ಸತ್ಯದ ಶೋಧನೆ ಸಂಶೋಧನೆಯ ಗುರಿಯಾಗಬೇಕು-ಶ್ರೀಸುಬುಧೇಂದ್ರತೀರ್ಥರು.
ಸತ್ಯದ ಶೋಧನೆ ಸಂಶೋಧನೆಯ ಗುರಿಯಾಗಬೇಕು-ಶ್ರೀಸುಬುಧೇಂದ್ರತೀರ್ಥರು.
ರಾಯಚೂರು,ಆ.28- ಸತ್ಯ ಶೋಧನೆ ಸಂಶೋಧನೆ ಗುರಿಯಾಗಬೇಕು ರಾಯರು ಒಂದು ಕ್ರಮವನ್ನು ಹಾಕಿಕೊಟ್ಟಿದ್ದಾರೆ ನಾವು ವಾದವನ್ನು ವಿರೋಧಿಸಬೇಕೇ ವಿನಾ ವ್ಯಕ್ತಿಯನ್ನಲ್ಲ. ವಾದ ,ವಿಮರ್ಶೆ,ಸಂಶೋಧನೆ ಆಳವಾಗಿ ಪರಿಣಾಮಕಾರಿಯಾಗಿ ನಡೆಯಬೇಕೆಂದು ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು. ಅವರಿಂದು ಶ್ರೀಮಠದಲ್ಲಿ ಇತಿಹಾಸ ಸಂಶೋಧನಾ ಸಮಾವೇಶ ವನ್ನು ಉದ್ಘಾಟಿಸಿ ಅನುಗ್ರಹ ಸಂದೇಶವನ್ನು ನೀಡಿದರು. ನಮ್ಮ ಅಭಿಪ್ರಾಯವನ್ನು ವಿಷಯಾಧಾರಿತವಾಗಿ ರೂಪಿಸಿಕೊಳ್ಳಬೇಕು ಶ್ರೀ ರಾಘವೇಂದ್ರಸ್ವಾಮಿಗಳಮಠ ಸಂಶೋಧನೆ,ವಿಮರ್ಶೆಗೆ ಸದಾ ಸಿದ್ಧವಿದೆ.ಮುಕ್ತವಾದ , ಚರ್ಚೆ ಸಂವಾದಗಳು ನಡೆಯಲು ಮಂತ್ರಾಲಯ ಮಠ ವೇದಿಕೆಯಾಗಲಿದೆ. ಸಂಶೋಧನೆಯ ಸಮಾವೇಶದ ಉದ್ದೇಶ ಸತ್ಯಾನ್ವೇಷಣೆಗೆ ಪೂರಕವಾದ ವಾತಾವರಣ ನಿರ್ಮಿಸುವುದು.
ಸಂಶೋಧನೆಯ ದಾರಿಯನ್ನು ಸುಗಮಗೊಳಿಸಲು ನಾವೆಲ್ಲರೂ ಪ್ರಯತ್ನಿಸಬೇಕು.ಕರ್ನಾಟಕದ ಎಲ್ಲ ವಿದ್ವಾಂಸರು ಇವತ್ತು ಇಲ್ಲಿ ಸೇರಿರುವುದು ಸಂಶೋಧನಾ ಕ್ಷೇತ್ರಕ್ಕೆ ಹೊಸ ಜೀವ ಬಂದಿದೆ. ಮಂತ್ರಾಲಯ ಮಠ ಬಹಳ ಹಿಂದಿನಿಂದಲೂ ಸಂಶೋಧನ,ಸಂಗ್ರಹ,ಪ್ರಕಟಣೆಯ ಕಾರ್ಯ ಕೈಗೊಂಡಿದೆ.ಇನ್ಮುಂದೆ ಈ ಕಾರ್ಯ ಇನ್ನಷ್ಟು ಬೃಹತ್ ಪ್ರಮಾಣದಲ್ಲಿ ನಡೆಯಲಿದೆ" .ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಹಾಗೂ ಗುರುಸಾರ್ವಭೌಮ ಸಂಸ್ಕ್ರತ ವಿದ್ಯಾಪೀಠ, ಸುಬುಧೇಂದ್ರ ಸೇವಕ ತಂಡ ಗಳ ಸಹಯೋಗದಲ್ಲಿ ನಡೆಯುತ್ತಿರುವ ಇತಿಹಾಸ ಸಂಶೋಧನಾ ಸಮಾವೇಶದ ವೇದಿಕೆಯಲ್ಲಿ ತಿರುಪತಿಯ ಟಿ.ಟಿ.ಡಿ.ದಾಸಸಾಹಿತ್ಯ ಪ್ರಾಜೆಕ್ಟನ ವಿಶೇಷಾಧಿಕಾರಿಗಳಾದ ವಿದ್ವಾನ್
ಆನಂದತೀರ್ಥಾಚಾರ್ಯ ಪಗಡಾಲ, ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ ಮಂತ್ರಾಲಯದ ಸಂಚಾಲಕರಾದ ಕೆ.ಅಪ್ಪಣ್ಣಾಚಾರ, ಕರ್ನಾಟಕ ಇತಿಹಾಸ ಅಕಾಡೆಮಿ ಯ ಅಧ್ಯಕ್ಷರಾದ ಡಾ.ದೇವರಕೊಂಡಾರೆಡ್ಡಿ, ಮಾತನಾಡಿದರು. ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಯವರು ಬರೆದ ಸಮುನ್ನತಾ ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಪ್ರಾರ್ಥನೆ ಸುಳಾದಿ ಹನುಮೇಶಾಚಾರ್ಯ, ಸ್ವಾಗತ ಗುಂಡೂರು ಪವನ್ ಕುಮಾರ್, ಪ್ರಾಸ್ತಾವಿಕ ಭಾಷಣವನ್ನು ಮುತ್ತಿಗೆ ಶ್ರೀನಿವಾಸಾಚಾರ ,ನಿರೂಪಣೆಯನ್ನು ಶ್ರೀನಿವಾಸ ನವಲಗುಂದ ನೆರವೇರಿಸಿದರು.
Comments
Post a Comment