ಲಾಯನ್ಸ ಕ್ಲಬ್ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ
ಲಾಯನ್ಸ ಕ್ಲಬ್ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ
ರಾಯಚೂರು, ಆ.24: ನಗರದ ಲಾಯನ್ಸ ಕ್ಲಬ್ ಜಿಲ್ಲಾ ಘಟಕದ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಲಲಿತಾ ಹಿರಿಯ ನಾಗರಿಕರ ಮನೆಯಲ್ಲಿ ಹಣ್ಣುಹಂಪಲುಗಳನ್ನು ವಿತರಿಸಲಾಯಿತು.
ಲಾಯನ್ಸ ಕ್ಲಬ್ ಹಿರಿಯ ಸದಸ್ಯೆ ಲಾಯನ್ ಅಮೃತಾ ಹನುಮಂತರಾವ್ ಅವರು ತಮ್ಮ ಜನ್ಮದಿನ ಅಂಗವಾಗಿ ಹಣ್ಣುಗಳನ್ನು ದಾನವಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಲಾಯನ್ಸ ಕ್ಲಬ್ ಅಧ್ಯಕ್ಷ ಲಯನ್ ಮಲ್ಲಿಕಾರ್ಜುನ ಬಾಳಿ ಮಾತನಾಡಿ, ಲಲಿತಾ ಹಿರಿಯ ನಾಗರಿಕರ ಮನೆಗೆ ಅಗತ್ಯ ಸಹಾಯ-ಸಹಕಾರ ನೀಡಲು ರಾಯಚೂರು ಲಾಯನ್ಸ ಕ್ಲಬ್ ಸಿದ್ಧವಿದೆ.
ಏನೇ ಕುಂದುಕೊರತೆಗಳಿದ್ದರೂ ನಮ್ಮ ಗಮನಕ್ಕೆ ತನ್ನಿ, ನಮ್ಮಿಂದಾಗುವ ಎಲ್ಲಾ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಹಿರಿಯ ಸದಸ್ಯರಾದ ಕೆ.ಎಸ್.ನಾಯರ್, ಲಯನ್ ಹೆಮಣ್ಣ ಉಣ್ಣಿ, ಕಾರ್ಯದರ್ಶಿ ಲಯನ್ ರಾಜೇಂದ್ರ ಕುಮಾರ್.ಎಸ್.ಶಿವಾಳೆ ಸೇರಿದಂತೆ ಹನುಮಂತರಾವ್ ದಂಪತಿಗಳು ಹಾಗೂ ಕುಟುಂಬದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Comments
Post a Comment