ಪಾರಸಮಲ್ ಸುಖಾಣಿಯವರು ಕೇವಲ ಪತ್ರ ಬರವಣಿಗೆಗೆ ಸೀಮಿತರಾಗಿದ್ದಾರೆ: ಜು.೨೬ಕ್ಕೆ ಏಮ್ಸ್ ಹೋರಾಟ ೭೫ನೇ ದಿನ ಅಂಗವಾಗಿ ಹತ್ತು ಸಾವಿರ ಜನರ ರಕ್ತ ಸಹಿಯುಳ್ಳ ಮನವಿ ಪತ್ರ ಸಿಎಂಗೆ ಸಲ್ಲಿಕೆ–ಕಳಸ

 

 


 ಪಾರಸಮಲ್ ಸುಖಾಣಿಯವರು ಕೇವಲ ಪತ್ರ ಬರವಣಿಗೆಗೆ ಸೀಮಿತರಾಗಿದ್ದಾರೆ:
ಜು.೨೬ಕ್ಕೆ ಏಮ್ಸ್ ಹೋರಾಟ ೭೫ನೇ ದಿನ ಅಂಗವಾಗಿ ಹತ್ತು ಸಾವಿರ ಜನರ ರಕ್ತ ಸಹಿಯುಳ್ಳ ಮನವಿ ಪತ್ರ ಸಿಎಂಗೆ ಸಲ್ಲಿಕೆ–ಕಳಸ

ರಾಯಚೂರು,ಜು.೨೪-ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಜಿಲ್ಲೆಗೆ ಮಂಜೂರು ಮಾಡುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಜು.೨೬ ಕ್ಕೆ ೭೫ನೇ ದಿನಕ್ಕೆ ಕಾಲಿಡುತ್ತಿರುವ ನಿಮಿತ್ಯ ಅಂದು ಹತ್ತು ಸಾವಿರ ಜನರ ರಕ್ತದಿಂದ ಮಾಡಿರುವ ಸಹಿಯುಳ್ಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಗುತ್ತದೆ ಎಂದು ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಳೆದ ೭೩ ದಿನಗಳಿಂದ ಏಮ್ಸ್ಗಾಗಿ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದ್ದು ಜು.೨೬ಕ್ಕೆ ೭೫ನೇ ದಿನಕ್ಕೆ ಹೋರಾಟ ಕಾಲಿಡಲಿದ್ದು ಅಂದು ಸಹಸ್ರಾರು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಹೋರಾಟಗಾರರು ಮುಂತಾದವರು ಭಾಗವಹಿಸಲಿದ್ದು ಈಗಾಗಲೆ ಸುಮಾರು ಒಂಬತ್ತು ಸಾವಿರ ಜನರು ರಕ್ತದಿಂದ ಮಾಡಿರುವ ಸಹಿಯ ಜೊತೆಗೆ ಅಂದು ಒಂದು ಸಾವಿರ ಜನರಿಂದ ಮಾಡಲಿರುವ ರಕ್ತದ ಸಹಿ ಸೇರಿಸಿ ಒಟ್ಟು ಹತ್ತು ಸಾವಿರ ಜನರ ರಕ್ತದಿಂದ ಮಾಡಿರುವ ಸಹಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಪತ್ರ ಸಲ್ಲಿಸಲಿದ್ದೇವೆಂದರು.
ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆದರೂ ಜಿಲ್ಲೆಗೆ ಭೇಟಿ ನೀಡಿಲ್ಲ ಇದೀಗ ಅವರು ಜಿಲ್ಲೆಗೆ ಭೇಟಿ ನೀಡಬೇಕೆಂದರೆ ಏಮ್ಸ್ ಹೋರಾಟಗಾರರ ಸಭೆ ನಡೆಸಬೇಕು ಇಲ್ಲದಿದ್ದರೆ ಅವರು ಜಿಲ್ಲೆಗೆ ಭೇಟಿ ನೀಡುವುದು ಬೇಡವೆಂದರು.
ಐಐಟಿ ಮಾದರಿಯಂತೆ ಏಮ್ಸ್ ಹೋರಾಟ ತೀರ್ವ ಸ್ವರೂಪ ಪಡೆದಿಲ್ಲ ಏಕೆಂದರು ರಸ್ತಾರೋಕೊ, ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮುಂತಾದವುಗಳಿಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ನಮಗೆ ಅನುಮತಿ ನೀಡಲ್ಲವೆಂದ ಅವರು ನಮ್ಮ ಹೋರಾಟ ಶಾಂತಿಯಿAದ ನಡೆಯುತ್ತಿದೆ ಎಂದರು.
ಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಾರಸಮಲ್ ಸುಖಾಣಿಯವರು ಕೇವಲ ಪ್ರಧಾನಿಗೆ ಪತ್ರ ಬರೆಯುವಲ್ಲಿ ನಿರತರಾಗಿದ್ದು ಅವರು ಪತ್ರ ಮಿತ್ರರಾಗಿದ್ದು ಅದಷ್ಟಕ್ಕೆ ಮಾತ್ರ ಸೀಮಿತರಾಗಿದ್ದಾರೆ ಅನೇಕ ಬಾರಿ ಅವರಿಗೆ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು ಆಗಮಿಸಿಲ್ಲ ಅಲ್ಲದೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಏಮ್ಸ್ ಹೋರಾಟದ ಬಗ್ಗೆ ತಿಳಿವಳಿಕೆ ನೀಡಲು ನಮ್ಮ ಹೋರಾಟ ಸಮಿತಿಗೆ ಅನುಮತಿ ನಿರಾಕರಿಸಿದ್ದಾರೆಂದರು.
ಅದೇ ರೀತಿ ವಕೀಲರ ಸಂಘದ ಅಧ್ಯಕ್ಷ ಬಾನುರಾಜರವರು ನಮ್ಮ ಹೋರಾಟಕ್ಕೆ ಸಂಘದಿAದ ಬೆಂಬಲ ಸೂಚಿಸಿಲ್ಲ ಬದಲಾಗಿ ಐಐಟಿ ಹೋರಾಟದ ವಿಫಲತೆ ಬಗ್ಗೆ ತಮಗೆ ವರದಿ ನೀಡಬೇಕೆಂದು ತಿಳಿಸಿದ್ದಾರೆ ನಮ್ಮ ಹೋರಾಟದ ಬಗ್ಗೆ ಅವರಿಗೆ ಇರುವ ಕಾಳಜಿ ತೋರಿಸುತ್ತದೆ ಎಂದರು.
ಅಶೋಕ ಕುಮಾರ್ ಜೈನ್ ಮಾತನಾಡಿ ಏಮ್ಸ್ ಹೋರಾಟ ನಾವು ಬಿಡುವುದಿಲ್ಲ ನಮಗೆ ಏನೆ ಶಿಕ್ಷೆ ನೀಡಿದರು ಏಮ್ಸ್ ನಮ್ಮ ಹಕ್ಕಾಗಿದ್ದು ಅದನ್ನು ಪಡೆದೆ ತೀರುತ್ತೇವೆಂದ ಅವರು ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಏಮ್ಸ್ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ ಎಂದು ದೂರಿದರು.
ಜನಪ್ರಿಯ ನಗರಶಾಸಕರೆಂದು ಕರೆಸಿಕೊಳ್ಳುವವರು ಏಮ್ಸ್ ಬಗ್ಗೆ ಏಕೆ ಒತ್ತಾಯಿಸುತ್ತಿಲ್ಲವೆಂದು ಪ್ರಶ್ನಿಸಿದ ಅವರು ಅದೇ ರೀತಿ ಶಾಸಕ ಕೆ.ಶಿವನಗೌಡ ನಾಯಕರು ಅದ್ದೂರಿಯಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾರೆ ಆದರೆ ಏಮ್ಸ್ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲವೆಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಈಡಿ ವಿಚಾರಣೆಗೊಳಪಡಿಸಿದರೆ ಪ್ರತಿಭಟಿಸುವ ಕಾಂಗ್ರೆಸ್ ಪಕ್ಷದ ಮುಖಂಡರು ಏಮ್ಸ್ ಬಗ್ಗೆ ಏಕೆ ಮೌನ ವಹಿಸಿದ್ದಾರೆಂದ ಅವರು ಜೆಡಿಎಸ್ ಶಾಸಕರಾದ ವೆಂಕಟರಾವ್ ನಾಡಗೌಡ ಹೋರಾಟಕ್ಕೆ ಬೆಂಬಲಿಸಿದ್ದಾರೆ ಹೊರತು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಸೇರದಂತೆ ಇತರರು ಬೆಂಬಲಿಸಿಲ್ಲವೆAದರು.
ಏಮ್ಸ್ ಜಿಲ್ಲೆಗೆ ಕೈತಪ್ಪಿದರೆ ಪ್ರತ್ಯೇಕ ರಾಜ್ಯದ ಕೂಗು ಮೊಳಗುತ್ತದೆ ಎಂದ ಅವರು ಏಮ್ಸ್ ವಂಚಿತರಾದರೆ ನಮಗೆ ಪ್ರತೇಕ ರಾಜ್ಯಬೇಕು ರಾಯಚೂರು ಅದರ ರಾಜಧಾಣಿಯಾಗಲಿ ಎಂದರು.
ಎಸ್.ಮಾರೆಪ್ಪ ವಕೀಲರು ಮಾತನಾಡಿ ಏಮ್ಸ್ ಹೋರಾಟಕ್ಕೆ ವಿದ್ಯಾರ್ಥಿ ಸಮೂಹ ಬೆಂಬಲಿಸುತ್ತಿದ್ದು ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಅನೇಕ ಯೋಜನೆಗಳು ಜಿಲ್ಲೆಗೆ ದೊರಕುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ ಆಚಾರ್, ಶ್ರೀನಿವಾಸ ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್