ಕಳಚಿದ ಬಸ್ಸಿನ ಚಕ್ರದ ನಟ್ ಬೋಳ್ಟ್ : ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಕಳಚಿದ ಬಸ್ಸಿನ ಚಕ್ರದ ನಟ್ ಬೋಳ್ಟ್ : ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ರಾಯಚೂರು.,ಜು.೧೬-ರಾಯಚೂರಿನಿಂದ ತಲಮಾರಿಗೆ ಹೋಗುವ ಬಸ್ಸಿನ ಚಕ್ರದ ನಟ್ ಬೋಲ್ಟ್ ಕಳಚಿ ಕೂದಲೆಳೆ ಅಂತರದಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ಬಸ್ ನಲ್ಲಿ ಪ್ರಯಾಣಿಸುವವರ ಜೀವ ಹಾನಿ ತಪ್ಪಿದೆ.
ಬಸ್ ಸಂಖ್ಯೆ ಕೆಎ ೩೬-ಎಫ್ ೯೧೬ ಸಂಖ್ಯೆಯ ಬಸ್ ಎಂದಿನ0ತೆ ತಲಮಾರಿಗೆ ಹೋಗಿ ಹಿಂತಿರುಗುವ ವೇಳೆ ಬಸ್ಸಿನ ಹಿಂದಿನ ಚಕ್ರದ ನಟ್ ಬೋಳ್ಟ್ ಕಳಚಿಬಿದ್ದಿದ್ದು ಒಂದೆರೆಡು ನಟ್ ಬೋಳ್ಟ್ ಮೇಲೆ ಬಸ್ ಚಲಿಸಿದ್ದು ನಂತರ ಹಿಂದಿನಿ0ದ ಬಂದ್ ಆಟೊ ಚಾಲಕ ಬಸ್ ಚಕ್ರದ ನಟ್ ಬೋಳ್ಟ್ ಕಳಿಚಿದ ಬಗ್ಗೆ ಸೂಚನೆ ನೀಡಿದಾಗ ಚಾಲಕನು ತಕ್ಷಣ ಬಸ್ ನಿಲ್ಲಿಸಿ ಮುಂದಾಗಬಹುದಾದ ಅಪಘಾತವನ್ನು ತಪ್ಪಿಸಿದ್ದು ಪ್ರಯಾಣಿಕರ ಜೀವ ರಕ್ಷಣೆಯಾಗಿದೆ.
ಹದಗೆಟ್ಟ ರಸ್ತೆಯಿಂದ ವಾಹನಗಳ ಬಿಡಿಭಾಗಗಳು ಕಳಚಿ ದುರಂತ ಸಂಭವಿಸುವ ಮುನ್ನ ರಸ್ತೆ ದುರಸ್ತಿ ಮಾಡಬೇಕು ಇಲ್ಲದಿದ್ದರೆ ಇದೆ ರೀತಿ ಮುಂದೆ ಬಸ್ಸಿನ ಚಕ್ರ ಕಳಚಿ ಬೀಳಿವುದರಲ್ಲಿ ಸಂಶಯವಿಲ್ಲ್ಲ ಹೀಗೆ ಮುಂದುವರೆದರೆ ಪ್ರಯಾಣಿಕರ ಜೀವ ಹಾನಿ ತಪ್ಪಿದಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
Comments
Post a Comment