ಮಧ್ವ ಮತದ ಯತಿ ವರೇಣ್ಯರು ಶ್ರೀ ಜಯತೀರ್ಥರು


         
ಮಧ್ವ ಮತದ  ಯತಿ ವರೇಣ್ಯರು  ಶ್ರೀ ಜಯತೀರ್ಥರು


 ಗತಕಾಲದಲ್ಲಿ ಭವ್ಯ ಸಾಮ್ರಾಜ್ಯವಾಗಿ ಮೆರೆದ ರಾಷ್ಟçಕೂಟರ ರಾಜಧಾನಿಯಾಗಿದ್ದ ಮಳಖೇಡ ಆಧ್ಯಾತ್ಮಿವಾಗಿಯು ಅಷ್ಟೆ ಮಹತ್ವವುಳ್ಳದ್ದಾಗಿದೆ .ಇಂದಿನ ಯುಗದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಭಕ್ತ ಕಾರುಣಿ ,ಕಾಗಿನಾ ತಟ ನಿವಾಸಿ ಮಧ್ವ ಮಥೋಧ್ಧಾರಕ ಮಹಿಮಾ ವ್ಯಕ್ತಿತ್ವವುಳ್ಳ
ಶ್ರೀ ಟೀಕಾಚಾರ್ಯರೆಂದೆ ಫ್ರಖ್ಯಾತಿ ಪಡೆದಿದ್ದ ಶ್ರೀ ಜಯತೀರ್ಥರ ಆರಾಧನೆಯು ಆಷಾಡ  ಪಂಚಮಿ ದಿ.೧೮-೭-೨೨ ಸೋಮವಾರದಂದು ಇದ್ದು ಅವರ
ಜೀವನ, ಕೃತಿ, ಗ್ರಂಥ, ಪವಾಡಗಳ ಕುರಿತು ಕಿರು ಲೇಖನ-

ಜನನ ಮತ್ತು ಬಾಲ್ಯ :-ಮಧ್ವ ಮತದ ಯತಿ ಪರಂಪರೆಯಲ್ಲಿ ಆದ್ಯಾತ್ಮಿಕ ಜ್ಯೋತಿ ಬೆಳಗಿಸಿದ ಯತಿ ವರೇಣ್ಯರು ಶ್ರೀಮದ ಜಯತೀರ್ಥರು,
ಶ್ರೀ ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ರಚಿಸಿ ಟೀಕಾಚಾರ್ಯರೆಂದೆ ಹೆಸರಾದವರು ಶ್ರೀ ಮದ ಜಯತೀರ್ಥರು .ಇವರು ೧೩೪೬ನೆ ಇಸ್ವಿಯಲ್ಲಿ ಮಹಾರಷ್ಟç ರಾಜ್ಯದ ಪಂಡರಪೂರದಿAದ  ಸುಮಾರು ೧೫ ಮೈಲಿ ದೂರದಲ್ಲಿ ಇದ್ದ ಗ್ರಾಮ ಮಂಗಲವೇಡಿಯಲ್ಲಿ ಜನಿಸಿದರು.
ಮಾಂಡಲೀಕ ಧೊಂಡೊ ನರಸಿಂಹರಾಯ ದಂಪತಿಗಳು ಇವರ ತಂದೆ ತಾಯಿ. ಬಾಲ್ಯದಲ್ಲೆ ಭಗವದ್ಭಕ್ತರಾಗಿದ್ದ  ಇವರು ಉಪನಯನಾದಿ ಸಂಸ್ಕಾರಗಳೊAದಿಗೆ ಅತ್ಯಂತ ತೇಜಸ್ವಿಯಾಗಿ  ಉನ್ನತ ವಿದ್ಯಾಪಾರಂಗತರಾಗಿ ಬೆಳೆದರು. ಸರ್ವ ವಿದ್ಯಯಲ್ಲಿ ನಿಪುಣತೆಯನ್ನು ಸಾಧಿಸಿದರು. ರಾಜೊಚಿತ ವಿದ್ಯೆಯನ್ನು ಪಡೆದು ಶಸ್ತçಕ್ಕು ಸೈ ಶಾಸ್ತçಕ್ಕೂ ಸೈ ಎಂಬAತ್ತಿದ್ದರು.
ಪೂರ್ವ ಜನ್ಮ :-ತಮ್ಮ ಹಿಂದಿನ ಜನ್ಮದಲ್ಲಿ ವೃಷಭ ರೂಪದಲ್ಲಿ ಶ್ರೀ ಮದಾಚಾರ್ಯರ ಬಳಿ ಸರ್ವ ಮೂಲಗ್ರಂಥಗಳನ್ನು ಹೊರುವ ಮತ್ತು ಇದರ ಮುಖೇನ ಅವರ ಪಾಠ , ಪ್ರವಚನ ಆಲಿಸುವ ಪುಣ್ಯ ಇವರದಾಗಿತ್ತು. ಇದರ ಫಲವಾಗಿ ಇವರು ಆಚಾರ್ಯರ ಗ್ರಂಥಗಳಿಗೆ ಉತಕೃಷ್ಟವಾದ ಟೇಕೆ ರಚಿಸಲು ಸಾಧ್ಯವಾಯಿತೆನ್ನಬಹುದು.
ಗೃಹಸ್ಥಾಶ್ರಮ :-ಬಾಲ್ಯದಿಂದ ತರುಣಾವಸ್ಥೆಗೆ ಬಂದ ಇವರಿಗೆ ರೂಪಗುಣೊಪೇತಳಾದ  ಜಾನಕಿ ಯಂಬ ಕನ್ಯೆಯೊಂದಿಗೆ ವಿವಾಹ ಜರುಗಿತು.
ಅಲ್ಪ ಸಮಯದಲ್ಲೆ ತಮ್ಮ ಪೂರ್ವ ಜನ್ಮ ಸ್ಮೃತಿಗೆ ಬಂದು ವಿರಕ್ತಿಗೆ ಕಾರಣವಾಗಿ ಪತ್ನಿಗೆ ಶೇಷರೂಪ ತೋರಿಸಿ  ಸಂಸಾರಬ0ಧನದಿAದ ಮುಕ್ತರಾಗುತ್ತಾರೆ.
ಸನ್ಯಾಸತ ್ವ:-ಆಕ್ಷೆÆÃಭ್ಯತೀರ್ಥರಲ್ಲಿ ಸಮಗ್ರ ಮಧ್ವಶಾಸ್ತçದ ಅಧ್ಯಯನ ನಡೆಸಿ. ಅಲೌಕಿಕ ಜ್ಞಾನ ಸಾರವನ್ನು ತಿಳಿದು ಆಕ್ಷೆÆÃಭ್ಯತೀರ್ಥರಿಂದಲೆ
"ಶ್ರೀ ಜಯತೀರ್ಥರೆಂಬ"ಎ0ಬ ನಾಮದಿಂದ ಪರಮಹಂಸಾಶ್ರಮ ಸ್ವೀಕರಿಸುತ್ತಾರೆ.
ವೇದಾಂತ ಸಾಮ್ರಾಜ್ಯದ ಪೀಠವನ್ನು ೨೩ ವರ್ಷಗಳ ಕಾಲ ಆಲಂಕರಿಸಿ ೧೩೮೮ ರಲ್ಲಿ ಮಳಖೇಡದ ಕಾಗಿನಾ ನದಿ ತಟದಲ್ಲಿ ಬೃಂದಾವನಸ್ಥರಾಗುತ್ತಾರೆ.
 ತಾರುಣ್ಯದಲ್ಲೆ ಧನವನಿತಾದಿ ಭೋಗಗಳನ್ನು ತ್ಯಜಿಸಿ ಆಧ್ಯತ್ಮದ ಮೇರು ಪರ್ವತದಂತ್ತಿದ್ದರು . ವಾದಗಳನ್ನು ಜಯಿಸಿ ವಾದಿಸಿಂಹವೆನ್ನಿಸಿದರು.
ಪವಾಡ,ಪ್ರಖ್ಯಾತಿಗಳು :- ಹಿಡಿ ಮಣ್ಣಿನಿಂದ ಕೆರೆಯ ನೀರನ್ನು ಎಂದೂ ಸೋರದಂತೆ ನಿಲ್ಲಿಸಿದ ತಪ:ಶಕ್ತಿ, ಜಯಕರ ಶಾಸ್ತç ಬರೆದು
ಜಯತೀರ್ಥರೆನ್ನಿಸಿದರು.
ಯರಗೋಳದಲ್ಲಿ ಗ್ರಾಮದಲ್ಲಿ ಸಾಕ್ಷಿ ಪ್ರಾಣದೇವರರೆದರು ಗುಹೆಯಲ್ಲಿ ಕುಳಿತು ನ್ಯಾಯಸುಧಾ ಗ್ರಂಥಗಳನ್ನು  ರಚಿಸಿ ಆದಿಶೇಷನ ಅವತಾರದಲ್ಲಿ ನೆಲೆನಿಂತ್ತಿದ್ದಾರೆ. ಯರಗೋಳದಲ್ಲಿ ಮಧ್ವ ಮತ ಯತಿಪರಂಪರೆಯ ಗುರುಗಳಾದ ಶ್ರೀರಾಮಚಂದ್ರತೀರ್ಥರ ಹಾಗೂ ವಿದ್ಯಾನಿಧಿತೀರ್ಥರ ಬೃಂದಾವನಗಳಿವೆ.
ದಿ.18-7-22 ರಂದು ಲೋಕದೆಲ್ಲಡೆ ಇವರ ಆರಾಧನೆಯನ್ನು ಶೃಧ್ಧಾ ,ಭಕ್ತಿಯಿಂದ ಆರಾಧಿಸಲಾಗುತ್ತದೆ.

                              


 


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್