ಕಾಮಿಕಾ ಏಕಾದಶಿ ಮಹಾವಿಷ್ಣುವಿಗೆ ಸಮರ್ಪಿತವಾಗಿದೆ- ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರು



ಕಾಮಿಕಾ ಏಕಾದಶಿ ಮಹಾವಿಷ್ಣುವಿಗೆ ಸಮರ್ಪಿತವಾಗಿದೆ- ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥರು.

ರಾಯಚೂರು,ಜು.24-   ಈ ದಿನವು ಮಹಾವಿಷ್ಣುವಿನ ಆರಾಧನೆಗೆ ಅತ್ಯಂತ ಪವಿತ್ರ ದಿನವಾಗಿದೆ ಎಂದು ಕಣ್ವ ಮಠದ ಮಠಾಧೀಶರಾದ ಶ್ರೀ ವಿದ್ಯಾ ಕಣ್ವವಿರಾಜ ತೀರ್ಥರು ನುಡಿದರು.

 ಅವರು ಹುಣಸಿಹೊಳೆಯಲ್ಲಿ ತಮ್ಮ ಚಾತುರ್ಮಾಸ್ಯ ಅನುಗ್ರಹ  ಸಂದೇಶದಲ್ಲಿ ಕಾಮಿಕಾ ಏಕಾದಶಿಯೂ ಸಹ ಮಹಾವಿಷ್ಣುವಿಗೆ ಸಮರ್ಪಿತವಾಗಿದೆ. ಎಲ್ಲ ಏಕಾದಶಿಗಳಂತೆ ಇಂದು ಉಪವಾಸ, ವಿಷ್ಣುವಿನ ಅರ್ಚನೆ, ಉಪಾಸನೆ, ಧ್ಯಾನ, ರಾತ್ರಿ ಜಾಗರಣೆಗಳನ್ನು ಮಾಡುವುದರಿಂದ ಪಾಪರಾಶಿಗಳೆಲ್ಲವು ನಾಶವಾಗಿ ಮೋಕ್ಷ ಲಭಿಸುವಂತಾಗುತ್ತದೆ ಎಂದರು.


ವರ್ಷದಲ್ಲಿ ಬರುವ ಪ್ರತಿಯೊಂದು ಏಕಾದಶಿಗೂ ಕೂಡ ತನ್ನದೇ ಆದ ವೈಶಿಷ್ಟ್ಯ ಮಹತ್ವ ಇದೆ .ಇಂದಿನ  ಏಕಾದಶಿಯೂ ಕೂಡ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈ ಕಾಮಿಕ ಏಕಾದಶಿಯ ದಿನ ಈ ದೀಪವನ್ನು ಬೆಳಗಿಸಿ ಉಪವಾಸವನ್ನು ಆಚರಿಸಿದರೆ ಸಮಸ್ತ ಅಭೀಷ್ಟಗಳು ಕೂಡ ನೆರವೇರುತ್ತವೆ.

 ಆಷಾಡ ಮಾಸದಲ್ಲಿ ಬರುವ ಈ ಕಾಮಿಕ ಏಕಾದಶಿ ಆಚರಣೆಯಿಂದ ಫಲಗಳು  ಏಕಾದಶಿಯ ವ್ರತವನ್ನು ಆಚರಿಸುವ ಜೀವಿಯ ಸಕಲ ಪಾಪಗಳು ತೊಲಗಿಸುವ ಸಕಲ ಶಕ್ತಿ ಸಾಮರ್ಥ್ಯಗಳು ಇವೆ .


ಅಂತೆಯೇ ನಾರದ ಮುನಿಯು  ಈ ಕಾಮಿಕ ಏಕಾದಶಿಯು ಎಲ್ಲ ಏಕಾದಶಿಗಳಿಗಿಂತಲೂ ಅತ್ಯಂತ ಮಹತ್ವವಾದದ್ದು ಮತ್ತು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ .

 ಪುರುಷೋತ್ತಮನಾದ ಆ ಪರಮಾತ್ಮನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೆ ಸಿಗುವ ಲಾಭಗಳು ಅಷ್ಟಿಷ್ಟಲ್ಲ. ಈ ದಿನ  ಏಕಾದಶಿ ವ್ರತವನ್ನು ಮಾಡಿ, ಉಪವಾಸ ಜಾಗರಣೆ ಮಾಡಿ ಪುರುಷೋತ್ತಮನಾದ ಪರಮಾತ್ಮನನ್ನು  ಪೂಜಿಸುವುದು

ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡುವುದು ಉತ್ತಮ .ಮುಕ್ಕೋಟಿ ದೇವತೆಗಳಿಗೂ ನಾವು ನಮ್ಮ ನಮನಗಳನ್ನು ಸಲ್ಲಿಸಿದಂತಾಗುತ್ತದೆ ಜೊತೆಗೆ ಸಹಸ್ರ ನಾಮಾರ್ಚನೆಯನ್ನು ಕೂಡ ಮಾಡುವುದು  ಮುಖ್ಯವಾಗಿ ಏಕಾದಶಿ ಸಕಲ ಪಾಪಗಳನ್ನು ತೊಳೆಯುವ ಶಕ್ತಿಯುಳ್ಳ ದಿನವಾಗಿದೆ ಎಂದರು


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್