ಕರ್ನಾಟಕ ಸಂಘ: ಮನಸೆಳೆದ ವಿದ್ವಾನ್ ಗಣೇಶ ಹಾಗೂ ಜಿ .ಎಸ್. ಮಂಜುನಾಥ ಇವರ ಗಮಕ ಕಾರ್ಯಕ್ರಮ
ಕರ್ನಾಟಕ ಸಂಘ: ಮನಸೆಳೆದ ವಿದ್ವಾನ್ ಗಣೇಶ ಹಾಗೂ ಜಿ .ಎಸ್. ಮಂಜುನಾಥ ಇವರ ಗಮಕ ಕಾರ್ಯಕ್ರಮ
ರಾಯಚೂರು,ಆ.24- ಕರ್ನಾಟಕ ಸಂಘದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ ಮೈಸೂರಿನ ಪರಂಪರೆ ಸಂಸ್ಥೆ, ರಾಯಚೂರಿನ ಕರ್ನಾಟಕ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಆಶ್ರಯದಲ್ಲಿ ನಡೆಯುತ್ತಿರುವ ಮಹಾಕವಿ ರಾಘವಾಂಕನ ಹರಿಶ್ಚಂದ್ರ ಕಾವ್ಯದ ಗಮಕ ಕಾರ್ಯಕ್ರಮದಲ್ಲಿ ವಿದ್ವಾನರಾದ ಶ್ರೀ ಗಣೇಶ ಉಡುಪ, ಹಾಗೂ ಜಿ. ಎಸ್. ಮಂಜುನಾಥ್ ಇವರು ಕರ್ನಾಟಕ ಸಂಘದಲ್ಲಿ ಪ್ರಸ್ತುತಪಡಿಸಿದ ಗಮಕ ಕಾರ್ಯಕ್ರಮ ಸುಂದರವಾಗಿ ಮೂಡಿಬಂದಿತು.
ಈ ಗಮಕದಲ್ಲಿ ರಾಘವಾಂಕನ ಹರಿಶ್ಚಂದ್ರನ ಕಾವ್ಯದಲ್ಲಿ ಬರುವ ಹರಿಶ್ಚಂದ್ರನ ರಾಜ್ಯ ಸಮರ್ಪಣೆ, ಪುತ್ರ, ಆತ್ಮ ವಿತ್ರಯ ರೋಹಿತಾಶ್ವ ಮರಣ, ಚಂದ್ರಮತಿಯ ದುಃಖ ಮುಂತಾದ ವಿಷಯಗಳನ್ನು ವಾಚನಕಾರರಾದ ವಿದ್ವಾನ ಗಣೇಶ್ ಉಡುಪಾವರು ಸುಶ್ರಾವ್ಯವಾಗಿ ವಾಚನ ಮಾಡಿದರು, ವಿದ್ವಾನರಾದ ಸಿ. ಎಸ್. ಮಂಜುನಾಥ್ ಅವರು ಆಕರ್ಷಣೀಯವಾಗಿ ವ್ಯಾಖ್ಯಾನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಮುರಳಿಧರ ಕುಲಕರ್ಣಿ ಎಲ್ಲರನ್ನೂ ಸ್ವಾಗತಿಸಿ ಗಮಕಿಗಳನ್ನು ಪರಿಚಯಿಸಿದರು.
ಈ ಕಾರ್ಯಕ್ರಮದಲ್ಲಿ ಪರಂಪರೆ ಸಂಸ್ಥೆಯ ಮೈಸೂರಿನ ಪಿ.ಕೃಷ್ಣಕುಮಾರ್, ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ನಂದಾಪೂರು ಶ್ರೀನಿವಾಸ, ಡಾ. ಶೀಲಾ ದಾಸ್, ಬಿ.ಜಿ. ಹುಲಿ, ಆಂಜನೇಯ ಜಾಲಿಬೆಂಚಿ, ಜಿ.ಬಿ ಕುಲಕರ್ಣಿ, ರಮಕಾಂತ್ ಕುಲಕರ್ಣಿ, ಕೋಮಲ, ವಿದ್ಯಾ ಕುಲಕರ್ಣಿ ಮುಂತಾದ ಆಸಕ್ತರು ಉಪಸ್ಥಿತರಿದ್ದರು.
Comments
Post a Comment