ರಾಯಚೂರು ಜಿಲ್ಲೆ ಹರಿದಾಸರ ತೊಟ್ಟಿಲು: ಯತಿಗಳಿಗೆ ಚಾತುರ್ಮಾಸ್ಯ ಅತ್ಯಂತ ಪರ್ವಕಾಲ-ಶ್ರೀ ವಿದ್ಯಾವಿಜಯ ತೀರ್ಥರು
ರಾಯಚೂರು ಜಿಲ್ಲೆ ಹರಿದಾಸರ ತೊಟ್ಟಿಲು:
ಯತಿಗಳಿಗೆ ಚಾತುರ್ಮಾಸ್ಯ ಅತ್ಯಂತ ಪರ್ವಕಾಲ-ಶ್ರೀ ವಿದ್ಯಾವಿಜಯ ತೀರ್ಥರು
ರಾಯಚೂರು,ಜು.೨೫-ಯತಿಗಳಿಗೆ ಚಾತುರ್ಮಾಸ್ಯ ಅತ್ಯಂತ ಪರ್ವಕಾಲ ಎಂದು ಶ್ರೀವ್ಯಾಸರಾಜ ಮಠದ ಮಠಾಧೀಶರಾದ ಶ್ರೀ ವಿದ್ಯಾವಿಜಯತೀರ್ಥರು ನುಡಿದರು.
ಅವರಿಂದು ನಗರದ ಜವಾಹರ ನಗರ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಚಾತುರ್ಮಾಸ್ಯ ದೀಕ್ಷೆ ಕೈಗೊಳ್ಳುವ ಮುನ್ನ ದಿನವಾದ ಇಂದು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.
ಎರೆಡು ತಿಂಗಳಗಳ ಕಾಲ ನಗರದಲ್ಲಿ ಚಾತುರ್ಮಾಸ್ಯ ಕೈಗೊಳ್ಳುತ್ತಿದ್ದು ದಿನ ನಿತ್ಯ ಭಗವಂತನ ಚಿಂತನೆ ಪಾಠ, ಪ್ರವಚನ, ಪೂಜೆ ನಡೆಯಲಿದ್ದು ಭಕ್ತರು ಚಾತುರ್ಮಾಸ್ಯದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ತಾವು ನಗರದಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳುವುದು ಎರೆಡು ದಿನಗಳ ಹಿಂದೆ ನಿಶ್ಚಯವಾಯಿತು ಎಂದ ಅವರು ರಾಯರ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನಾವಿಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳಲು ಸಕಲ ವ್ಯವಸ್ಥೆ ಮಾಡಿದ್ದು ಪ್ರತಿ ವರ್ಷವು ಅವರು ನನಗೆ ಚಾತುರ್ಮಾಸ್ಯ ಎಲ್ಲಿಬೇಕಾದರೂ ಕುಳಿತುಕೊಂಡರು ಸಕಲ ವ್ಯವಸ್ಥೆ ಮಾಡುವುದಾಗಿ ತಿಳಿಸುತ್ತಾ ಬಂದಿದ್ದಾರೆ0ದರು.
ರಾಯಚೂರು ರಾಯರ ಚೂರಾಗಿದ್ದು ಅವರ ಮೃತ್ತಿಕಾ ಬೃಂದಾವನ ಸನ್ನಿದಾನದಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳುವುದು ಒಂದು ಸೌಭಾಗ್ಯವೆಂದ ಅವರು ಚಾತುರ್ಮಾಸ್ಯದಲ್ಲಿ ನಗರದ ವಿವಿಧೆಡೆ ಪ್ರವಚನ ಕಾರ್ಯಕ್ರಮ ನಡೆಯುತ್ತದೆ ಎಂದರು.
ನಗರಕ್ಕಾಗಮಿಸಿದ ಶ್ರೀಪಾದಂಗಳವರನ್ನು ಗೌರವಪೂರ್ವಕವಾಗಿ ಭಜನಾತಂಡಗಳೊ0ದಗೆ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ವಿದ್ವಾನ್ ಅರ್.ವಾದಿರಾಜಾಚಾರ್, ವ್ಯವಸ್ಥಾಪಕರಾದ ದ್ವಾರಕಾನಾಥ ಆಚಾರ್, ಸುಳಾದ ಹನುಮೇಶಾಚಾರ್, ಶ್ರೀನಿವಾಸ್ ಆಚಾರ್, ಖಜಾಂದಾರ್ ಪ್ರಹ್ಲಾದ ರಾವ್,ಇನಾಂದಾರ್ ವೇಣುಗೋಪಾಲ ಆಚಾರ್, ಕಲ್ಮಾಲಾ ರಾಘವೇಂದ್ರರಾವ್, ಗುತ್ತಲ ರವೀಂದ್ರಾಚಾರ್, ವಿಷ್ಣುತೀರ್ಥ ಸಿರವಾರ್, ಸುರೇಶಾಚಾರ್ ಕಲ್ಲೂರು, ಪ್ರಹಲ್ಲಾದ ಫಿರೋಜಾಬಾದ್,ಪ್ರಸನ್ನ ಆಲಂಪಲ್ಲಿ, ತಾರಾನಾಥ ಜೇಗರಕಲ್,ಶ್ರೀನಿವಾಸ್ಇನಾಂದಾರ್, ಜಯಕುಮಾರ್ ದೇಶಾಯಿ ಕಾಡ್ಲೂರು ಸೇರಿದಂತೆ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ವಿಧ್ವಾಂಸರು, ವಿದ್ಯಾರ್ಥಿಗಳು, ವಿವಿಧ ಭಜನಾಮಂಡಳಿಗಳ ಸದಸ್ಯರು, ಭಕ್ತರಿದ್ದರು.
Comments
Post a Comment