ಮಕ್ಕಳ ಕೈಯಲ್ಲಿ ಅರಳಿದ ವಿವಿಧ ಭಂಗಿಯ ಮಣ್ಣಿನ ಗಣೇಶ * ಮಕ್ಕಳಲ್ಲಿ ಪರಿಸರ ಕಾಳಜಿ ಹೆಚ್ಚಿಸುವ ಕಾರ್ಯ ಶ್ಲಾಘನೀಯ - ಶಾಸಕ ಡಾ. ಶಿವರಾಜ್ ಪಾಟೀಲ್

 






ಮಕ್ಕಳ ಕೈಯಲ್ಲಿ ಅರಳಿದ ವಿವಿಧ ಭಂಗಿಯ ಮಣ್ಣಿನ ಗಣೇಶ:

ಮಕ್ಕಳಲ್ಲಿ ಪರಿಸರ ಕಾಳಜಿ ಹೆಚ್ಚಿಸುವ ಕಾರ್ಯ ಶ್ಲಾಘನೀಯ - ಶಾಸಕ  ಶಿವರಾಜ್ ಪಾಟೀಲ್

ರಾಯಚೂರು,ಆ.30: ಆದುನಿಕತೆ ಭರಾಟೆಯಲ್ಲಿ ಪರಿಸರದ ಬಗ್ಗೆ  ನಿರ್ಲಕ್ಷ್ಯದ ಪರಿಣಾಮ ನಾವು ಎದುರಿಸುವಂತಾಗಿದ್ದು,  ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಹಬ್ಬವನ್ನಾಗಿಸಲು  ಮಕ್ಕಳಲ್ಲಿ ಪರಿಸರ ಕಾಳಜಿ ಹೆಚ್ಚಿಸುವ ಕಾರ್ಯ ಶ್ಲಾಘನೀಯ  ಎಂದು ಶಾಸಕ  
ಡಾ ಶಿವರಾಜ್ ಪಾಟೀಲ್ ಹೇಳಿದರು.
ನಗರದ  ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಗ್ರೀನ್ ರಾಯಚೂರು,ಶಿಲ್ಪಾ ಫೌಂಡೇಶನ್,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರ್ಯಾವರಣ ಸಂರಕ್ಷಣ ಗತಿವಿಧಿ, ರಾಯಚೂರು, ನಗರಸಭೆ,  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರುಗಳ ಸಂಯುಕ್ತಾಶ್ರಯದಲ್ಲಿ   ಆಯೋಜಿಸಲಾಗಿದ್ದ ಪರಿಸರ ಸ್ನೇಹಿ ಬೀಜವುಳ್ಳ ಮಣ್ಣಿನ ಗಣಪ ತಯಾರಿಕಾ ಕಾರ್ಯಾಗಾರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಪರಿಸರ ನಿರ್ಲಕ್ಷ್ಯದ ಪರಿಣಾಮ ಇಂದು ನಾವು ಎದುರಿಸುತ್ತಿದ್ದೆವೆ, ನಗರ ಗ್ರಾಮೀಣ ಪ್ರದೇಶಗಳಲ್ಲಿ ಹಸಿರು ಮಾಯವಾಗಿದ್ದು, ಜಲಮೂಲಗಳು

ಅವನತಿಯಾಗುತ್ತಿದ್ದು,ವಾಯು ಮಾಲಿನ್ಯ ಹೆಚ್ಚಾಗಿದ್ದು, ಇಂತಹ ಸಂದರ್ಭದಲ್ಲಿ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಮಕ್ಕಳನ್ನೂ ತೊಡಗಿಸಿಕೊಂಡು ಅವರಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯ ಶ್ಲಾಘನೀಯ.
ಬೆಳಯುವ ಸಿರಿ ಮೊಳಕೆಯಲ್ಲಿ ಅನ್ನುವಹಾಗೆ ಇಂದು    ಮಕ್ಕಳ ಕೈಯಿಂದ ಲೇ 375 ಕ್ಕೂ ಅಧಿಕ ಮಣ್ಣಿನ ಗಣೇಶ ಮೂರ್ತಿಗಳು ತಯಾರಿಸಿ
ಪರಿಸರ ಜಾಗೃತಿ ಮೂಡಿಸಿ ಹಬ್ಬದಲ್ಲಿ ಇದನ್ನೇ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಪರಿಸರ ಸ್ನೇಹಿ ಹಬ್ಬವನಾಗಿಸಲು ಜಾಗೃತಿ ಕಾರ್ಯ ಮಾಡಲಾಗಿದ್ದು, ಇಂತಹ ಕಾರ್ಯಗಳಿಗೆ ನಮ್ಮ ಸಹಕಾರ ಇರಲಿದೆ ಎಂದರು.
ಇದೆ ವೇಳೆ ಕಾರ್ಯಾಗಾರದಲ್ಲಿ ಭಾಗಿಯಾದ ಮಕ್ಕಳಿಗೆ ಪ್ರಮಾಣ ಪತ್ರ  ಮತ್ತು ಭಾರತ ಸ್ವಾತಂತ್ರ್ಯ ಹೋರಾಟಗಾರ ಪುಸ್ತಕ ನೀಡಲಾಯಿತು.
ಈ ಸಂದರ್ಭದಲ್ಲಿ ಕಡಗೋಲ ಆಂಜನೇಯ ,ವೈ. ಗೋಪಾಲ್ ರೆಡ್ಡಿ , ನಗರಸಭೆ ಸದಸ್ಯರಾದ ಇ .ಶಶಿರಾಜ್ ,ಹರೀಶ್ ನಾಡಗೌಡ ,ನಾಗರಾಜ್ ಖಾನಾಪುರ, ರಾಜೇಂದ್ರ ಶಿವಾಳೆ, ಗಜಾನನ ಶನ್ವಿ, ಶೃಂಗೇರಿ ಮಠದ ಆಡಳಿತ ಮಂಡಳಿಯ ಸದಸ್ಯರು,ಗ್ರೀನ್ ರಾಯಚೂರು ಸಂಸ್ಥೆಯ ಹಸಿರು ಯೋಧರು, ಪರ್ಯಾವರಣ ಸಂರಕ್ಷಣ ಗತಿವಿಧಿ ಕಾರ್ಯಕರ್ತರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ