ಮಂತ್ರಾಲಯದಲ್ಲಿ ೫ ನೇ ಶ್ರೀಮನ್ನಾಯಸುಧಾ ಮಂಗಳ ಮಹೋತ್ಸವ ಉದ್ಘಾಟನೆ: ಶ್ರೀಮನ್ನಾಯಸುಧಾ ಶ್ರೀ ಜಯತೀರ್ಥರ ಒಂದು ಉತ್ಕೃಷ್ಟ ವ್ಯಾಖ್ಯಾನ - ಶ್ರೀ ಸುಬುಧೇಂದ್ರತೀರ್ಥರು

 


ಮಂತ್ರಾಲಯದಲ್ಲಿ ೫ ನೇ ಶ್ರೀಮನ್ನಾಯಸುಧಾ ಮಂಗಳ ಮಹೋತ್ಸವ ಉದ್ಘಾಟನೆ:

ಶ್ರೀಮನ್ನಾಯಸುಧಾ  ಶ್ರೀ ಜಯತೀರ್ಥರ ಒಂದು ಉತ್ಕೃಷ್ಟ ವ್ಯಾಖ್ಯಾನ- ಶ್ರೀ ಸುಬುಧೇಂದ್ರತೀರ್ಥರು

ರಾಯಚೂರು,ಆ.೨೪-ಶ್ರೀಮನ್ನಾಯಸುಧಾ ಗ್ರಂಥವು ಶ್ರೀ ಜಯತೀರ್ಥರ ಉತ್ಕೃಷ್ಟ ವ್ಯಾಖ್ಯಾನ ಒಳಗೊಂಡ ಗ್ರಂಥವಾಗಿದೆ, ಶ್ರೀ ಮಧ್ವಾಚಾರ್ಯರ ಭಾಷ್ಯಕ್ಕೆ ಶ್ರೀಮನ್ನಾಯಸುಧಾ ಉತ್ತಮವಾದ ಮತ್ತು ವಿಸ್ತೃತ ವ್ಯಾಖ್ಯಾನ ಬರೆಯಲಾಗಿದೆ ಎಂದು ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು.


ಅವರಿಂದು ಶ್ರೀಮಠದಲ್ಲಿ ಎರೆಡು ದಿನಗಳ ಕಾಲ ಹಮ್ಮಿಕೊಳ್ಳಲಾದ ಶ್ರೀಮನ್ನಾಯಸುಧಾ  ಮಂಗಳ ಮಹೋತ್ಸವ ಹಾಗೂ ಶ್ರೀಮತ್ಸಮೀರಸಮಯ ಸಂವರ್ಧೀನಿ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಶ್ರೀಮನ್ನಾಯಸುಧಾ  ಪರಾಂಗತರಾದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಆಶೀರ್ವಚನ ನೀಡಿದರು.
ಕರೋನಾ ಹಿನ್ನಲೆಯಲ್ಲಿ ಶ್ರೀಮನ್ನಾಯಸುಧಾ ಕಾರ್ಯಕ್ರಮ ಮುಂದೂಡಲಾಗಿತ್ತು ಇದೀಗ ನಮ್ಮ ೧೦ನೇ ಚಾತುರ್ಮಾಸ್ಯ ಸಂದರ್ಭದಲ್ಲಿ ೫ನೇ ಶ್ರೀಮನ್ನಾಯಸುಧಾ  ಮಂಗಳಮಹೋತ್ಸವ ನಡೆಯುತ್ತಿದ್ದು ಕಳೆದ ಮೂರು ವರ್ಷದ ಹಿಂದೆ ರಾಯಚೂರಲ್ಲಿ ನಡೆದ ಶ್ರೀಮನ್ನಾಯಸುಧಾ  ಮಂಗಳಮಹೋತ್ಸವದಲ್ಲಿ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ್ವರತೀರ್ಥರು ಪಾಲ್ಗೊಂಡಿದ್ದರು ನಂತರ ಕೆಲ ದಿನಗಳಲ್ಲೆ ಅವರು ಹರಿಪಾದ ಸೇರಿದರು ಎಂದು ಸ್ಮರಿಸಿಕೊಂಡರು.


ಶ್ರೀಮನ್ನಾಯಸುಧಾ ಮಂಗಳ ಮಹೋತ್ಸವದಲ್ಲಿ ಅನೇಕ ಸ್ವಾಮೀಜಿಗಳು ಭಾಗವಹಿಸುತ್ತಾರೆ ಆದರೆ ಚಾತುರ್ಮಾಸ್ಯ ಹಿನ್ನಲ್ಲೆಯಲ್ಲಿ ಮಠಾಧೀಶರು ಇಲ್ಲಿಗೆ ಆಗಮಿಸಿಲ್ಲವೆಂದ ಅವರು ಮಂಗಳ ಮಹೋತ್ಸವದಲ್ಲಿ ಮಠಾತೀತ ಮತ್ತು ಮತಾತೀತವಾಗಿ ತ್ರಿಮತಸ್ಥರು ಮತ್ತು ಯಾವುದೆ ಮಠಬೇಧವಿಲ್ಲದೆ ಎಲ್ಲ ವಿಧ್ವಾಂಸರು ಪಾಲ್ಗೊಂಡಿದ್ದು ಅವರಿಗೆ ವಿಶೇಷವಾಗಿ ಅನುಗ್ರಹಿಸಲಾಗುತ್ತದೆ ಎಂದರು.
ನಮ್ಮ ಮಠವು ವಿದ್ಯಾಮಠವಾಗಿದ್ದು ಇಲ್ಲಿ ವಿದ್ವತ್ತಿಗೆ ಮತ್ತು ಧಾರ್ಮಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದ ಅವರು ಈ ಬಾರಿ  ಕೆ.ಶಶಿಧರಾಚಾರ್ಯ, ಕೆ.ರಾಮಕೃಷ್ಣಾಚಾರ್ಯ, ಎಂ.ಸುಮುಖಾಚಾರ್ಯ,ಜಿ.ಸ0ಪತ್ ಕುಮಾರ್ ಆಚಾರ್ಯ ಶ್ರೀಮನ್ನಾಯಸುಧಾ  ಅಧ್ಯಯನ ಪೂರ್ಣಗೊಳಿಸಿದ್ದು ಅವರಿಗೆ ರ
ತ ಪಾತ್ರೆಗಳು ಹಾಗೂ ೦ದು ಲಕ್ಷ .ರೂ ನೀಡಲಾಗುತ್ತದೆ ಎಂದರು.


ಪ್ರಾರ0ಭದಲ್ಲಿ ಮಹಾಮಹೋಪಾಧ್ಯಾಯರಾದ ಶ್ರೀ ರಾಜಾ ಎಸ್.ಗಿರಿಯಾಚಾರ್ಯ ಮತ್ತು ಇತರ ಪಂಡಿತರು ಮತ್ತು ವಿದ್ಯಾರ್ಥಿಗಳೊಂದಿಗೆ ಪೀಠಾಧಿಪತಿಗಳು ವ್ಯಾಖ್ಯಾರ್ಥಗೋಷ್ಟಿಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಪಂಡಿತ ಮುರಳೀಧರ್ ಆಚಾರ್ ಗಲಗಲಿ, ವಿದ್ವಾನ್ ವಾದಿರಾಜಾಚಾರ್, ಸೇರಿದಂತೆ ಶ್ರೀಮಠದ ವಿಧ್ವಾಂಸರು, ಭಕ್ತರು ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ