ಜಿಲ್ಲಾ ಉಪ್ಪಾರ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ : ಸಮಾಜದ ಅಭಿವೃದ್ಧಿಗಾಗಿ ಮಹಿಳೆಯರು ಸಂಘಟಿತರಾಗಿ: ವಿಷ್ಣು ಲಾತೂರ್

 





ಜಿಲ್ಲಾ ಉಪ್ಪಾರ ಮಹಿಳಾ ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ  :

ಸಮಾಜದ ಅಭಿವೃದ್ಧಿಗಾಗಿ ಮಹಿಳೆಯರು ಸಂಘಟಿತರಾಗಿ: ವಿಷ್ಣು ಲಾತೂರ್

ರಾಯಚೂರು,ಜು.24- ಸಮಾಜದ ಅಭಿವೃದ್ಧಿಗಾಗಿ ಮಹಿಳೆಯರು ಸಂಘಟಿತರಾಗಬೇಕು. ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಬಾಲ್ಯ ವಿವಾಹಗಳಿಗೆ ಪ್ರೋತ್ಸಾಹಿಸುವುದು ಸಲ್ಲದು ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ನಗರದ ಉಪ್ಪಾರವಾಡಿ ಬಡಾವಣೆಯ ಶ್ರೀಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಉಪ್ಪಾರ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಹುದ್ದೆಯಲ್ಲಿದ್ದ ಮಹಿಳೆಯರಿಗೆ ಅನ್ಯ ಸಮಾಜದವರಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟದ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಮಹಿಳಾ ಸಂಘಟನೆಯಿಂದ ನಡೆಯಬೇಕು ಎಂದು ಕರೆ ನೀಡಿದರು.

ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಉಪ್ಪಾರ ಸಮಾಜದ ಅಭಿವೃದ್ಧಿಗಾಗಿ ಹೆಚ್ಚಿನ ಗಮನಹರಿಸಿದ್ದಾರೆ. ಅವರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉಪ್ಪಾರ ಸಮಾಜದವರನ್ನು ಗುರುತಿಸಲು ಶಾಸಕರು ಮುಂದಾಗಬೇಕು. ಮುಂದಿನ ಚುನಾವಣೆಗಳಲ್ಲಿ ಉಪ್ಪಾರ ಸಮಾಜದವರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಉಪ್ಪಾರ ಸಮಾಜಕ್ಕೆ ಚಿರ ಋಣಿಯಾಗಿದ್ದಾನೆ. ಉಪ್ಪಾರ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಉಪ್ಪಾರ ಸಮಾಜದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಹೇಳಿದರು.

ಸಾನಿಧ್ಯವನ್ನು ಯಾದಗಿರಿ ಜಿಲ್ಲೆಯ ರಾಂಪುರಹಳ್ಳಿಯ ಭಗೀರಥ ಪೀಠದ ಶ್ರೀಭಗೀರಥಾನಂದಪುರಿ ಸ್ವಾಮಿಜೀಗಳು ವಹಿಸಿದ್ದರು.

ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಈಶ್ವರಪ್ಪ ಶಿರಕೋಳ್, ಜಕೂರ ಶ್ರೀನಿವಾಸ, ಕೋಶಾಧ್ಯಕ್ಷ ಸುಧೀರ್ ಉಪ್ಪಾರ, ದೇವಸ್ಥಾನದ ಸಮಿತಿ ಅಧ್ಯಕ್ಷ ಬಾಲಚೇಡ್ ವೆಂಕೋಬ, ಕಾರ್ಯದರ್ಶಿ ಗಟ್ಟು ಶ್ರೀನಿವಾಸ, ಬಾಲಚೇಡ್  ನಾಗರಾಜ್, ಎಸ್ ಎಲ್ ವೀರೇಶ್, ಗಂಗಾವತಿ ಉಪ್ಪಾರ ಸಮಾಜದ ಅಧ್ಯಕ್ಷರು ಮುದ್ದಪ್ಪ ಉಪ್ಪಾರ್, ಶಿವನಗೌಡ ಮತ್ತು ಜಿಲ್ಲಾ ಉಪ್ಪಾರ ಮಹಿಳಾ ಮಹಾ ಸಭಾ ಘಟಕದ ಅಧ್ಯಕ್ಷೆ ಬೋಳಬಂಡಿ ಮಾಲತಿ, ನೂತನ ಪದಾಧಿಕಾರಿಗಳಾದ ಬಿ.ಲತಾ, ಆದಿಲಕ್ಷ್ಮೀ, ಶ್ರಾವಣಿ, ಜೂಕೂರ್ ನಿರ್ಮಲ, ಸಂಧ್ಯಾ ಹಾಗೂ ಮತ್ತಿತರರಿದ್ದರು. ಸರಿತಾ ವಿಶಾಲಾಕ್ಷಿ ಪ್ರಾರ್ಥಿಸಿದರು. ಕೀರ್ತಿ ಹಾಲ್ವಿ ಸ್ವಾಗತಿಸಿದರು. ಪಾಂಡುರಂಗ ಕಾಡ್ಲೂರು ನಿರೂಪಿಸಿದರು. ಸೌಮ್ಯ ವಂದಿಸಿದರು.

Comments

Popular posts from this blog