ಈರಣ್ಣ ಬೆಂಗಾಲಿ ರಚಿತ "ಸಾಧನಾಗಿರಿ ಅರುಣ ನಂದಗಿರಿ" ಪುಸ್ತಕ ಬಿಡುಗಡೆ: ದಿ.ಅರುಣ ನಂದಗಿರಿ ಓರ್ವ ಅತ್ಯತ್ತಮ ವ್ಯಂಗ್ಯ ಚಿತ್ರಕಾರರಾಗಿದ್ದರು-ಎಂ.ಸ೦ಜೀವ
ಈರಣ್ಣ ಬೆಂಗಾಲಿ ರಚಿತ "ಸಾಧನಾಗಿರಿ ಅರುಣ ನಂದಗಿರಿ" ಪುಸ್ತಕ ಬಿಡುಗಡೆ:
ದಿ.ಅರುಣ ನಂದಗಿರಿ ಓರ್ವ ಅತ್ಯತ್ತಮ ವ್ಯಂಗ್ಯ ಚಿತ್ರಕಾರರಾಗಿದ್ದರು-ಎಂ.ಸ೦ಜೀವ
ರಾಯಚೂರು,ಜು.೧೯- ದಿ.ಅರುಣ ನಂದಗಿರಿ ಓರ್ವ ಅತ್ಯುತ್ತಮ ವ್ಯಂಗ್ಯ ಚಿತ್ರಕಾರರಾಗಿದ್ದರು ಎಂದು ಕಲಬುರಗಿಯ ವ್ಯಂಗ್ಯ ಚಿತ್ರಕಾರ ಎಂ.ಸ೦ಜೀವ ಹೇಳಿದರು.
ಅವರಿಂದು"ಸಾಧನಾಗಿರಿ ಅರುಣ ನಂದಗಿರಿ" ಪುಸ್ತಕ ಬಿಡುಗಡೆ ಮಾಡಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅರುಣ ನಂದಗಿರಿ ನಾಡು ಕಂಡ ಅತ್ಯುತ್ತಮ ವ್ಯಂಗ್ಯ ಚಿತ್ರ ಕಲಾವಿದರಾಗಿದ್ದರು ವಿಶಿಷ್ಟ ಚೇತನರಾಗಿದ್ದರು ಅವರು ಅಂಗವೈಕಲ್ಯ ಮೆಟ್ಟಿ ನಿಂತು ೪೦ ವರ್ಷದ ವಯಸ್ಸಿನಲ್ಲಿ ತಮ್ಮ ಜೀವನ ಸಮಾಪ್ತಿಗೊಳಿಸಿದ್ದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಅವರು ಒಂದು ಕೋಣೆಯಲ್ಲಿ ಮಂಚದ ಮೇಲೆಯೆ ಮಲಿಗಿರುತ್ತಿದ್ದು ಅದು ಅವರಿಗೆ ಪ್ರಪಂಚವಾಗಿತ್ತು ರಾಯಚೂರು ವಾಣಿ ಪತ್ರಿಕೆ ಅವರಿಗೆ ಒಂದು ಅಂಕಣವೆ ನೀಡುವ ಮೂಲಕ ಅವರ ಸಾಧನೆಗೆ ಮೆಟ್ಟಿಲು ಆಯಿತು ಎಂದು ಅಭಿಪ್ರಾಯ ಪಟ್ಟರು.
ಮುದ್ರಣ ಮಾಧ್ಯಮ ಅವರಿಗೆ ಪ್ರಚಾರ ನೀಡಿತಲ್ಲದೆ ಅವರ ಸಾಧನೆಯನ್ನು ನಾಡಿನೆಲ್ಲಡೆ ಪರಿಚಿತರಾಗುವಂತೆ ಮಾಡಿತು ಎಂದರು.
ಸಾಹಿತಿ ವೀರ ಹನುಮಾನ ಮಾತನಾಡಿ ಅರುಣ ನಂದಗಿರಿ ಪ್ರತಿಭಾವಂತರು ವಿಕಲ ಚೇತನರಾಗಿದ್ದರು ಸೃಜನಶೀಲತೆ ಅವರು ವ್ಯಂಗ್ಯಚಿತ್ರದಲ್ಲಿ ಮೇಳೈಸುತ್ತಿರುತ್ತಿತ್ತು ಎಂದ ಅವರು ಅರುಣ ನಂದಗಿರಿ ನಿಧನರಾಗಿದ್ದರು ಇಂದಿಗೆ ಜನ ಮಾನಸದಲ್ಲಿ ಅಜರಾಮರರಾಗಿದ್ದಾರೆಂದರು.
ರಾಜಶ್ರೀ ಕಲ್ಲೂರುಕರ್ ಮಾತನಾಡಿ ನಮ್ಮ ಸಹೋದರ ಅರುಣ ನಂದಗಿರಿ ಎಂದಿಗೂ ತನ್ನ ಅಂಗನ್ಯೂನ್ಯತೆಗೆ ಮರುಗದೆ ಹೆಚ್ಚಿನ ಗಮನ ತಮ್ಮಡೆ ಸಮಾಜ ನೀಡಬೇಕೆಂದು ಬಯಸದೆ ಸಾಧನೆ ಮೂಲಕ ಸಮಾಜದಲ್ಲಿರುವ ಅಂಕುಡೊ0ಕುಗಳನ್ನು ವಿಮರ್ಶಿಸಿದರು ಎಂದರು.
ರಾಯಚೂರುವಾಣಿ ಅರುಣ ನಂದಗಿರಿಗೆ ನೀಡಿದ ಪ್ರೋತ್ಸಾಹ ನಾವೆಲ್ಲರೂ ಮರೆಯುವುದಿಲ್ಲವೆಂದ ಅವರು ಅರುಣ ನಂದಗಿರಿ ಬದಕು ಬಗ್ಗೆ ಅರುಣ ಪ್ರಪಂಚ ಮೊದಲನೆ ಕೃತಿ ಇದು ಎರಡನೆ ಕೃತಿಯಾಗಿದೆ ಎಂದರು.
ಕೃತಿ ರಚನಾಕಾರ ಈರಣ್ಣ ಬೆಂಗಾಲಿ ಮಾತನಾಡಿ ಅರುಣ ಮಲಗಿದಲ್ಲೆ ಮಲಿಗಿದ್ದರು ಆತನ ವ್ಯಂಗ್ಯಚಿತ್ರ ಲೋಕದೆಲ್ಲಡೆ ಸಂಚರಿಸಿತು ಎಂದ ಅವರು ಖ್ಯಾತ ಹಾಸ ಕಲಾವಿದ ಪ್ರಣೇಶ ಬೀಚಿ ಅರುಣ ನಂದಗಿರಿ ಸಾಧನೆ ಕುರಿತು ಮೆಚ್ಚಿ ಬೆನ್ನುಡಿ ಬರೆದಿದ್ದಾರೆಂದರು.
ಸುರಭಿ ಸಾಂಸ್ಕೃತಿ ಸಂಘದ ಜಿ.ಸುರೇಶ ಮಾತನಾಡಿ ಈರಣ್ಣ ಅನೇಕ ಕೃತಿ ರಚಿಸಿದ್ದಾರೆ ಅದರಂತೆ ಅವರ ಸಾಧನಾಗಿರಿ ಅರುಣ ನಂದಗಿರಿ ಕೃತಿ ನಮ್ಮ ಸಂಘದಿ0ದ ಬಿಡುಗಡೆಗೊಳಿಸುವ ಅವಕಾಶ ದೊರೆತಿದ್ದು ನಮ್ಮ ಸೌಭಾಗ್ಯವೆಂದರು.
Comments
Post a Comment