಯ , ವೈ. ಗೋಪಾಲರೆಡ್ಡಿ   ನಗರ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಸಾನ್ ಬಾಳ, ಎ. ಚಂದ್ರಶೇಖರ್ ,ನವೀನ್ ಕುಮಾರ್ ರೆಡ್ಡಿ,   ಮುದುಗಲ್ ಈರಣ್ಣ , ಭಾಗವಹಿಸಿದ್ದರು

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ