ಮಂತ್ರಾಲಯ: ಒಂದು ಲಕ್ಷ ಹರಿಕಥಾಮೃತಸಾರ ಪಾರಾಯಣ ಸಮರ್ಪಣೆ
ಮಂತ್ರಾಲಯ: ಒಂದು ಲಕ್ಷ ಹರಿಕಥಾಮೃತಸಾರ ಪಾರಾಯಣ ಸಮರ್ಪಣೆ
ರಾಯಚೂರು,ಜು.೨೭-ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಒಂದು ಲಕ್ಷ ಹರಿಕಥಾಮೃತಸಾರ ಪಾರಾಯಣ ಸಮರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮ ಸಾನಿಧ್ಯವಹಿಸಿ ದೀಪಪ್ರಜ್ವಾಲನೆ ಮೂಲಕ ಉದ್ಘಾಟನೆ ನೆರವೇರಿಸಿದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಅನುಗ್ರಹ ಸಂದೇಶ ನೀಡಿ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ಸಹಭಾಗಿತ್ವದಲ್ಲಿ ನಡೆದ ಹರಿಕಥಾಮೃತಸಾರ ಪಾರಾಯಣ ಕಾರ್ಯಕ್ರಮದ ನೇತೃತ್ವವನ್ನು ಅನಂತಪೂರು ಯಶೋಧಮ್ಮ ವಹಿಸಿದ್ದರು. ಸುಮಾರು ೧೫೦೦ ಜನ ಸದಸ್ಯರು ಹರಿಕಥಾಮೃತಸಾರ ಪಾರಾಯಣ ಮಾಡಿದರು.
Comments
Post a Comment