ಉಭಯ ಸಂಘಗಳ ಕಾರ್ಯಕಾರಿಣಿ ಸಮಿತಿಗಳ ನಿರ್ಣಯದಂತೆ ಪ್ರಶಸ್ತಿಗಳ ಆಯ್ಕೆ: ಜು.೨೯ ಮಸ್ಕಿಯಲ್ಲಿ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಮತ್ತು ಪತ್ರಿಕಾ ಭವನ ಉದ್ಘಾಟನೆ- ಗುರುನಾಥ
ಉಭಯ ಸಂಘಗಳ ಕಾರ್ಯಕಾರಿಣಿ ಸಮಿತಿಗಳ ನಿರ್ಣಯದಂತೆ ಪ್ರಶಸ್ತಿಗಳ ಆಯ್ಕೆ:
ಜು.೨೯ ಮಸ್ಕಿಯಲ್ಲಿ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಮತ್ತು ಪತ್ರಿಕಾ ಭವನ ಉದ್ಘಾಟನೆ- ಗುರುನಾಥ
ರಾಯಚೂರು,ಜು.೨೯-ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಜು.೨೯ ರಂದು ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಮಾಸ್ಕಿ ಪತ್ರಿಕಾ ಭವನ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ ಹಾಗೂ ರಾಯಚೂರು ರಿಪೋಟರ‍್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಹೇಳಿದರು.
ಅವರಿಂದು ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜು.೨೯ ರಂದು ಬೆಳಿಗ್ಗೆ ೧೦ ಕ್ಕೆ ಮಸ್ಕಿ ಪತ್ರಿಕಾ ಭವನ ಉದ್ಘಾಟನೆ ನಂತರ ಕಾರ್ಯಕ್ರಮ ನಡೆಯುವ ಭ್ರಮರಾಂಬ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದ್ದು ಬೆಳಿಗ್ಗೆ ೧೧ ಗಂಟೆಗೆ ಬ್ರಮರಾಂಭ ದೇವಸ್ಥಾದಲ್ಲಿ ಡಿ.ವಿ.ಗುಂಡಪ್ಪ ಮಂಟಪದ ಪಂಡಿತ ಬಸವಪ್ಪ ಶಾಸ್ತಿç ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ ಸಾನಿಧ್ಯವನ್ನು ಮಸ್ಕಿ ಗಚ್ಚಿನ ಮಠದ ಶ್ರೀ.ಷ.ಬ್ರ.ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು ಉದ್ಘಾಟನೆಯನ್ನು ಜವಳಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ನೆರವೇರಿಸಲಿದ್ದು ಆಶಯನುಡಿಯನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾಡಲಿದ್ದು ಅತಿಥಿ ಉಪನ್ಯಾಸವನ್ನು ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್.ಚೆನ್ನೆಗೌಡ ನೆರವೇರಿಸಲಿದ್ದಾರೆಂದರು.
ಮುಖ್ಯ ಅತಿಥಿಗಳಾಗಿ ಸಂಸದರಾದ ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ,ಶಾಸಕರಾದ ಕೆ.ಶಿವನಗೌಡ ನಾಯಕ, ಆರ್.ಬಸನಗೌಡ ತುರ್ವಿಹಾಳ,ಡಾ.ಶಿವರಾಜ ಪಾಟೀಲ, ವೆಂಕಟರಾವ್ ನಾಡಗೌಡ,ಬಸನಗೌಡ ದ್ದದಲ,ರಾಜಾವೆಂಕಟಪ್ಪ ನಾಯಕ,ಡಿ.ಎಸ್.ಹೂಲಗೇರಿ,ಮಾನಪ್ಪ ವಜ್ಜಲ,ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರು, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ,ಜಿಲ್ಲಾಧಿಕಾರಿ ಚಂದ್ರಶೇಕರ ನಾಯಕ, ಎಸ್ಪಿ ನಿಖಿಲ್.ಬಿ, ಜಿ.ಪಂ ಸಿಇಓ ನೂರ ಜಹರಾ ಖಾನಂ,ಕೆಯುಡ್ಬು÷್ಲಜೆ ರಾಜ್ಯ ಉಪಾಧಕ್ಷ ಭವಾನಿಸಿಂಗ ಠಾಕೂರು, ಕೆಯುಡ್ಬು÷್ಲಜೆ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ,ಕೆಯುಡ್ಬು÷್ಲಜೆ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಜೀಜ ಪಾಲ್ಗೊಳ್ಳಲಿದ್ದು ಅಧ್ಯಕ್ಷತೆಯನ್ನು ಕೆಯುಡ್ಬು÷್ಲಜೆ ಜಿಲ್ಲಾಧ್ಯಕ್ಷ ಆರ್.ಗುರುನಾಥ ವಹಿಸಲಿದ್ದು ಕೆಯುಡ್ಬು÷್ಲಜೆ ಮಸ್ಕಿ ತಾಲೂಕಾಧ್ಯಕ್ಷ ಪ್ರಕಾಶ ಮಸ್ಕಿ ಉಪಸ್ಥಿತರಿರಲಿದ್ದು ಪ್ರಸ್ತಾವಿಕ ನುಡಿಗಳನ್ನು ಮಸ್ಕಿ ವಿಜಯವಾಣಿ ವರದಿಗಾರ ವಿರೇಶ ಸೌದ್ರ ಮಾಡಲಿದ್ದಾರೆಂದರು.
ಈ ಬಾರಿ ದಿ.ಎನ್.ಕೆ.ಕುಲಕರ್ಣಿ ಸ್ಮರಣಾರ್ಥ ರಾಯಚೂರು ವಾಣೀ ಪ್ರಾಯೋಜಿತ ಜೀವಮಾನದ ವಿಶೇಷ ಪ್ರಶಸ್ತಿಯನ್ನು ಸುದ್ದಿಮೂಲ ಪ್ರಧಾನ ವರದಿಗಾರ ಬಿ.ವೆಂಕಟ್‌ಸಿ0ಗ್ ರವರಿಗೆ ನೀಡಲಾಗುತ್ತಿದ್ದು ಕಾರ್ಯನಿರತ ಪತ್ರಕರ್ತರ ಸಂಘದಿ0ದ ವಿವಿಧ ಪ್ರಾಯೋಜಿತ ಪ್ರಶಸ್ತಿಗಳನ್ನು ಜಿಲ್ಲೆಯ ವಿವಿಧ ಪತ್ರಿಕೆಗಳ ವರದಿಗಾರರಾದ ಶ್ಯಾಮಕುಮಾರ್, ವಿರೇಶ, ಪಿ.ಕೃಷ್ಣ,ಗುರುನಾಥ ಇಂಗಳದಾಳ, ಸೈಯದ್ ಇಮ್ತಿಯಾಜ್, ಅಬ್ದುಲ್ಗಯಾಸ, ಡಾ.ಶರಣಪ್ಪ,ಶ್ರೀಧರ ಕೊಂಡ,ಕ್ಯಾಮರಾಮೆನ್ ಯಲ್ಲುಲಿಂಗ ರವರಿಗೆ ಪ್ರಶಸ್ತಿ ಹಾಗೂ ಜಾಹಿರಾತು ವಿಭಾಗದಲ್ಲಿ ಕೃಷ್ಣ ಇನಾಂದಾರ್, ಪ್ರಸರಣ ವಿಭಾಗದಲ್ಲಿ ಚೆನ್ನಬಸವ ಹೀರೆಮಠ, ಪತ್ರಿಕಾ ವಿತರಕ ವಿಭಾಗದಲ್ಲಿ ಮಲ್ಲಯ್ಯ ಸ್ವಾಮಿರವರಿಗೆ ಗೌರವ ಸನ್ಮಾನ ನಡೆಯಲಿದೆ ಎಂದರು.
ರಾಯಚೂರು ರಿಪೋರ್ಟ್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಮಾತನಾಡಿ ರಾಯಚೂರು ರಿಪೋರ್ಟ್ಸ್ ಗಿಲ್ಡ್ ನಿಂದ ನೀಡಲಾಗುವ ವಿವಿಧ ಪ್ರಯೋಜಿತ ಪ್ರಶಸ್ತಿಗಳನ್ನು ಜಗನ್ನಾಥ ಪೂಜಾರ್, ಸೈಯದ್ ನಸೀಮ್ ಆಶ್ರಫ್,ಬಾವಸಲಿ,ಅಮರೇಶ ಎಲ್.ಕೆ, ಸುರೇಶ ರೆಡ್ಡಿ,ರಾಚಯ್ಯಸ್ವಾಮಿ ಮಾಚನೂರು, ಶ್ರೀನಿವಾಸ್ ರವರಿಗೆ ನೀಡಲಾಗುತ್ತಿದೆ ಎಂದರು.
ಪ್ರಶಸ್ತಿ ಆಯ್ಕೆಯನ್ನು ಪಾರದರ್ಶಕವಾಗಿ ಉಭಯ ಸಂಘಗಳ ಕಾರ್ಯಕಾರಿಣಿ ಸದಸ್ಯರ ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಲಾಗಿದ್ದು ಪತ್ರಿಕಾರಂಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಿರಿಯರು ಮತ್ತು ಕಿರಿಯರನ್ನು ಸಮಾನವಾಗಿ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಇದರಲ್ಲಿ ಯಾವುದೆ ಗೊಂದಲಗಳಿಲ್ಲವೆoದರು.
ಈ ಸಂದರ್ಭದಲ್ಲಿ ಕೆಯುಡ್ಬು÷್ಲಜೆ ಪ್ರಧಾನ ಕಾರ್ಯದರ್ಶಿ ಪಾಷ ಹಟ್ಟಿ, ಉಪಾಧ್ಯಕ್ಷ ಶಿವಪ್ಪಮಡಿವಾಳರ್, ರಾಯಚೂರು ರಿಪೋಟರ‍್ಸ್ ಗಿಲ್ಡ್ ಪ್ರಧಾನ ಕಾಯದರ್ಶಿ ವಿಜಯ ಜಾಗಟಗಲ್ ಇದ್ದರು.
Comments
Post a Comment