ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಬಿ. ಗೋವಿಂದ್ ರವರಿಗೆ ನೀಡಬೇಕೆಂದು ನಿಯೋಗ ಮನವಿ .
ರಾಯಚೂರು,23- ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ವನ್ನು ಆರ್ಯವೈಶ್ಯ ಸಮಾಜದ ಮುಖಂಡರು ಹಾಗೂ ಭಾರತೀಯ ಜನತಾ ಪಾರ್ಟಿ ನಗರ ಘಟಕ ಅಧ್ಯಕ್ಷರಾದ ಬಿ. ಗೋವಿಂದ್ ಇವರಿಗೆ ನೀಡಬೇಕೆಂದು ನಿಯೋಗ ಮನವಿ ಮಾಡಿದರು .ಬೆಂಗಳೂರಲ್ಲಿ ಮಾಜಿ ಸಚಿವರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಿ .ಹೆಚ್. ಶಂಕರಮೂರ್ತಿ ಅವರನ್ನು
ಹಾಗೂ ಮಾಜಿ ಶಾಸಕರು ಭಾರತೀಯ ಜನತಾ ಪಾರ್ಟಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್
ಸುರಾನಾ ಭೇಟಿ ಮಾಡಿ ನಿಯೋಗ ಮನವಿ ಮಾಡಿದರು. ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್ . ಶಂಕರಪ್ಪ ವ ಕೀಲರು ಮತ್ತು ಮಾಜಿ RDA ಅಧ್ಯಕ್ಷರುಗಳಾದ ಕಡಗೋಲ ಆಂಜನೇಯ, ವೈ. ಗೋಪಾಲರೆಡ್ಡಿ ಹಾಗೂ ನಗರದ ಆರ್ಯವೈಶ್ಯ ಸಮಾಜದ ಹಿರಿಯ ಮುಖಂಡರು ಗಳಾದ ಮಾಚನೂರು ಕೊಂಡ ಕೃಷ್ಣಮೂರ್ತಿ, ಸಾವಿತ್ರಿ ಪುರುಷೋತ್ತಮ, ದತ್ತಣ್ಣ ಹಾಗೂ ಸಮಾಜದ ಮುಖಂಡರ ನಿಯೋಗದಲ್ಲಿದ್ದರು
.ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಸಾನಾಬಾಳ, ಎ. ಚಂದ್ರಶೇಖರ್ ,ನವೀನ್ ರೆಡ್ಡಿ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿ ತರಿದ್ದರು .
Comments
Post a Comment