ಪತ್ರಕರ್ತರಿಂದ ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠರವರಿಗೆ ಶ್ರದ್ಧಾಂಜಲಿ


 ಪತ್ರಕರ್ತರಿಂದ ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠರವರಿಗೆ ಶ್ರದ್ಧಾಂಜಲಿ

ರಾಯಚೂರು,ಆ.೨೬-ಇತ್ತೀಚೆಗೆ ನಿಧನರಾದ ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠರವರಿಗೆ ಪತ್ರಿಕಾ ಭವನದಲ್ಲಿ ಪತ್ರಕರ್ತರು ಶ್ರದ್ದಾಂಜಲಿ ಸಲ್ಲಿಸಿದರು.
ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಅಗಲಿಕೆ ನೋವು ಭರಿಸುವ ಶಕ್ತಿ ದೇವರು ಅವರ  ಕುಟುಂಬಕ್ಕೆ ನೀಡಲಿ ಎಂದ ಶ್ರದ್ದಾಂಜಲಿ ಸಲ್ಲಿಸಲಾಯಿತು. 

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರ್.ಗುರುನಾಥ ಮಾತನಾಡಿ ಜಿಲ್ಲೆಯಿಂದಲೆ ಅವರ ಪತ್ರಕರ್ತ ವೃತ್ತಿ ಆರಂಬಗೊ0ಡಿದ್ದು ಸುದ್ದಿಮೂಲ ಸಂಸ್ಥೆಯಿ0ದ ಅವರ ವೃತ್ತಿ ಪಯಣ ಸಾಗಿತು ಎಂದರು.
ಹಿರಿಯ ಪತ್ರಕರ್ತ ಬಿ.ವೆಂಕಟ್‌ಸಿ0ಗ್ ಮಾತನಾಡಿ ಸದಾ ಹಸನ್ಮುಖಿಯಾಗಿರುತ್ತಿದ್ದ ಅವರು ಸುದ್ದಿಮೂಲದಿಂದಲೆ ವೃತ್ತಿ ಬದಕು ಪ್ರಾರಂಭಿಸಿದರು ಸಿಎಂ ಮಾಧ್ಯಮ ಸಂಯೋಜಕ ಹುದ್ದೆವರೆಗೆ ಸಾಗಿದ ಅವರು ಪತ್ರಕರ್ತರ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರಲು ಎಲ್ಲ ರೀತಿ ಸಹಕಾರ ನೀಡುತ್ತಿದ್ದು ಸುದ್ದಿಮೂಲ ಸಂಸ್ಥೆ ಮೇಲೆ ಮತ್ತು ಜಿಲ್ಲೆಯ  ಮೇಲೆ ಅಪಾರ ಅಭಿಮಾನ ಹೊಂದಿದ್ದರು ಎಂದರು.



ಕೆಯುಡ್ಬೂ÷್ಲಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ ಮಾತನಾಡಿ ಅತ್ಯಂತ ಕ್ರೀಯಾಶೀಲರಾಗಿದ್ದ ಅವರು ಸ್ನೇಹಮಯಿ ಸ್ವಭಾವದವರಾಗಿದ್ದರು ಎಂದರು.
ರಿಪರ‍್ಟರ‍್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಮಾತನಾಡಿ ನಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ ಅವರು ಕಷ್ಟದಿಂದ ಉನ್ನತ ಹುದ್ದೆವರೆಗೆ ತಲುಪಿದ್ದರು ದುಂದುವೆಚ್ಚಕ್ಕೆ ಸದಾ ವಿರೋಧ ವ್ಯಕ್ತಪಡಿಸುತ್ತಿದ್ದ ಅವರು ಶಿಸ್ತುಬದ್ದ ಪತ್ರಕರ್ತರಾಗಿದ್ದರು ಎಂದರು.
ಪ್ರಜಾವಾಣಿ ಜಿಲ್ಲಾ ವರದಿಗಾರರಾದ ನಾಗರಾಜ ಚಿನಗುಂಡಿ ಮಾತನಾಡಿ ಧಾರವಾಡದ ಕರ್ನಾಟಕ ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ಅವರು ಇತ್ತೀಚೆಗೆ ಧಾರವಾಡದಲ್ಲಿ ಕರ್ನಾಟಕ ವಿವಿ ಹಳೆ  ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು ಎಂದು ಅವರೊಂದಿಗಿನ ಒಡನಾಟ ಸ್ಮರಿಸಿಕೊಂಡರು.


ಈ ಸಂದರ್ಭದಲ್ಲಿ ಪತ್ರಕರ್ತರಾದ ದತ್ತು ಸರ್ಕಿಲ್, ಜಗನ್ನಾಥ ದೇಸಾಯಿ, ಶಿವಪ್ಪ ಮಡಿವಾಳರ್, ಬಸವರಾಜ ನಾಗಡದಿನ್ನಿ, ರಮೇಶ ಗೋರೆಬಾಳ, ವಿಜಯಜಾಗಟಗಲ್, ರಾಮಕೃಷ್ಣ, ಮಹಾನಂದ, ಪ್ರಸನ್ನ ಜೈನ್,ಈರಣ್ಣ, ಧೀರೇಂದ್ರ ಕುಲಕರ್ಣಿ, ವೆಂಕಟೇಶ ಹೂಗಾರ್, ಭೀಮು ಪೂಜಾರ್, ಸಿದ್ದಯ್ಯಸ್ವಾಮಿ ಕುಕನೂರು, ಮಲ್ಲಿಕಾರ್ಜುನಯ್ಯ,ಶ್ರೀಕಾಂತ್ ಸಾವೂರು,ಜಗನ್ನಾಥ ಪೂಜಾರಿ, ಅಮರೇಶ ಎಲ್.ಕೆ,ಜಯಕುಮಾರ್ ದೇಸಾಯಿ ಕಾಡ್ಲೂರು,ಹನಮಂತು, ಬಾಭಾ ಹಟ್ಟಿ, ಅಮರೇಶ ಸಜ್ಜನ, ಮಲ್ಲಿಕಾರ್ಜುನ ಸ್ವಾಮಿ,ಅಬ್ದುಲ್ ಖಾದರ್, ಯಲ್ಲಪ್ಪ, ಗಿರೀಶ, ಹನುಮಂತ ,  ಶ್ರೀನಿವಾಸ್, ಶಿವು, ಬಾಲು ಸೇರಿದಂತೆ ಹಿರಿಯ ಕಿರಿಯ ಪತ್ರಕರ್ತರಿದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್