ತುರುಕನಡೋಣಿ ಗ್ರಾಮದ ಜಯಶೀಷಾಗೆ ಚಿಕಿತ್ಸೆಗೆ ಪಾಲಕರ ಮನವಿ: ಕಿಡ್ನಿ ವೈಫಲ್ಯಕ್ಕೊಳಗಾದ ಬಾಲಕಿಗೆ ನೆರವಿಗೆ ಕೋರಿಕೆ

  


ತುರುಕನಡೋಣಿ ಗ್ರಾಮದ ಜಯಶೀಷಾಗೆ ಚಿಕಿತ್ಸೆಗೆ ಪಾಲಕರ ಮನವಿ:
ಕಿಡ್ನಿ ವೈಫಲ್ಯಕ್ಕೊಳಗಾದ ಬಾಲಕಿಗೆ ನೆರವಿಗೆ ಕೋರಿಕೆ

ರಾಯಚೂರು,ಜು.೨೨-ಕಿಡ್ನಿ ವೈಫಲ್ಯಕ್ಕೊಳಗಾದ ತಮ್ಮ ಮಗಳಾದ ಜಯಶೀಷಾಗೆ  ಆಕೆಯ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಬಾಲಕಿ ತಂದೆ ತಾಲೂಕಿನ ತುರುಕನದೋಣಿ ಗ್ರಾಮದ ಮೇಷಕ್ ಕೋರಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ತಮ್ಮ ಮಗಳು ನಾಲ್ಕನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಆಕೆಯ ಕಿಡ್ನಿ ವೈಫಲ್ಯವಾಗಿದ್ದು ಆಕೆಯೆನ್ನು ಈಗಾಗಲೆ ರಿಮ್ಸ್ ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಸುಮಾರು ೧೫ ಲಕ್ಷ ರೂ ವೆಚ್ಚವಾಗಲಿದೆ ಎಂದು ತಜ್ಞ ವೈದ್ಯರು ತಿಳಿಸಿದ್ದು ಕೂಲಿ ಕೆಲಸ ಮಾಡುವ ನಮಗೆ ಅಷ್ಟೊಂದು ಹಣ ಹೊಂದಿಸಲು ಆಗದಿರುವುದರಿಂದ ದಾನಿಗಳು ಅಥವಾ ಸಂಸದರ ಮತ್ತು ಶಾಸಕರು ನೆರವು ನೀಡಬೇಕೆಂದು ಮನವಿ ಮಾಡಿದರು.



ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ತಿಪ್ಪಣ್ಣ ಮಾತನಾಡಿ ಬಾಲಕಿಯ ವೈದ್ಯಕೀಯ ವೆಚ್ಚ ಭರಿಸಲು ದಾನಿಗಳು ಮುಂದಾಗಬೇಕೆ0ದು ಮನವಿ ಮಾಡಿದ ಅವರು ಬಾಲಕಿಯ ಶಾಲೆಗೆ ಹೋಗುತ್ತಿದ್ದು ಅಕೆಯ ಬಾಳಿಗೆ ದಾನಿಗಳು, ಸರ್ಕಾರ ಬೆಳಕಾಗಬೇಕೆಂದು ಹೇಳಿದರು.
ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವವರು ಅವರ  ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಟಮಾರಿ ಶಾಖೆಯ ಖಾತೆ ಸಂಖ್ಯೆ ೧೦೭೪೪೧೦೧೧೦೫೯೨೨ ಐಎಫೆಸ್‌ಸಿ ಕೋಡ್ ಸಂಖೆ ಪಿಕೆಜಿಬಿ೦೦೧೦೭೪೪ ನೆರವು ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಬಾಲಕಿ ತಾಯಿ ಮರಿಯಮ್ಮ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್