ಏಮ್ಸ್ ಪಡೆಯಲು ಮುಂದಿನ ದಿನಗಳಲ್ಲಿ ರೈತರು ಸಹ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ: ಜು..೩೧ ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ –ಚಾಮರಸ ಮಾಲಿಪಾಟೀಲ
ಏಮ್ಸ್ ಪಡೆಯಲು ಮುಂದಿನ ದಿನಗಳಲ್ಲಿ ರೈತರು ಸಹ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ:
ಜು..೩೧ ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ –ಚಾಮರಸ ಮಾಲಿಪಾಟೀಲ
ರಾಯಚೂರು,ಜು.೩೦- ರೈತರ ಸಂಕಷ್ಟ ಕೇಳದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಜು.೩೧ ರಂದು ಜಿಲ್ಲಾಧಿಕಾರಿಗಳ ಕಚೇರಿ ಮುoದೆ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ಚಾಮರಸ ಮಾಲಿ ಪಾಟೀಲ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರ ತನ್ನ ಹಟಮಾರಿತನ ಧೋರಣಿಯಿಂದ ರೈತರ ಮೇಲೆ ಗಧಾ ಪ್ರಹಾರ ಮಾಡುತ್ತಿದೆ ಮೂರು ಕೃಷಿ ಕಾಯ್ದೆಯನ್ನು ಜಾರಿಗೆ ತಂದಿತು ನಂತರ ದೇಹಲಿಯಲ್ಲಿ ನಡೆದ ರೈತರ ನಿರಂತರ ಹೋರಾಟಕ್ಕೆ ಮಣಿದು ಅದನ್ನು ವಾಪಸ್ ಪಡೆಯಿತು ಎಂದರು.
ರೈತರ ಬೆಳೆದ ಬೆಳೆಗೆ ಸೂಕ್ತ ಬೆಂಬಲಬೆಲೆಯಿಲ್ಲ ಮತ್ತು ಹೋರಾಟ ನಿರತ ರೈತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತದೆ ಅಲ್ಲದೆ ಲೋಕಸಭೆಯಲ್ಲಿ ವಿದ್ಯುತ್ ಮಸೂದೆಗೆ ಒಪ್ಪಿಗೆ ಪಡೆಯಲು ಮುಂದಾಗಿದ್ದು ವಿದ್ಯುತ್ ಮಸೂದೆ ಮಂಡನೆಯಾದೆರೆ ರೈತರ ಪಂಪಸೆಟ್‌ಗಳಿಗೆ ಮೀಟರ್ ಅಳವಡಿಕೆಯಾಗುತ್ತದೆ ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದರು.
ರೈತರು ತಮ್ಮ ತಮ್ಮ ಸಂಪನ್ಮೂಲ ಬಳಸಿಕೊಂಡು ನೀರಾವರಿ ಮಾಡಿಕೊಂಡು ಬೆಳೆಬೆಳೆಯುತ್ತಾರೆ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಿದೆರೆ ಕೃಷಿಗೆ ಭಾರಿ ಹೊಡೆತ ಬೀಳುತ್ತದೆ ಎಂದರು.
ತು0ಗಭದ್ರ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಜು.೧೦ಕ್ಕೆ ಕಾಲುವೆಗಳಿಗೆ ನೀರು ಹರಿಸಲಾಗಿದ್ದರೂ ಇದುವರೆಗೂ ರಾಯಚೂರು, ಮಾನ್ವಿ ಸಿರವಾರ್ ಮುಂತಾದ ಭಾಗಕ್ಕೆ ನೀರು ತಲುಪಿಲ್ಲ ಮತ್ತು ಸಚಿವ ಆನ0ದ ಸಿಂಗ್ ರವರು ಐಸಿಸಿ ಸಭೆಯಲ್ಲಿ ಅಕ್ರಮ ನೀರಾವರಿ ತೆರವುಗೊಳಿಸುತ್ತೇವೆಂದು ಹೇಳೀದ್ದರು ಅದು ಈಡೇರಿಲ್ಲವೆಂದರು.
ಆಹಾರೋತ್ಪನ್ನಗಳ ಮೇಲೆ ಜಿಎಸ್ಟಿ ಹೇರಿಕ್ಕೆ ಬಗ್ಗೆ ಸಿಎಂ ಸ್ಪಷ್ಟತೆ ನೀಡುವಲ್ಲಿ ವಿಫಲರಾಗಿದ್ದಾರೆ ಅದರ ವಿರುದ್ದ ಆಗಸ್ಟ್ ತಿಂಗಳಲ್ಲಿ ಸಿಂಧನೂರಿನಲ್ಲಿ ಭತ್ತ ಬೆಳೆಗಾರರ ಬೃಹರ್ ಸಮಾವೇಶ ನಡೆಸಲಾಗುತ್ತದೆ ಎಂದರು.
ಕಳೆದ ೮೦ ದಿನಗಳಿಂದ ನಿರಂತರವಾಗಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಾಗಿ ಹೋರಾಟ ನಡೆಯುತ್ತಿದ್ದು ಶಾಸಕರು ಅಥವಾ ಸಂಸದರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ತರುವ ಕೆಲಸ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದ್ದು ಇದೆ ರೀತಿ ಮುಂದುವರೆದರೆ ರೈತರು ಸಹ ಹೋರಾಟದಲ್ಲಿ ಧುಮುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಲ್ಲನಗೌಡ, ಖಾಜಾ ಅಸ್ಲಂ ಪಾಷಾ, ರವಿಕುಮಾರ್, ಕೆ.ಜಿ.ವಿರೇಶ ಇದ್ದರು.
Comments
Post a Comment