ಆರ್ಯವೈಶ್ಯ ಗೀತಾಮಂದಿರದಲ್ಲಿ 35 ನೇ ವರ್ಷದ ಗಣೇಶೋತ್ಸವ: ದಿನ ನಿತ್ಯ ಗಣೇಶನಿಗೆ ವೈವಿಧ್ಯಮಯ ಅಲಂಕಾರಗಳು- ಸಾವಿತ್ರಿ ಶ್ರೀ ಹರ್ಷ



ಆರ್ಯವೈಶ್ಯ ಗೀತಾಮಂದಿರದಲ್ಲಿ 35 ನೇ ವರ್ಷದ ಗಣೇಶೋತ್ಸವ:

 ದಿನ ನಿತ್ಯ ಗಣೇಶನಿಗೆ ವೈವಿಧ್ಯಮಯ  ಅಲಂಕಾರಗಳು- ಸಾವಿತ್ರಿ ಶ್ರೀ ಹರ್ಷ


 ರಾಯಚೂರು,ಆ.29- ನಗರದ ಆರ್ಯವೈಶ್ಯ ಸಮುದಾಯದ ಸಂಕೇತವಾಗಿ ಕಳೆದ 34 ವರ್ಷಗಳಿಂದ ಗೀತಾಮಂದಿರ ದಲ್ಲಿ ಗಣೇಶ ಉತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ಮೂರುವರೆ ದಶಕಗಳಿಂದ ಆರ್ಯವೈಶ್ಯ ಗೀತಾಮಂದಿರ ಗಣೇಶ ಉತ್ಸವ ಜನರಿಗೆ ಸುಂದರ ಅಲಂಕಾರಗಳ ವೈಭವದಿಂದ ಅತ್ಯಂತ ಜನಪ್ರಿಯತೆ ಪಡೆದು ಕೊಂಡಿದೆ. ಈ ವರ್ಷ 35 ನೇ ವರ್ಷಕ್ಕೆ ಹೆಜ್ಜೆ ಹಾಕುತ್ತಿದ್ದೇವೆ ಹೀಗಾಗಿ ಈ ಸಾರಿ ಮೂರುವರೆ ದಶಕಗಳ ಗಣೇಶ ಉತ್ಸವ ವಿಶೇಷ ಅಲಂಕಾರಗಳೊಂದಿಗೆ 9 ದಿನಗಳ ಗಜಾನನ ಉತ್ಸವ ಮಾಡುತ್ತಿದ್ದೇವೆ ಎಂದು ಆರ್ಯವೈಶ್ಯ ಗೀತಾಮಂದಿರ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಸಾವಿತ್ರಿ ಶ್ರೀ ಹರ್ಷ ಹೇಳಿದರು.

 ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಈ ಬಾರಿ ಆರ್ಯವೈಶ್ಯ ಗೀತಾಮಂದಿರ ಗಣೇಶೋತ್ಸವ 35 ನೇ ವರ್ಷ ಆದ್ದರಿಂದ ಈ ಸಾರಿ ಗೀತಾಮಂದಿರ ಮಂದಿರ ಆವರಣದಲ್ಲಿನ ಅಲಂಕಾರ ಪ್ರತಿ 3 ದಿನಗಳಿಗೊಮ್ಮೆ ಬದಲಾವಣೆ ಮಾಡುತ್ತೇವೆ. ದೇವಸ್ಥಾನಗಳ ಪ್ರತಿ ರೂಪದ ಚಿತ್ರಣ ನಿರ್ಮಿಸುತ್ತಿದ್ದೇವೆ ಅಲ್ಲದೆ ಅಲ್ಲಿ ಮೊಬೈಲ್ ಸೆಲ್ಫಿಯ ಅವಕಾಶ ಸಾರ್ವಜನಿಕರಿಗೆ ನೀಡುತ್ತೇವೆ. ಪ್ರತಿ ಅಲಂಕಾರವೂ ವಿಶೇಷವಾಗಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಮೊದಲ ದಿನ ಗೀತಾಮಂದಿರದಿಂದ ಕಂಚಿ ಮೇಳದೊಂದಿಗೆ ಬೆಳಿಗ್ಗೆ  ತಂಡ ಶ್ರೀ ನಗರೇಶ್ವರ ದೇವಸ್ಥಾನಕ್ಕೆ ತೆರಳಿ ನಂತರ ಅಲ್ಲಿಂದ ಗಣೇಶ ಮೂರ್ತಿಯನ್ನು ಅಲಂಕೃತ ರಥದೊಂದಿಗೆ ಮೆರವಣಿಗೆ ಮೂಲಕ ಗೀತಾಮಂದಿರಕ್ಕೆ ತರಲಾಗುತ್ತದೆ. ನಂತರ 9 ದಿನಗಳ ಉತ್ಸವಕ್ಕೆ ಪ್ರತಿಷ್ಠಾಪನೆ ಮಾಡಿ ಪೂಜೆ


ಸಲ್ಲಿಸಲಾಗುತ್ತದೆ.ಸಂಜೆ  6 ಕ್ಕೆ 9 ದಿನಗಳ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ವಿಧಾನ ಪರಿಷತ್ತು ಮಾಜಿ ಸದಸ್ಯರಾದ ಶ್ರೀ ಎನ್.ಎಸ್.ಭೋಸರಾಜು ರವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಗಜಾನನ ಉತ್ಸವ ಸಮಿತಿ ಅಧ್ಯಕ್ಷ ಸಾವಿತ್ರಿ ಶ್ರೀ ಹರ್ಷ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮುದಾಯದ ನಾಯಕರುಗಳಾದ ಕೊಂಡ ಕೃಷ್ಣಮೂರ್ತಿ, ಸಾವಿತ್ರಿ ಪುರುಷೋತ್ತಮ, ಕುಂಟ್ನಾಳ ವೆಂಕಟೇಶ, ಬಿ.ಗೋವಿಂದ, ಗಾಣಧಾಳ ಲಕ್ಷೀಪತಿ ರವರು ಆಗಮಿಸಲಿದ್ದಾರೆ. 

ಪೂಜೆ , ಅಲಂಕಾರ ಮತ್ತು ಪ್ರಸಾದ ದಾನಿಗಳಿಗೆ ಅಂದಿನ ಸೇವೆಯಂದು ಗೌರವಿಸಲಾಗುತ್ತದೆ.9 ನೆಯ ದಿನ ಅಂದರೆ 9 ಸೆಪ್ಟೆಂಬರ್ ಸಂಜೆ ಸಮಾರೋಪ ಸಮಾರಂಭದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದ ಶ್ರೀ ರಾಜಾ ಅಮರೇಶ್ವರ ನಾಯಕ ನಗರ ಶಾಸಕರಾದ ಶ್ರೀ ಶಿವರಾಜ ಪಾಟೀಲ ರವರು ಆಗಮಿಸಲಿದ್ದಾರೆ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಡಗೋಳ, ಆರ್ .ಡಿ. ಎ. ಅಧ್ಯಕ್ಷ ತಿಮ್ಮಪ್ಪ ನಾಡಗೌಡ ರವರು ಆಗಮಿಸಲಿದ್ದು ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ನಂತರ ನಗರದ ಪ್ರಮುಖ ರಸ್ತೆಯಲ್ಲಿ ವಿಶೇವ ಹೂಗಳ ಅಲಂಕೃತ ರಥೋತ್ಸವದಲ್ಲಿ ಗಣೇಶ ನ ಮೆರವಣಿಗೆ ಮಾಡಲಾಗುತ್ತದೆ ಈ ಮೆರವಣಿಗೆಯಲ್ಲಿ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಪಂಜಾಬ್ ನಿಂದ ಕಲಾ ತಂಡಗಳು ಭಾಗವಿಸಿ ಆ ರಾಜ್ಯಗಳ ಸಾಂಸ್ಕೃತಿಕ ಸೊಬಗು ರಾಯಚೂರು ಜನತೆಗೆ ಉಣ ಬಡಿಸುತ್ತವೆ. ಜೊತೆಗೆ ವಿಭಿನ್ನ ರೀತಿಯ ಚಿತ್ತಾರಗಳನ್ನು ಮೂಡಿಸುವ ಬಾಣ ಬಿರುಸುಗಳು ಆಕಾಶದ ಅಂಗಳದಲ್ಲಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. 9 ದಿನಗಳ ಈ ವೈಭವದ ಉಸ್ತುವಾರಿ ಆರ್ಯವೈಶ್ಯ ಸಮುದಾಯದ ಯುವಕರ ತಂಡ ವಹಿಸಿಕೊಂಡಿದ್ದು ಉತ್ಸವದ ಪ್ರತಿ ಹೆಜ್ಜೆಯಲ್ಲೂ ಯುವಕರ ಕಾರ್ಯ ಪಡೆ ರಚನೆಯಾಗಿದ್ದು ಎಲ್ಲರೂ ಈಗಾಗಲೇ ಕಾರ್ಯಕ್ಕೆ ಸಜ್ಜಾಗಿರುತ್ತಾರೆ. ಜನಾಂಗದ ಸಹಾಯ ಸಹಕಾರದಿಂದ ಈ ಗಣೇಶ ಉತ್ಸವ ನಡೆಯಲಿದ್ದು ರಾಯಚೂರಿನ ಆರ್ಯವೈಶ್ಯರ ಏಕೈಕ ಗಣೇಶ ಉತ್ಸವ ಆಗಿರುತ್ತದೆ. 35 ವರ್ಷಗಳ ಈ ಸಂಭ್ರಮವನ್ನು ಸಾರ್ವಜನಿಕರು ಬಂದು ದೇವರ ದರ್ಶನ ಪಡೆದು ವೈಭವದ ಸೊಬಗು ಸವಿಯಬೇಕು ಎಂದು ಕೋರಿದರು.                         ಈ ಸಂದರ್ಭದಲ್ಲಿ ಕೊಂಡ ಹನುಮೇಶ, ಎಂ.ಆರ್. ಶ್ರೀಕಾಂತ, ಎಂ.ಆರ್ . ಸತೀಶ, ಬೂರ್ದಿಪಾಡ ರಾಘವೇಂದ್ರ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ