ನಗರಸಭೆ ಸಭಾಂಗಣದಲ್ಲಿ ೧೫ನೇ ಹಣಕಾಸಿನ ಕ್ರಿಯಾ ಯೋಜನೆ ಸಭೆ: ಏಕಾಏಕಿ ಸಭೆ ಕರೆದಿರುವ ಬಗ್ಗೆ ಸದಸ್ಯರ ಅಸಮಾಧಾನದೊಂದಿಗೆ ಪ್ರಸ್ತಾವನೆಗೆ ಒಪ್ಪಿಗೆ

 


 ನಗರಸಭೆ  ಸಭಾಂಗಣದಲ್ಲಿ ೧೫ನೇ ಹಣಕಾಸಿನ ಕ್ರಿಯಾ ಯೋಜನೆ ಸಭೆ:
ಏಕಾಏಕಿ ಸಭೆ ಕರೆದಿರುವ ಬಗ್ಗೆ ಸದಸ್ಯರ ಅಸಮಾಧಾನದೊಂದಿಗೆ ಪ್ರಸ್ತಾವನೆಗೆ ಒಪ್ಪಿಗೆ

 

ರಾಯಚೂರು,ಜು.೨೬-ಏಕಾಏಕಿಯಾಗಿ ಸಭೆ ಕರೆದಿರುವ ಬಗ್ಗೆ ಸದಸ್ಯರು ಒಕ್ಕೂರಲಿನಿಂದ ಪೌರಾಯುಕ್ತರ ನಡೆ ಬಗ್ಗೆ ಅಸಮಾಧನ ನಡುವೆ ಹಣಕಾಸು ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ಪ್ರಸಂಗ ನಡೆಯಿತು.
ಇಂದು ಬೆಳಿಗ್ಗೆ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಲಲಿತಾ ಕಡಗೋಲ ಆಂಜಿನೇಯ್ಯ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ೧೫ನೇ ಹಣಕಾಸಿನ ಕ್ರಿಯಾ ಯೋಜನೆ ಪ್ರಸ್ತಾವನೆ  ಆಡಳಿತಾತ್ಮಕ ಮಂಜೂರಾತಿಗೆ  ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಬಗ್ಗೆ ಕರೆದಿದ್ದ ಸಭೆಯಲ್ಲಿ ನಗರಸಭೆ ಸದಸ್ಯರು ಒಕ್ಕೂರಲಿನಿಂದ ಪೌರಾಯುಕ್ತರ ನಡೆಯ ಬಗ್ಗೆ ಅಸಮಾಧನಾ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ ಪ್ರಸ್ತಾವಿಕವಾಗಿ ಮಾತನಾಡಿ ನಗರದ ಒಟು ೩೫ ವಾರ್ಡ್ಗಳಿಗೆ ಒಟ್ಟು ೧೧.೭೨ ಕೋಟಿ ರೂ ವಿವಿಧ ಕಾಮಗಾರಿಗಳೀಗೆ ಮೀಸಲಿಡಲಾಗುತ್ತಿದ್ದು ತಲಾ ವಾರ್ಡಿಗೆ ಒಟ್ಟು ೧೩ ಲಕ್ಷ ರೂ ವಿಂಗಡಿಸಲಾಗಿದ್ದು ಉಳೀದ ಹಣದಲ್ಲಿ ಇತರೆ ಕಾಮಗಾರಿ ಹಂಚಿಕೆ ಮಾಡಲಾಗುತ್ತದೆ ಎಂದರು.
ನಗರಸಭೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ ಸದಸ್ಯರ ತಮ್ಮ ವಾರ್ಡಿನ ಬೇಕು ಬೇಡಗಳ ಬಗ್ಗೆ ತಾವು ಚರ್ಚಿಸದೆ ಏಕಾಏಕಿಯಾಗಿ ಜಿಲ್ಲಾಧಿಕಾರಿಗಳ ಆಡಳಿತಾತ್ಮಕ ಅನುಮೋದನೆಗಾಗಿ ನಮ್ಮ ಸಭೆ ಕರೆದರೆ ಹೇಗೆ ಮೊದಲು ಈ ಬಗ್ಗೆ ಸದಸ್ಯರನ್ನು ಏಕೆ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲವೆಂದು ಪ್ರಶ್ನಿಸಿದರು.
ಸದಸ್ಯ ಎಂ.ಕೆ.ನಾಗರಾಜ ಮಾತನಾಡಿ ನಗರಸಭೆ ಸಿಬ್ಬದಿಗಳು ನಿಮಗೆ ಮಾಹಿತಿ ನೀಡಿಲ್ಲವೆ ನಮೊಂದಿಗೆ ಯಾವುದೆ ವಿಷಯಗಳ ಬಗ್ಗೆ ಚರ್ಚಿಸದೆ ದಿಡೀರನೆ ಸಭೆ ಕರೆದರೆ ಹೇಗೆಂದು ಅಸಮಾಧಾನ ವ್ಯಕ್ತಪಡಸಿ ಸಭೆಯ ದಿಕ್ಕ ತಪ್ಪಿಸಿದರೆ ಹೇಗೆಂದು  ಪೌರಾಯುಕ್ತರಿಗೆ ಪ್ರಶ್ನಿಸಿದರು.



ಸದಸ್ಯರಾದ ದರೂರು ಬಸವರಾಜ ಮಾತನಾಡಿ ಕಾಮಗಾರಿಗಳ ಮಾಹಿತಿ ನೀಡದೆ ಕ್ರಿಯಾ ಯೋಜನೆ ಸಭೆ ಕರೆದರೆ ಹೇಗೆಂದು ಕೇಳಿದ ಅವರು ಸಭೆಯ ಪ್ರತಿಯೋಂದು ವಿಷಯದ ಬಗ್ಗೆ ನಡಾವಳಿಗಳ ಬಗ್ಗೆ ದಾಖಲಿಸಬೇಕೆಂದರು.
ಶ್ರೀನಿವಾಸ ರೆಡ್ಡಿ ಮಾತನಾಡಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯಬೇಕು ನಮಗೆ ಮಾಹಿತಿ ಇಲ್ಲದೆನೆ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತವೆ ಅವು ನಂತರ ನೆನೆಗುದಿಗೆ ಬೀಳುತ್ತವೆ ನಗರಸಭೆಯಲ್ಲಿ ಕಡತಗಳು ಕಾಣಿಯಾಗಿವೆ ಎಂಬ ಸಬೂಬು ಸಿಬ್ಬಂದಿಗಳು ನೀಡುತ್ತಾರೆ ಹೀಗಾದರೆ ಹೇಗೆಂದರು.
ಸದಸ್ಯ ಇ.ಶಶಿರಾಜ ಮಾತನಾಡಿ ಪ್ರತಿಯೊಬ್ಬ ಸದಸಗಯರಿಗೂ ಅನುದಾನ ಸಮಾನವಾಗಿ ಹಂಚಿಕೆಯಾಗಲಿ ನಂತರ ಉಳಿದ ಅನುದಾನ ಸರ್ವ ಸದಸ್ಯರ ಒಪ್ಪಿಗೆಯೊಂದಿಗೆ ಬಳಕೆಯಾಗಲಿ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಈ.ವಿನಯ್ ಕುಮಾರ್ ಮಾತನಾಡಿ ನಗರದಲ್ಲಿ ನಗರಸಭೆ ಬಗ್ಗೆ ಜನರು ಆಡಲಿಕೊಳ್ಳುತ್ತಿದ್ದಾರೆ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದ ಅವರು ಸರ್ವ ಸದಸ್ಯರ ಒಪ್ಪಿಗೆ ಪಡೆದು ಕ್ರಿಯಾ ಯೋಜನೆ ಆಡಳಿತಾತ್ಮಕ ಮಂಜೂರಿಗೆ ಪ್ರಸ್ತಾವನೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಎಂದರು.
ಸದಸ್ಯ ರಮೇಶ ಮಾತನಾಡಿ ಕುಷಿತ ನೀರು ಸೇವನೆಯಿಂದ ಮೃತಪಟ್ಟ ಮೊದಲ ವ್ಯಕ್ತಿ ನಮ್ಮ ವಾರ್ಡಿನವರಾಗಿದ್ದಾರೆ ಅದೇ ರೀತಿ ನಗರಸಭೆ ತೀರ್ಮಾನದಂತೆ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದವರ ಅರೋಗ್ಯ ವೆಚ್ಚ ನಗರಸಭೆ ಭರಿಸಬೇಕೆಂದು ಒತ್ತಾಯಿಸಿದರು.
ವಿವಿಧ ವಾರ್ಡುಗಳ ನಗರಸಭೆ ಸದಸ್ಯರು, ನಾಮ ನಿರ್ದೇಶನ ಸದಸ್ಯರು ಭಾಗವಹಿಸಿದ್ದರು.
ವೇದಿಕೆ ಮೇಲೆ ನಗರಸಭೆ ಉಪಾಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಪೌರಾಯುಕ್ತ ಗುರುಲಿಂಗಪ್ಪ ಇದ್ದರು.




Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್