ಜು.23 ರಂದು ಹುಣಸಿಹೊಳೆಯಲ್ಲಿ ಕಣ್ವ ಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತ ಸಂಕಲ್ಪ .


 ಜು.23 ರಂದು ಹುಣಸಿಹೊಳೆಯಲ್ಲಿ ಕಣ್ವ ಮಠಾಧೀಶರಾದ  ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತ ಸಂಕಲ್ಪ .

ರಾಯಚೂರು,ಜು.21- ಶುಭಕೃತ ನಾಮ ಸಂವತ್ಸರದಲ್ಲಿ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀ ಪಾದಂಗಳವರು ತಮ್ಮ ತೃತೀಯ ಚಾತುರ್ಮಾಸ್ಯ ವ್ರತವನ್ನುಹುಣಸಿಹೊಳೆಯಲ್ಲಿ ಆಚರಿಸಲು ಸಂಕಲ್ಪಿಸಿದ್ದಾರೆ. ಜುಲೈ 23ರಂದು ಬೆಳಿಗ್ಗೆ ಕೃಷ್ಣನದಿತೀರ ವೀರಘಟ್ಟದಲ್ಲಿ ದಂಡೋಧಕ ಸ್ನಾನ, ಶೋಭಾಯಾತ್ರೆಯೊಂದಿಗೆ ಶ್ರೀಮಠಕ್ಕೆ ಆಗಮನ ಸಂಕಲ್ಪ, ಸಂಸ್ಥಾನ ಪೂಜೆ, ಪಂಡಿತರಿಂದ ಪ್ರವಚನ ವಿವಿಧ ಬಜನಾ ಮಂಡಳಿಗಳಿಂದ ಭಜನೆ ನಂತರ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.         ಸುಮಾರು ಎರಡು ಶತಮಾನಗಳ ಇತಿಹಾಸವಿರುವ ಶುಕ್ಲ ಯಜುರ್ವೇದಿಯ ಶಾಖ ಮಠವಾದಸುರಪುರ ತಾಲೂಕಿನ ಶ್ರೀಮದ್ ಕಣ್ವಮಠ ಮೂಲ ಮಹಾಸಂಸ್ಥಾನ ಹುಣಸಿಹೊಳೆಯಲ್ಲಿ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀ ಪಾದಂಗಳವರು ಶುಭ ಕೃತ ನಾಮ ಸಂವತ್ಸರದ ತಮ್ಮ ತೃತೀಯ ಚಾತುರ್ಮಾಸ್ಯ  ವ್ರತವನ್ನು ಅನುಷ್ಠಾನ ಮಾಡಲಿದ್ದಾರೆ.                                              ಜುಲೈ 23 ರಿಂದ ಸೆಪ್ಟಂಬರ್ 10 ಅನಂತ ಚತುರ್ದಶಿಯವರೆಗೆ ಅನುಗ್ರಹ ಮುಖಿಗಳಾದ ಶ್ರೀಪಾದಂಗಳವರು ವಿಠಲ ಕೃಷ್ಣನಿಗೆ ವಿಶೇಷ ಪೂಜೆ ಪುನಸ್ಕಾರ ಗೋಷ್ಠಿ, ಉಪನ್ಯಾಸ ಧಾರ್ಮಿಕ ಕಾರ್ಯಕ್ರಮಗಳು ಜ್ಞಾನ ಸತ್ರಗಳನ್ನು ಹಮ್ಮಿಕೊಳ್ಳಲಿದ್ದಾರೆ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.    ಟ್ರಸ್ಟನ ಅಧ್ಯಕ್ಷರಾದ ಶ್ರೀ ಮನೋಹರ್ ಮಾಡಗೇರಿ, ದಿವಾನರಾದ ಸುರೇಶ್ ಕುಲಕರ್ಣಿ, ಪ್ರಚಾರ ಸಮಿತಿ ಮುಖ್ಯಸ್ಥರು ಪ್ರಸನ್ನ ಆಲಂಪಲ್ಲಿ,ಟ್ರಸ್ಟ ಸದಸ್ಯರುಗಳಾದ ರಾಜು ಜೋಷಿ, ವಿಷ್ಣುಪ್ರಕಾಶ್ ಜೋಶಿ, ಪ್ರಲ್ಲಾದ್ ಕನ್ಸಾವಿ, ವಿನುತ ಏಸ್ ಜೋಶಿ ಹಾಗೂ ಟ್ರಸ್ಟನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ರಾಜ್ಯದ ಮತ್ತು ಹೊರ ರಾಜ್ಯದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ, ಚಾತುರ್ಮಾಸ್ಯದ ವಿಶೇಷ ಸೇವೆ ಸಲ್ಲಿಸಲು ಬಯಸುವವರು ಶ್ರೀ ಮನೋಹರ ಮಾಡಗಿರಿ ಮೋ: 9822504100 ಪ್ರಸನ್ನ ಆಲಂಪಲ್ಲಿ 8073213185 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್