ಮಂತ್ರಾಲಯದಲ್ಲಿ ಭಕ್ತಿಯಿಂದ ಶ್ರೀಜಯತೀರ್ಥರ ಆರಾಧನೆ: ಶ್ರೀಮದಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದವರು ಟೀಕಾರಾಯರು-ಶ್ರೀಸುಬುಧೇಂದರತೀರ್ಥರು
ಮಂತ್ರಾಲಯದಲ್ಲಿ ಭಕ್ತಿಯಿಂದ ಶ್ರೀಜಯತೀರ್ಥರ ಆರಾಧನೆ:
ಶ್ರೀಮದಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದವರು ಟೀಕಾರಾಯರು-ಶ್ರೀಸುಬುಧೇಂದರತೀರ್ಥರು
ರಾಯಚೂರು,ಜು.೧೮-ಶ್ರೀ ಮದಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದವರು ಶ್ರೀ ಜಯತೀರ್ಥರು(ಟೀಕಾರಾಯರು) ಎಂದು ಮಂತ್ರಾಲಯಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು.
ಅವರಿಂದು ಶ್ರೀ ಮಠದಲ್ಲಿ ಟೀಕಾರಾಯರ ಆರಾಧನೆ ಅಂಗವಾಗಿ ರಥೋತ್ಸವ ನೆರವೇರಿಸಿ ನಂತರ ಅನುಗ್ರಹ ಸಂದೇಶ ನೀಡಿದರು.
ಜಯತೀರ್ಥರು ಒಂದು ರೀತಿಯಲ್ಲಿ ಸೇನಾನಿಗಳೆ ಅವರು ಶ್ರೀಮದಾಚಾರ್ಯರ ಶಾಸ್ತçಗಳನ್ನು ಪ್ರಚುರ ಪಡಿಸಿ ಅದಕ್ಕೆ ಅಡೆತಡೆಗಳನ್ನು ನಿವಾರಿಸಿ ಸೇನಾನಿಗಳಾದರು ಎಂದರು.
ಜಯತೀರ್ಥರು ನೆಲೆಸಿದ್ದು ನವಬೃಂದಾವನೆಗಡೆಯಲ್ಲಿ ಎಂಬುದಕ್ಕೆ ಅನೇಕ ಪ್ರಮಾಣಗಳು ದೊರೆಯುತ್ತವೆ ಈ ಬಾರಿ ಅಲ್ಲಿ ಶ್ರೀಮಠದಿಂದ ಆರಾಧನೆ ನೆರವೇರಿಸುವ ಉದ್ದೇಶವಿತ್ತು ಆದರೆ ಪ್ರವಾಹ ಸೇರಿದಂತೆ ಸ್ಥಳೀಯ ಜಿಲ್ಲಾಡಳಿತ ಆರಾಧನೆಗೆ ತಡೆ ನೀಡಿದ್ದು ಮುಂದಿನ ವರ್ಷ ಅಲ್ಲಿ ಆರಾಧನೆ ಮಾಡಲಾಗುತ್ತದೆ ಎಂದರು.
ಶ್ರೀ ಜಯತೀರ್ಥರ ಮೂಲ ಬೃಂದಾವನ ಬಗ್ಗೆ ಅನೇಕರು ಅನೇಕ ಗೊಂದಲ ಮೂಡಿಸಿದ್ದಾರ ಅದನ್ನು ಯಾರು ನಂಬಬಾರದು ಜಯತೀರ್ಥರ ಬೃಂದಾವನ ಬಗ್ಗೆ ವಾದಿರಾಜ ಗುರುಸಾರ್ವಭೌಮರು ಸ್ಪಷ್ಟವಾಗಿ ಅವರ ನೆಲೆ ತಿಳಸಿದ್ದಾರೆ ಅಲ್ಲದೆ ಅನೇಕ ಗ್ರಂಥ, ಸುಳಾದಿ ಮುಂತಾದವುಗಳಲ್ಲಿ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರು, ವಿದ್ಯಾಪೀಠದ ವಿದ್ಯಾರ್ಥಿಗಳು, ಭಕ್ತಾದಿಗಳಿದ್ದರು.
Comments
Post a Comment