ಕೆಕೆಅರ್‌ಡಿಬಿ ಹಂಚಿಕೆಯಾಗದ ಅನುದಾನದ ಬಗ್ಗೆ ಶಾಸಕರು ಧ್ವನಿ ಎತ್ತಬೇಕು- ರಜಾಕ ಉಸ್ತಾದ್
ಕೆಕೆಅರ್‌ಡಿಬಿ ಹಂಚಿಕೆಯಾಗದ ಅನುದಾನದ ಬಗ್ಗೆ ಶಾಸಕರು ಧ್ವನಿ ಎತ್ತಬೇಕು- ರಜಾಕ ಉಸ್ತಾದ್
ರಾಯಚೂರು,ಜು.೩೦-ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಅನುದಾನ ಬಜೆಟ್‌ನಲ್ಲಿ ಘೋಷಣೆಯಾದಂತೆ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಈ ಭಾಗದ ಶಾಸಕರು ಒತ್ತಾಯಿಸಬೇಕೆಂದು ಕಲ್ಯಾಣ ಕರ್ನಾಟಕ ಪ್ರಗತಿಪರ ಒಕ್ಕೂಟ ಸಂಚಾಲಕ ರಜಾಕ ಉಸ್ತಾದ್ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಬಜೆಟ್‌ನಲ್ಲಿ ಮೂರು ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ ಆದರೆ ವಲಯವಾರು ಹಂಚಿಕೆ ಮಾಡುವಾಗ ಮೂರು ಸಾವಿರ ಕೋಟಿ ರೂ. ಬದಲಾಗಿ ಎರೆಡು ಸಾವಿರ ಕೋಟಿ ರೂ. ಮಾತ್ರ ನೀಡಲಾಗಿದೆ ಎಂದರು.
ನ0ಜು0ಡಪ್ಪ ವರದಿ ಅನ್ವಯ ರಾಜ್ಯದಲ್ಲಿ ೧೧೪ ಹಿಂದುಳಿದ ತಾಲೂಕಗಳಿದ್ದು ಕಲ್ಯಾಣ ಕರ್ನಾಟಕದಲ್ಲಿ ೩೧ ತಾಲೂಕುಗಳಲ್ಲಿ ೨೮ ಹಿಂದುಳೀದ ತಾಲೂಕುಗಳಿದ್ದು ಶೇ.೪೦ ರಷ್ಟು ಅನುದಾನ ಈ ಭಾಗಕ್ಕೆ ನೀಡಬೇಕು ಅದೆಲ್ಲವನ್ನು ಸರ್ಕಾರ ನಿರ್ಲಕ್ಷಿಸಿದೆ ಕೆಕೆಅರ್ ಡಿಬಿ ಮಂಡಳಿಗೆ ಅನುದಾನ ನೀಡದೆ ಮಂಡಳಿಗೆ ಹಾಗೂ ಜನರಿಗ ವಂಚಿಸಿದೆ ಎಂದರು.
ಈ ಹಿಂದೆ ಸರ್ಕಾರ ಎಸ್ಸಿಪಿ ಟಿಎಸ್ಪಿ ಅನುದಾನವನ್ನು ಮಂಡಳಿಗೆ ವರ್ಗಾಸಿದ್ದಾಗ ನಾವು ಧ್ವನಿ ಎತ್ತಿದಾಗ ಅದನ್ನು ಕೈಬಿಡಲಾಯಿತು ಎಂದ ಅವರು ಕೇಂದ್ರ ಸರ್ಕಾರವು ರಾಯಚೂರು ಮತ್ತು ಯಾದಗೀರಿಯನ್ನು ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಂದು ಗುರುತಿಸಿದೆ ಇತ್ತ ರಾಜ್ಯ ಸರ್ಕಾರ ಈ ಭಾಗಕ್ಕೆ ಒತ್ತು ನೀಡದೆ ದ್ವಂದ ನೀತಿ ಅನುಸರಿಸುತ್ತದೆ ಎಂದರು.
ಈ ಹಿಂದಿನ ಕಾಂಗ್ರೆಸ್ ಸರ್ಕಾರ ಇದೆ ರೀತಿ ತಾರತಮ್ಯ ಮಾಡಿದಾಗ ಅದರ ವಿರುದ್ದವು ಸಹ ಹೋರಾಟ ಮಾಡಲಾಗಿತ್ತು ಈಗ ಬಿಜೆಪಿ ಸರ್ಕಾರದ ವಿರುದ್ದವು ಹೋರಾಟ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿನೋದರೆಡ್ಡಿ, ಶಿವಕುಮಾರ್ ಯಾದವ್, ರಾಜೇಶ, ವಿರೇಶ ಹೀರಾ ಇದ್ದರು.
Comments
Post a Comment