75 ನೇ ದಿನಕ್ಕೆ ಮುಂದುವರೆದ ಏಮ್ಸ್ ಹೋರಾಟ : ವಿದ್ಯಾರ್ಥಿ ಮತ್ತು ಯುವಜನರ ಬೃಹತ್ ಪ್ರತಿಭಟನಾ ಸಮಾವೇಶ

75 ನೇ ದಿನಕ್ಕೆ ಮುಂದುವರೆದ ಏಮ್ಸ್ ಹೋರಾಟ  : ವಿದ್ಯಾರ್ಥಿ ಮತ್ತು  ಯುವಜನರ ಬೃಹತ್ ಪ್ರತಿಭಟನಾ ಸಮಾವೇಶ


 ರಾಯಚೂರು,ಜು.26-  ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 75 ನೇ ದಿನಕ್ಕೆ ಮುಂದುವರಿದಿದೆ .ಇಂದು ವಿಶೇಷವಾಗಿ ರಾಯಚೂರು ನಗರದ ವಿದ್ಯಾರ್ಥಿ ಯುವಜನರ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು . ಶಿಕ್ಷಣ ಸಂಸ್ಥೆಗಳಾದ ಪೂರ್ಣಿಮಾ ಕಾಲೇಜು, ಸೇವಾ ಕಾಲೇಜು, ಸಫಿಯಾ ಶಿಕ್ಷಣ ಸಂಸ್ಥೆಯ ಕಾಲೇಜು, ವಿದ್ಯಾನಿಧಿ ಕಾಲೇಜು, ಸರ್ಕಾರಿ ಪದವಿ ಕಾಲೇಜು ,ಥಾಮಸ್ ಪದವಿ ಕಾಲೇಜು, ಎಸ್ ಕೆಇಎಸ್ ಪ್ಯಾರಾ ಮೆಡಿಕಲ್ ಕಾಲೇಜು ,ಹಾಗೂ ನಗರದ ಸಾವಿರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಯುವಕರು  ಸಮಾವೇಶದಲ್ಲಿ ಪಾಲ್ಗೊಂಡು ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು .


ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ ರಾಯಚೂರಿನಲ್ಲಿ ಈಗಾಗಲೇ ಐಐಟಿಯಿಂದ ವಂಚಿತವಾಗಿದೆ ನಮ್ಮ ಜಿಲ್ಲೆಯ ಎಲ್ಲ ರಾಜಕೀಯ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿಯಿಂದ ಸರ್ಕಾರದ ಮೇಲೆ ಒತ್ತಡ ತಂದು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗಲೇಬೇಕು ಮತ್ತು ಸಮಗ್ರ ಅಭಿವೃದ್ದಿಯನ್ನು ನಮ್ಮ ಮುಂದಿನ ಭವಿಷ್ಯದ ಜನಾಂಗ ಕಾಣಲೇ ಬೇಕು ಎಂದು ಒತ್ತಾಯಿಸಿದರು .

ಶಿಕ್ಷಣ ಸಂಸ್ಥೆಯ ರಾಕೇಶ ರಾಜಲಬಂಡಿ ಇವರು ಮಾತನಾಡುತ್ತಾ ನಮ್ಮ ಈ ಹೋರಾಟ ನಿಲ್ಲದು ಏಮ್ಸ್ ಪಡೆಯುವವರೆಗೆ ನಿಲ್ಲಕೂಡದು ಈ ಹೋರಾಟವನ್ನು ಹೆಚ್ಚು ಪ್ರಚುರ ಗೊಳಿಸುವ ಸಲುವಾಗಿ ಸಾಮಾಜಿಕ ಅಂತರ್ಜಾಲವನ್ನು ಹೆಚ್ಚು ಉಪಯೋಗ ಮಾಡಿಕೊಳ್ಳುವ ಮೂಲಕ ಇಡೀ ನಮ್ಮ ಜಿಲ್ಲೆಯ ಮತ್ತು ಸಮಸ್ತ ಕಲ್ಯಾಣ ಕರ್ನಾಟಕದ ಜನರನ್ನು ತಲುಪಬೇಕಾಗಿದೆ ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ನುಡಿದರು .ಪ್ರಾಚಾರ್ಯ  ಥಾಮಸ್ ಬೆಂಜಮಿನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಹೋರಾಟ ಸಮಿತಿಯ ಡಾ. ಬಸವರಾಜ ಕಳಸ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಳೆದ 75 ದಿನಗಳ   ನಿರಂತರ ಧರಣಿ ಸತ್ಯಾಗ್ರಹದಲ್ಲಿ ನಿರತರಾಗಿದ್ದೇವೆ. ಆದಾಗ್ಯೂ ಜಿಲ್ಲೆಯ ಶಾಸಕರು ಸಂಸದರು ಜನಪ್ರತಿನಿಧಿಗಳು ಹೋರಾಟದ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ತಾಳುವ ಮೂಲಕ ಸರಕಾರದ ಮೇಲೆ ಕಿಂಚಿತ್ತೂ ಒತ್ತಡ ಹಾಕದೆ ಮೌನವಾಗಿರುವುದನ್ನು ಪ್ರಶ್ನಿಸಿದರು .


ಮುಖ್ಯಮಂತ್ರಿ ಗಳು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವುದಾಗಿ ಘೋಷಣೆ ಆಗುವವರೆಗೂ ರಾಯಚೂರು ಜಿಲ್ಲೆಯಲ್ಲಿ  ಕಾಲಿಡ ತಕ್ಕದ್ದಲ್ಲ ಎಂದು ಎಚ್ಚರಿಸಿದರು .ಡಾ ಶಾರದಾ ಹುಲಿ ನಾಯಕ್ ,ಎನ್ನ ಮಹಾವೀರ ರವರು ಮಾತನಾಡಿದರು ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಂಚಾಲಕರಾದ ಅಶೋಕ್ ಕುಮಾರ್ ಜೈನ್ ರವರು ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನು ಸ್ವಾಗತಿಸಿದರು.  ಈ ಸಂದರ್ಭದಲ್ಲಿ 10521ಜನರ ರಕ್ತದ ಸ್ಸಹಿವುಳ್ಳ ಮನವಿ ಪತ್ರವನ್ನು ಮಾನ್ಯ  ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು .ಹೆಚ್ಚುವರಿ ಜಿಲ್ಲಾಧಿಕಾರಿಗಳು ವೇದಿಕೆಗೆ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿದರು .

ಈ ಸಂದರ್ಭದಲ್ಲಿ ಎಸ್ ಮಾರೆಪ್ಪ ವಕೀಲರು, ಎಂ ಆರ್ ಭೇರಿ , ವೆಂಕಟೇಶ ಆಚಾರ್ಯ, ಕಾಮರಾಜ್ ಪಾಟೀಲ್ ,ಗುರುರಾಜ್ ಕುಲಕರ್ಣಿ, ಪ್ರಸಾದ್ ಭಂಡಾರಿ, ವೀರಭದ್ರಯ್ಯಸ್ವಾಮಿ, ಮಹೇಂದ್ರಸಿಂಗ ,ವೀರ ಭದ್ರಪ್ಪ ಅಂಬರಪೇಟೆ, ಬಿರಾದಾರ್ , ಶ್ರೀನಿವಾಸ ಕಲವಲದೊಡ್ಡಿ ,ಮಿಮಿಕ್ರಿ ಬಸವರಾಜ್ ,ಚಂದ್ರಶೇಖರ್ ಭಂಡಾರಿ , ಶ್ರೀನಿವಾಸ್  ಕೊಪ್ಪರ,ವಿಕ್ರಂ ಹೊಸೂರ್ , ಸಾದಿಕಖಾನ್ ,ನಾಸಿರ್ ಹೊಸೂರ, ಹನುಮೇಶ ಅರೋಲಿ, ಚಿದಾನಂದ ಅರೋಲಿ, ಗೋಪಾಲ ಡೊಂಗರಾಂಪುರ ಮುಂತಾದವರು ಭಾಗವಹಿಸಿದ್ದರು .

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ