ವೀರಶೈವ ಲಿಂಗಾಯಿತರನ್ನು ಕೇಂದ್ರ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರಿಸುವಂತೆ ಆಗ್ರಹಿಸಿ ಆ.೧ ರಂದು ಧರಣಿ
ವೀರಶೈವ ಲಿಂಗಾಯಿತರನ್ನು ಕೇಂದ್ರ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರಿಸುವಂತೆ ಆಗ್ರಹಿಸಿ ಆ.೧ ರಂದು ಧರಣಿ
ರಾಯಚೂರು,ಜು.೩೦-ವೀರಶೈವ ಲಿಂಗಾಯಿತರನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಆ.೧ ರಂದು ನಗರದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪಾಟೀಲ ಮಿರ್ಜಾಪೂರು ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸಮುದಾಯದ ಎಲ್ಲರು ಸೇರಲಿದ್ದು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದ್ದು ಸಮುದಾಯದ ಎಲ್ಲರೂ ಆಗಮಿಸಬೇಕೆಂದು ಕೋರಿದರು. ಬಸವಾದಿ ಶರಣರ ಮಾರ್ಗದಲ್ಲಿ ನಮ್ಮ ಸಮುದಾಯ ನಡೆಯುತ್ತಿದ್ದು ನಮ್ಮ ಸುಮದಾಯದಲ್ಲೂ ಇನ್ನು ಅನೇಕರು ಭೂ ಮತ್ತು ನಿವೇಶನ ರಹಿತ, ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಇದನ್ನು ಮನಗೊಂಡು ರಾಜ್ಯ ಸರ್ಕಾರ ಈಗಾಗಲೆ ನಮ್ಮ ಸಮುದಾಯಕ್ಕೆ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದು ಆದರೆ ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಇನ್ನು ಸೇರ್ಪಡೆಗೊಂಡಿಲ್ಲವೆ0ದರು.
ನಮ್ಮ ಸಮುದಾಯದ ಅನೇಕರು ಕೇಂದ್ರ ಸರ್ಕಾರ ಸ್ವಾಮ್ಯದ ಉದ್ಯಮದಲ್ಲಿ ,ನೌಕರಿಯಲ್ಲಿ , ಶಿಕ್ಷಣ ಸಂಸ್ಥೆಯಲ್ಲಿ ಸೇರುವ ಅರ್ಹತೆಯಿದ್ದರೂ ಮೀಸಲಾತಿ ಇಲ್ಲದ್ದರಿಂದ ಹೊರಗುಳಿದಿದ್ದು ಅದನ್ನು ನೀಗಿಸಲು ಕೇಂದ್ರ ಸರ್ಕಾರ ಕೂಡಲೆ ನಮ್ಮ ಸಮುದಾಯಕ್ಕೆ ಹಿಂದುಳಿದ ವರ್ಗ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪರಮೇಶಪ್ಪ ಸಾಲಿಮಠ, ಶಿವಶರಣ ಇತರರಿದ್ದರು.
Comments
Post a Comment